Rajinikanth and Kamal Haasan New Movie Announced-47 ವರ್ಷಗಳ ಬಳಿಕ ಒಂದಾದ ಕಮಲ್-ರಜನೀಕಾಂತ್
Kamal Haasan-Rajinikanth: ರಜನೀಕಾಂತ್ ಮತ್ತು ಕಮಲ್ ಹಾಸನ್ ಹಲವು ವರ್ಷಗಳಿಂದಲೂ ಸೂಪರ್ ಸ್ಟಾರ್ ನಟರಾಗಿರುವ ಜೊತೆಗೆ ಬಲು ಆತ್ಮೀಯ ಗೆಳೆಯರು ಎಂಬದು ವಿಶೇಷ. ಆರಂಭದ ಕೆಲವು ವರ್ಷ ಒಟ್ಟಿಗೆ ನಟಿಸಿದ ರಜನೀಕಾಂತ್ ಮತ್ತು ಕಮಲ್ ಹಾಸನ್ ಸ್ಟಾರ್ ನಟರುಗಳು ಎನಿಸಿಕೊಂಡ ಬಳಿಕ ಒಟ್ಟಿಗೆ ನಟಿಸಿದ್ದಿಲ್ಲ. ಇದೀಗ ಬರೋಬ್ಬರಿ 47 ವರ್ಷಗಳ ಬಳಿಕ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದಾರೆ ಆದರೆ ಒಂದು ಅನುಮಾನ ಮೂಡಿದೆ ಈ ಸಿನಿಮಾನಲ್ಲಿ ನಾಯಕ ಯಾರು?

Read this :India Predicted Playing VS South Africa-ಬದಲಾಗಲಿದೆಯಾ ಟೀಮ್ ಇಂಡಿಯಾ ಪ್ಲೇಯಿಂಗ್ |Kannada Folks
ರಜನೀಕಾಂತ್ (Rajinikanth) ಮತ್ತು ಕಮಲ್ ಹಾಸನ್ ಭಾರತ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ ನಟರು. ಬಹುತೇಕ ಒಟ್ಟಿಗೆ ಚಿತ್ರರಂಗಕ್ಕೆ ಕಾಲಿಟ್ಟ ಇವರು ದಶಕಗಳಿಂದಲೂ ಸ್ಟಾರ್ ಗಿರಿಯನ್ನು ಅನುಭವಿಸುತ್ತಿದ್ದಾರೆ. ಬೇರೆ ಚಿತ್ರರಂಗಗಳಲ್ಲಿ ಸ್ಟಾರ್ ನಟರುಗಳ ನಡುವೆ ಪರಸ್ಪರ ಸ್ಪರ್ಧೆ, ವೈರತ್ನ ಇದ್ದರೆ ರಜನೀಕಾಂತ್ ಮತ್ತು ಕಮಲ್ ಹಾಸನ್ ಹಲವು ವರ್ಷಗಳಿಂದಲೂ ಬಲು ಆತ್ಮೀಯ ಗೆಳೆಯರು ಎಂಬದು ವಿಶೇಷ. ಆರಂಭದ ಕೆಲವು ವರ್ಷ ಒಟ್ಟಿಗೆ ನಟಿಸಿದ ರಜನೀಕಾಂತ್ ಮತ್ತು ಕಮಲ್ ಹಾಸನ್ ಸ್ಟಾರ್ ನಟರುಗಳು ಎನಿಸಿಕೊಂಡ ಬಳಿಕ ಒಟ್ಟಿಗೆ ನಟಿಸಿದ್ದಿಲ್ಲ. ಇದೀಗ ಬರೋಬ್ಬರಿ 47 ವರ್ಷಗಳ ಬಳಿಕ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದಾರೆ ಆದರೆ ಒಂದು ಅನುಮಾನ ಮೂಡಿದೆ ಈ ಸಿನಿಮಾನಲ್ಲಿ ನಾಯಕ ಯಾರು?
ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ನಟಿಸಲಿರುವ ಸಿನಿಮಾವನ್ನು ‘ಜೈಲರ್’ ಸಿನಿಮಾ ಖ್ಯಾತಿಯ ನಿರ್ದೇಶಕ ನೆಲ್ಸನ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾಕ್ಕೆ ಸದ್ಯಕ್ಕೆ ‘ಕೆಎಚ್-ಆರ್ಕೆ’ ಎಂದು ತಾತ್ಕಾಲಿಕ ಹೆಸರಿಡಲಾಗಿದ್ದು, ಸಿನಿಮಾದ ಘೋಷಣೆಗೆಂದು ಒಂದು ತಮಾಷೆಯಾದ ಪ್ರೋಮೊ ಸಹ ಬಿಡುಗಡೆ ಮಾಡಲಾಗಿದೆ. ಈ ಪ್ರೊಮೊ ವಿಡಿಯೋ ಎಷ್ಟು ಮಜವಾಗಿದೆ ಎಂದರೆ, ಇಲ್ಲಿ ಸಿನಿಮಾದ ಕಥೆಗಿಂತ ಹೆಚ್ಚಾಗಿ ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ಅವರ ಗೊಂದಲವೇ ಹೈಲೈಟ್.
ವಿಡಿಯೋದ ಆರಂಭದಲ್ಲಿ ನೆಲ್ಸನ್ ಕಾರಿಡಾರ್ನಲ್ಲಿ ಅತ್ತಿತ್ತ ಅಡ್ಡಾಡುತ್ತಾ, ‘ಯಾರ ರೂಮಿಗೆ ಮೊದಲು ಹೋಗಲಿ? ರಜನಿ ಸಾರ್ ರೂಮಿಗೋ ಅಥವಾ ಕಮಲ್ ಸಾರ್ ರೂಮಿಗೋ?’ ಎಂದು ತಲೆ ಕೆರೆದುಕೊಳ್ಳುತ್ತಿರುತ್ತಾರೆ. ಅಷ್ಟರಲ್ಲಿ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಎಂಟ್ರಿ ಕೊಟ್ಟು, “ಗುರುಗಳೇ, ಯಾವ ರಾಗ ಸೆಲೆಕ್ಟ್ ಮಾಡಲಿ?” ಎಂದು ಇನ್ನೊಂದು ಕನ್ಫ್ಯೂಷನ್ ಎಸೆಯುತ್ತಾರೆ. ಪಾಪ ನೆಲ್ಸನ್, ಇಬ್ಬರು ಸೂಪರ್ಸ್ಟಾರ್ಗಳನ್ನು ಮ್ಯಾನೇಜ್ ಮಾಡೋಕೆ ಪಡುತ್ತಿರುವ ಪಾಡು ನೋಡಿ ಪ್ರೇಕ್ಷಕರು ನಗುವಂತಿದೆ.
ವಿಡಿಯೋ ಮುಂದುವರೆದಂತೆ, ರಜನೀ ಮತ್ತು ಕಮಲ್ ಅವರುಗಳು ಒಬ್ಬರಿಗಿಂತಲೂ ಇನ್ನೊಬ್ಬರು ಸ್ಟೈಲ್ ಆಗಿ ಕಾಣಬೇಕು ಎಂದು ಸ್ಪರ್ಧೆಗೆ ಬಿದ್ದವರಂತೆ ತೋರಿಸಲಾಗಿದೆ. ವಿಡಿಯೋದ ಕೊನೆಯಲ್ಲಿ ಅಸಲಿ ಟ್ವಿಸ್ಟ್ ಇದೆ. ಇಬ್ಬರೂ ಲೆಜೆಂಡರಿ ನಟರು ಫುಲ್ ರೆಟ್ರೋ ಸ್ಟೈಲ್ನಲ್ಲಿ, ಲೆದರ್ ಜಾಕೆಟ್ ತೊಟ್ಟು ಮಸ್ತ್ ಆಗಿ ನಡೆದುಕೊಂಡು ಬರುತ್ತಾರೆ. ವಿಂಟೇಜ್ ಮರ್ಸಿಡೀಜ್ ಕಾರಿನಲ್ಲಿ ಕಮಲ್ ಹಾಸನ್ ಡ್ರೈವಿಂಗ್ ಸೀಟಿನಲ್ಲಿ ಕೂತರೆ, ರಜನಿ ಪಕ್ಕದ ಸೀಟಿನಲ್ಲಿ ಆಸೀನರಾಗುತ್ತಾರೆ. ಇವರ ಹಿಂಬದಿಯ ಸೀಟಿನಲ್ಲಿ ನೆಲ್ಸನ್ ಮತ್ತು ಅನಿರುದ್ಧ್ ಇರುತ್ತಾರೆ. ಈ ಸಮಯದಲ್ಲಿ ಇಬ್ಬರೂ ಗಂಭೀರವಾಗಿ ನೆಲ್ಸನ್ ಕಡೆ ನೋಡಿ, ‘ಅಂದಹಾಗೆ, ನಮ್ಮಿಬ್ಬರಲ್ಲಿ ಈ ಸಿನಿಮಾಕ್ಕೆ ಹೀರೋ ಯಾರು?’ ಎಂದು ಕೇಳುತ್ತಾರೆ. ಇಬ್ಬರು ಸ್ಟಾರ್ ನಟರ ಈ ಪ್ರಶ್ನೆಗೆ ನೆಲ್ಸನ್ ಮತ್ತಷ್ಟು ಗಾಬರಿ ಆಗುತ್ತಾರೆ.
ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಏಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಜನೀಕಾಂತ್ ಅವರ ಮೊದಲ ಸಿನಿಮಾ ‘ಅಪೂರ್ವರಾಗಂಗಳ್’ನಲ್ಲಿ ಕಮಲ್ ಹಾಸನ್ ನಾಯಕ. ಆ ಬಳಿಕ ‘ಮೂದ್ರು ಮುದಿಚ್ಚು’, ‘ಆವರ್ಗಳ್’, ‘ಪದಿನಾರು ವಯತ್ತಿನಿಲೆ’, ‘ಇಳಮಾಯ್ ಊಂಜಿಲ್ ಆಡುಕಿರಾತ್ತು’, ‘ನಿನ್ನೈತಾಲೆ ಇನಿಕ್ಕುಂ’ ಮತ್ತು 1979 ರಲ್ಲಿ ಬಿಡುಗಡೆ ಆದ ‘ಅಲ್ಲಾವುದ್ದೀನ್ ಅಲ್ಬುತ ವಿಲಕ್ಕುಂ’ ಕಮಲ್ ಹಾಗೂ ರಜನೀಕಾಂತ್ ಒಟ್ಟಿಗೆ ನಟಿಸಿದ ಕೊನೆಯ ಸಿನಿಮಾ. ಅದಾದ ಬಳಿಕ ಈ ಇಬ್ಬರು ಒಟ್ಟಿಗೆ ನಟಿಸಿರಲೇ ಇಲ್ಲ ಇದೀಗ 47 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಕಮಲ್ ಹಾಸನ್ ಅವರೇ ಬಂಡವಾಳ ಹೂಡುತ್ತಿದ್ದಾರೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


