HomeNewsPune Metro Tunnel Breach-ಮೆಟ್ರೋ ಸುರಂಗದಲ್ಲಿ 6 ಇಂಚು ರಂಧ್ರ

Pune Metro Tunnel Breach-ಮೆಟ್ರೋ ಸುರಂಗದಲ್ಲಿ 6 ಇಂಚು ರಂಧ್ರ

Pune Metro hit by borewell drilling mishap

Pune Metro Tunnel Breach-ಮೆಟ್ರೋ ಸುರಂಗದಲ್ಲಿ 6 ಇಂಚು ರಂಧ್ರ

ಪುಣೆಯಲ್ಲಿ ಬೋರ್‌ವೆಲ್ ಕೊರೆಯುವಾಗ ಮೆಟ್ರೋ ಸುರಂಗ ಮಾರ್ಗಕ್ಕೆ 6 ಇಂಚಿನ ರಂಧ್ರ ಸೃಷ್ಟಿಯಾದ ಘಟನೆ ವರದಿಯಾಗಿದೆ. ಈ ನಿರ್ಲಕ್ಷ್ಯದ ಕೃತ್ಯದಿಂದ ಮೆಟ್ರೋ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗಿದ್ದು, ಗುತ್ತಿಗೆದಾರ ಮತ್ತು ಮನೆ ಮಾಲೀಕರ ವಿರುದ್ಧ ಖಡಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೆಟ್ರೋ ಮಾರ್ಗಗಳ ಬಳಿ ಕೊರೆಯುವಾಗ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.ನಮ್ಮ ಮೆಟ್ರೋ: ಪಿಂಕ್ ಲೈನ್‌ಗೆ ಮೊದಲ ಚಾಲಕರಹಿತ ರೈಲು ಅನಾವರಣ

Raed this : Gopalakrishna Naik Attacked-ಕಾಂಗ್ರೆಸ್ ಮುಖಂಡನ ಮೇಲೆ ಚಾಕು ದಾಳಿ

ಪುಣೆ, ಮಾರ್ಚ್​ 25: ಮೆಟ್ರೋ(Metro) ಮಾರ್ಗದ ಮೇಲೆ ಬೋರ್​ವೆಲ್ ಕೊರೆಯಲು ಹೋಗಿ ಕೆಳಗೆ ಸುರಂಗ ಮಾರ್ಗದಲ್ಲಿ 6 ಇಂಚುಗಳಷ್ಟು ರಂಧ್ರ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಖಡಕ್ ಪೊಲೀಸರು ಬೋರ್‌ವೆಲ್ ಗುತ್ತಿಗೆದಾರ ಮತ್ತು ಮನೆಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಿವಾಜಿ ರಸ್ತೆಯ ಬಳಿ ಘಟನೆ ನಡೆದಿದೆ. ಶಿವಾಜಿನಗರ ಮತ್ತು ಸ್ವರ್ಗೇಟ್ ನಡುವಿನ ಭೂಗತ ಕಾರಿಡಾರ್‌ನ ಭಾಗವಾಗಿರುವ ಮಂಡೈ ಮೆಟ್ರೋ ನಿಲ್ದಾಣದ ಬಳಿಯ ಸುರಂಗ ರಚನೆಗೆ ಕೊರೆಯುವಿಕೆಯು ಹಾನಿಯನ್ನುಂಟುಮಾಡಿದೆ ಎಂದು ವರದಿಯಾಗಿದೆ.

ಕೊರೆಯುವಿಕೆಯು 80 ರಿಂದ 100 ಅಡಿ ಆಳದಲ್ಲಿರುವ ಮೆಟ್ರೋ ಸುರಂಗದಲ್ಲಿ ಸುಮಾರು ಆರು ಇಂಚು ವ್ಯಾಸದ ರಂಧ್ರವನ್ನು ಸೃಷ್ಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊರೆಯುವಿಕೆಯು ಮೆಟ್ರೋ ಮಾರ್ಗದ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮೆಟ್ರೋ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ, ಬೋರ್​ವೆಲ್ ಕೊರೆಯುವಿಕೆಯನ್ನು ಸ್ಥಗಿತಗೊಳಿಸಿದ್ದಾರೆ.ಮೆಟ್ರೋ ಅಧಿಕಾರಿ ಶಾಂತನು ಗೋರಟ ಅವರು ಮಾತನಾಡಿ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 125 ಮತ್ತು 324 ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ, ಇದು ಜೀವಕ್ಕೆ ಅಪಾಯವನ್ನುಂಟುಮಾಡುವ ನಿರ್ಲಕ್ಷ್ಯದ ಕೃತ್ಯಗಳಿಗೆ ಇದು ಸಂಬಂಧಿಸಿದೆ.

ಗುತ್ತಿಗೆದಾರ ಮತ್ತು ಮನೆಮಾಲೀಕ ಇಬ್ಬರೂ ಅಲ್ಲೇ ಕೆಲಗಡೆ ಮೆಟ್ರೋ ಸುರಂಗ ಮಾರ್ಗ ಇರುವ ಬಗ್ಗೆ ಅರಿತಿದ್ದರು, ಆದರೂ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸುರಂಗ ಮಾರ್ಗಗಳ ಬಳಿ ಕೊರೆಯುವ ಬಗ್ಗೆ ಈಗಾಗಲೇ ಏಜೆನ್ಸಿಗಳು ಮತ್ತು ನಾಗರಿಕರಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಮಹಾ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ಸುರಂಗ ಮಾರ್ಗಗಳ ಉದ್ದಕ್ಕೂ ಬೋರ್‌ವೆಲ್‌ಗಳನ್ನು ಅಗೆಯುವಾಗ ಮುನ್ನೆಚ್ಚರಿಕೆ ವಹಿಸುವಂತೆ ನಾವು ಅಂತರ್ಜಲ ಸಮೀಕ್ಷಾ ಸಂಸ್ಥೆ ಮತ್ತು ನಾಗರಿಕ ಆಡಳಿತಕ್ಕೆ ಸೂಚನೆ ನೀಡುತ್ತಿದ್ದೆವು. ನಮಗೆ 24 ಅಡಿ ಆಳದಲ್ಲಿ ನೀರಿನ ವರತೆ ಇರುವುದು ಗೊತ್ತಾಗಿತ್ತು, ಆದರೆ ಅದು ಮೆಟ್ರೋ ಸುರಂಗ ಮಾರ್ಗವನ್ನು ಕೊರೆಯಬಹುದು ಎನ್ನುವ ಊಹೆ ನಮಗಿರಲಿಲ್ಲ. ನಾವು ಅಪರಾಧಿಗಳಲ್ಲ. ಅಧಿಕಾರಿಗಳು ನಮ್ಮೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಬೇಕಿತ್ತು ಎಂದು ಮನೆ ಮಾಲೀಕ ಹೇಳಿಕೆ ನೀಡಿದ್ದಾರೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments