HomeNewsRahul Gandhi VS PM Modi - ರಾಜಿ ಮಾಡಿಕೊಂಡ ಪ್ರಧಾನಿ ದೇಶ ನಡೆಸಲು ಅಸಮರ್ಥ

Rahul Gandhi VS PM Modi – ರಾಜಿ ಮಾಡಿಕೊಂಡ ಪ್ರಧಾನಿ ದೇಶ ನಡೆಸಲು ಅಸಮರ್ಥ

Rahul Gandhi VS PM Modi - ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Rahul Gandhi VS PM Modi – ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

 

12 ವರ್ಷಗಳಲ್ಲಿ ದೇಶವನ್ನು ಇಂತಹ ಸ್ಥಿತಿಗೆ ತಳ್ಳಲಾಗಿದೆ. ಈಗ ಜನರಿಗೆ ಏನು ಖರೀದಿಸಬೇಕು, ಎಲ್ಲಿ ಹೋಗಬೇಕು ಎಂಬುದನ್ನೂ ಸರ್ಕಾರ ಹೇಳುವ ಪರಿಸ್ಥಿತಿ ಬಂದಿದೆ. ತಮ್ಮ ವೈಫಲ್ಯದಿಂದ ತಪ್ಪಿಸಿಕೊಳ್ಳಲು ಸರ್ಕಾರ ಹೊಣೆಗಾರಿಕೆಯನ್ನು ಜನರ ಮೇಲೆ ಹಾಕುತ್ತಿದೆ.

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಎದುರಿಸಲು ಜನರು ಇಂಧನ ಬಳಕೆ ಕಡಿಮೆ ಮಾಡಬೇಕು, ಚಿನ್ನ ಖರೀದಿ ಹಾಗೂ ವಿದೇಶ ಪ್ರವಾಸವನ್ನು ಮುಂದೂಡಬೇಕು ಎಂದು ಕರೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಮೋದಿ ಜೀ ಜನರಿಗೆ ತ್ಯಾಗ ಮಾಡಲು ಕರೆ ನೀಡಿದ್ದಾರೆ. ಚಿನ್ನ ಖರೀದಿಸಬೇಡಿ, ವಿದೇಶಕ್ಕೆ ಹೋಗಬೇಡಿ, ಪೆಟ್ರೋಲ್ ಕಡಿಮೆ ಬಳಸಿ, ರಸಗೊಬ್ಬರ ಹಾಗೂ ಅಡುಗೆ ಎಣ್ಣೆ ಬಳಕೆಯನ್ನು ಇಳಿಸಿ, ಮೆಟ್ರೋ ಬಳಸಿರಿ, ವರ್ಕ್ ಫ್ರಮ್ ಹೋಮ್ ಮಾಡಿ ಎಂದಿದ್ದಾರೆ. ಇವು ಸಲಹೆಗಳ ಮಾತಲ್ಲ, ಸರ್ಕಾರದ ವೈಫಲ್ಯದ ಸಾಕ್ಷಿ ಎಂದು ಟೀಕಿಸಿದ್ದಾರೆ.

ಸತ್ಯಕ್ಕೆ ಹೆದರಿ, ಸುಳ್ಳಿನಲ್ಲಿ ಆಶ್ರಯ: ರಾಜ್ಯಸಭೆಯಲ್ಲಿನ ಪ್ರಧಾನಿ ಭಾಷಣದ ವಿರುದ್ಧ ರಾಹುಲ್ ಕಿಡಿ!

Read here: PM Modi: ಬೆಂಗಳೂರಿನಲ್ಲಿ ಮೋದಿ ಭೇಟಿಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 18 ಅಂಶಗಳ ಜ್ಞಾಪಕ ಪತ್ರ ಸಲ್ಲಿಕೆ

“12 ವರ್ಷಗಳಲ್ಲಿ ದೇಶವನ್ನು ಇಂತಹ ಸ್ಥಿತಿಗೆ ತಳ್ಳಲಾಗಿದೆ. ಈಗ ಜನರಿಗೆ ಏನು ಖರೀದಿಸಬೇಕು, ಎಲ್ಲಿ ಹೋಗಬೇಕು ಎಂಬುದನ್ನೂ ಸರ್ಕಾರ ಹೇಳುವ ಪರಿಸ್ಥಿತಿ ಬಂದಿದೆ. ತಮ್ಮ ವೈಫಲ್ಯದಿಂದ ತಪ್ಪಿಸಿಕೊಳ್ಳಲು ಸರ್ಕಾರ ಹೊಣೆಗಾರಿಕೆಯನ್ನು ಜನರ ಮೇಲೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಇವರು ರಾಜಿ ಮಾಡಿಕೊಂಡ ಪ್ರಧಾನಮಂತ್ರಿಯಾಗಿದ್ದು, ದೇಶ ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆಂದು ಕಿಡಿಕಾರಿದ್ದಾರೆ.

ಇದರ ನಡುವೆ ಕಾಂಗ್ರೆಸ್ ಪಕ್ಷವೂ ಪ್ರಧಾನಿ ವಿರುದ್ಧ ತೀವ್ರ ಟೀಕೆ ನಡೆಸಿದ್ದು, ಅಮೆರಿಕಾ–ಇರಾನ್ ಯುದ್ಧ ಮೂರು ತಿಂಗಳು ಕಳೆದರೂ ದೇಶದ ಇಂಧನ ಭದ್ರತೆ ಕುರಿತು ಸರ್ಕಾರದ ಬಳಿ ಸ್ಪಷ್ಟ ಯೋಜನೆ ಇಲ್ಲ ಎಂದು ಆರೋಪಿಸಿದೆ.

ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ದೇಶದ ವಿದೇಶಿ ವಿನಿಮಯದ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಹೇಳಿ, ಪೆಟ್ರೋಲ್–ಡೀಸೆಲ್ ಬಳಕೆ ಕಡಿಮೆ ಮಾಡುವುದು, ಮೆಟ್ರೋ ಮತ್ತು ಕಾರ್‌ಪೂಲ್ ಬಳಸುವುದು, ವಿದ್ಯುತ್ ವಾಹನಗಳಿಗೆ ಆದ್ಯತೆ ನೀಡುವುದು, ಚಿನ್ನ ಖರೀದಿ ಮತ್ತು ವಿದೇಶ ಪ್ರವಾಸವನ್ನು ಒಂದು ವರ್ಷ ಮುಂದೂಡುವಂತೆ ಕರೆ ನೀಡಿದ್ದರು.

ಇದೇ ವೇಳೆ ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡುವುದು, ರಾಸಾಯನಿಕ ಗೊಬ್ಬರ ಬಳಕೆ ಇಳಿಸುವುದು, ನೈಸರ್ಗಿಕ ಕೃಷಿ ಹಾಗೂ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡುವಂತೆ ಪ್ರಧಾನಿ ಸಲಹೆ ನೀಡಿದ್ದರು.

Read here: Rahul Gandhi Slams Govt Over US Trade Deal  ಅಮೆರಿಕಾ ಒಪ್ಪಂದದ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ

 

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments