HomeNewsPremium +₹2, regular same-ಪ್ರೀಮಿಯಂ ₹2 ಏರಿಕೆ, ಸಾಮಾನ್ಯ ಸ್ಥಿರ |Kannada Folks

Premium +₹2, regular same-ಪ್ರೀಮಿಯಂ ₹2 ಏರಿಕೆ, ಸಾಮಾನ್ಯ ಸ್ಥಿರ |Kannada Folks

High-octane fuel cost rises while regular petrol price stays unchanged

Premium +₹2, regular same-ಪ್ರೀಮಿಯಂ ₹2 ಏರಿಕೆ, ಸಾಮಾನ್ಯ ಸ್ಥಿರ

Premium petrol rate rise by over Rs 2: ಪ್ರೀಮಿಯಮ್ ಮಟ್ಟದ ಪೆಟ್ರೋಲ್​ನ ಬೆಲೆಯಲ್ಲಿ ಏರಿಕೆ ಆಗಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಈ ಪ್ರೀಮಿಯಮ್ ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 2.30 ರೂನಷ್ಟು ಏರಿಕೆ ಮಾಡಿವೆ. ಆದರೆ, ಮಾಮೂಲಿಯ ಪೆಟ್ರೋಲ್ ಬೆಲೆಯಲ್ಲಿ ಯಾವ ಹೆಚ್ಚಳ ಮಾಡಲಾಗಿಲ್ಲ.Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ.  ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ | Petrol Price Hike Alert: Fuel Prices  May Rise by ₹20–22; Check ...

Read this : US Pays Migrants to Leave-ಅಮೆರಿಕ ಹೋಗುವವರಿಗೆ ಹಣ ಆಫರ್ |Kannada Folks

ನವದೆಹಲಿ, ಮಾರ್ಚ್ 20: ಭಾರತದಲ್ಲಿ ಪ್ರೀಮಿಯಮ್ ಪೆಟ್ರೋಲ್ ದರಗಳನ್ನು (Premium Petrol Price) ಏರಿಸಲಾಗಿದೆ. ವರದಿಗಳ ಪ್ರಕಾರ, ಪ್ರೀಮಿಯಮ್ ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 2.30 ರೂನಷ್ಟು ಹೆಚ್ಚಳ ಮಾಡಲಾಗಿದೆ. ಜಾಗತಿಕವಾಗಿ ತೈಲ ಸರಬರಾಜು ವ್ಯತ್ಯಯಗೊಂಡಿರುವ ಪರಿಣಾಮ ಈ ಏರಿಕೆ ಆಗಿರಬಹುದು. ಆದರೆ, ಅಧಿಕೃತವಾಗಿ ಯಾವ ಕಾರಣವನ್ನೂ ಕೊಡಲಾಗಿಲ್ಲ. ಆದರೆ, ಮಾಮೂಲಿಯ ಅನ್​ಲೆಡೆಡ್ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಡೀಸಲ್ ಬೆಲೆಯಲ್ಲೂ ಏರಿಕೆ ಆಗಿಲ್ಲ.

ಪ್ರೀಮಿಯಮ್ ಪೆಟ್ರೋಲ್ ಹೈ ಆಕ್ಟೇನ್ ಪೆಟ್ರೋಲ್ ಆಗಿದೆ. ಇದು ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸಿ, ಮೈಲೇಜನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಬೆಲೆ ಮಾಮೂಲಿಯ ಪೆಟ್ರೋಲ್​ಗಿಂತ ತುಸು ಹೆಚ್ಚಿನದ್ದಿರುತ್ತದೆ. ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್, ಎಚ್​ಪಿಸಿಎಲ್ ಈ ಬೆಲೆ ಏರಿಕೆ ಮಾಡಿವೆ.

ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 102.96 ರೂ ಇದೆ. ಡೀಸಲ್ ಬೆಲೆ 90.99 ರೂ ಇದೆ. ಈ ಬೆಲೆಗಳಲ್ಲಿ ಬದಲಾವಣೆ ಆಗಿಲ್ಲ. ಪ್ರೀಮಿಯಮ್ ಪೆಟ್ರೋಲ್​ನ ಬೆಲೆ 2.09ರೂನಿಂದ 2.35 ರೂವರೆಗೆ ಏರಿಕೆ ಆಗಿದೆ. ಐಒಸಿಎಲ್​ನ ಎಕ್ಸ್​ಪಿ95, ಎಚ್​ಪಿಸಿಎಲ್​ನ ಪವರ್ ಹಾಗು ಬಿಪಿಸಿಎಲ್​ನ ಸ್ಪೀಡ್ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳ ಆಗಿದೆ.

ತೈಲ ಬೆಲೆ ಏರಿಕೆಯಿಂದ ನಷ್ಟ ಕಾಣುತ್ತಿರುವ ಒಎಂಸಿಗಳು

ಇರಾನ್ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಬೆಲೆಗಳು ಬ್ಯಾರಲ್​ಗೆ 65 ಡಾಲರ್ ಇದ್ದದ್ದು 100 ಡಾಲರ್ ಗಡಿ ದಾಟಿವೆ. ಕಚ್ಛಾ ತೈಲ ಬೆಲೆ ಏರಿಕೆಯಾದರೆ ಭಾರತದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಆಗಬೇಕಿತ್ತು. ಆದರೆ, ಸರ್ಕಾರವು ಜನಸಾಮಾನ್ಯರು ಮತ್ತು ಉದ್ಯಮಗಳಿಗೆ ಹೊರೆಯಾಗದಿರಲಿ ಎಂದು ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡದಿರುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ ನಿಬಂಧನೆ ಹಾಕಿದೆ.

ಇದರ ಹೊರೆ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳ ಮೇಲೆ ಬಿದ್ದಿದೆ. ಕಚ್ಛಾ ತೈಲ ಬೆಲೆಯಲ್ಲಿ 10 ಡಾಲರ್ ಏರಿಕೆಯಾದಂತೆ ಪೆಟ್ರೋಲ್ ಲಾಭದಲ್ಲಿ 6.3 ರೂ ಕುಸಿತ ಆಗುತ್ತದೆ ಎನ್ನುವ ಲೆಕ್ಕಾಚಾರ ಇದೆ.

ಜಾಗತಿಕವಾಗಿ ಬಹಳಷ್ಟು ದೇಶಗಳು ಪೆಟ್ರೋಲ್, ಡೀಸಲ್ ಬೆಲೆಗಳನ್ನು ಏರಿಸಿವೆ. ಭಾರತ ಸೇರಿ ಕೆಲ ದೇಶಗಳು ಮಾತ್ರ ದರ ಏರಿಸಿಲ್ಲ. ಅಮೆರಿಕವು ಪೆಟ್ರೋಲಿಯಂ ಸ್ವಾವಲಂಬನೆ ಹೊಂದಿದ್ದರೂ ಅಲ್ಲಿ ಪೆಟ್ರೋಲ್ ಬೆಲೆ ಶೇ. 20ಕ್ಕಿಂತ ಹೆಚ್ಚಾಗಿದೆ. ಚೀನಾದಲ್ಲಿ ಅತ್ಯಧಿಕ ಏರಿಕೆ ಆಗಿದೆ. ಬ್ರಿಟನ್, ಪಾಕಿಸ್ತಾನ್, ಶ್ರೀಲಂಕಾ ಇತ್ಯಾದಿ ದೇಶಗಳಲ್ಲೂ ಗಣನೀಯವಾಗಿ ಪೆಟ್ರೋಲ್ ಬೆಲೆ ಏರಿಕೆ ಆಗಿದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments