Prabhas and Prashanth Varma Film Halted – ಪ್ರಭಾಸ್ ಮತ್ತು ಪ್ರಶಾಂತ್ ವರ್ಮಾ
ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಮಾತ್ರವಲ್ಲದೆ ಫ್ಲಾಪ್ ಸಹ ಆಗಿದೆ. ಇದಾದ ಬಳಿಕ ಪ್ರಭಾಸ್ ಎದುರು ಒಳ್ಳೆಯ ಸಿನಿಮಾಗಳ ಲೈನ್ ಅಪ್ ಇದೆ. ‘ಫೌಜಿ’, ‘ಸ್ಪಿರಿಟ್’ ‘ಕಲ್ಕಿ 2’ ಮತ್ತು ‘ಸಲಾರ್ 2’ ಸಿನಿಮಾಗಳಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಇವುಗಳ ಜೊತೆಗೆ ಒಂದು ಪೌರಾಣಿಕ ಕತೆ ಆಧರಿತ ಸೂಪರ್ ಹೀರೋ ಸಿನಿಮಾನಲ್ಲಿ ಪ್ರಭಾಸ್ ನಟಿಸಬೇಕಿತ್ತು. ಆದರೆ ಆ ಸಿನಿಮಾ ನಿಂತು ಹೋಗಿದೆ. ಅದಕ್ಕೆ ಪರೋಕ್ಷ ಕಾರಣ ರಿಷಬ್ ಶೆಟ್ಟಿ ಎನ್ನಲಾಗುತ್ತಿದೆ. ಅದು ಹೇಗೆ?
Read this – Congress Became National Shame-ಶೃಂಗಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ
‘ಹನು ಮ್ಯಾನ್’ ಸಿನಿಮಾ ಮೂಲಕ ದೊಡ್ಡ ಹಿಟ್ ಕೊಟ್ಟಿರುವ ಪ್ರಭಾಸ್ ಅವರಿಗಾಗಿ ಸಿನಿಮಾ ಒಂದನ್ನು ನಿರ್ದೇಶಿಸಬೇಕಿತ್ತು. ಆ ಸಿನಿಮಾಕ್ಕೆ ‘ಬಕ‘ ಎಂದು ಹೆಸರು ಸಹ ಇಡಲಾಗಿತ್ತು. ಆದರೆ ಈಗ ಸಿನಿಮಾ ಸ್ಥಗಿತಗೊಂಡಿದೆ ಎಂಬ ಸುದ್ದಿ ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಪ್ರಶಾಂತ್ ಪ್ರಸ್ತುತ ಟಾಲಿವುಡ್ನ ಹಾಟ್ ನಿರ್ದೇಶಕರಲ್ಲಿ ಒಬ್ಬರಾಗಿದ್ದು, ಅವರು ಪ್ರಭಾಸ್ ಅಂಥಹಾ ಸೂಪರ್ ಸ್ಟಾರ್ ಜೊತೆಗೆ ಸೂಪರ್ ಹೀರೋ ಮಾದರಿಯ ಸಿನಿಮಾ ಮಾಡುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದರು ಆದರೆ ಸಿನಿಮಾ ನಿಂತು ಹೋಗಿರುವುದು ಪ್ರಭಾಸ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
‘ಬಕ’ ಸಿನಿಮಾ ನಿಂತು ಹೋದ ಬಗ್ಗೆ ಕೆಲವು ಭಿನ್ನ-ಭಿನ್ನ ರೀತಿಯ ಸುದ್ದಿಗಳು ಟಾಲಿವುಡ್ನಲ್ಲಿ ಹರಿದಾಡುತ್ತಿವೆ. ‘ಬಕ’ ಚಿತ್ರದ ಟೆಸ್ಟ್ ಶೂಟ್ ಇತ್ತೀಚೆಗೆ ನಡೆದಿದ್ದು, ಆದರೆ, ಸಿನಿಮಾದಲ್ಲಿನ ತಮ್ಮ ಲುಕ್ ಮತ್ತು ಒಟ್ಟಾರೆ ಸಿನಿಮಾದ ಲುಕ್ ಆಂಡ್ ಫೀಲ್ ಪ್ರಭಾಸ್ ಅವರಿಗೆ ಅತೃಪ್ತಿ ಉಂಟಾಗಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ಅವರು ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಕಾರಣವೆಂದರೆ ಪ್ರಶಾಂತ್ ವರ್ಮಾ ಇದೀಗ ರಿಷಬ್ ಶೆಟ್ಟಿ ಜೊತೆಗೆ ‘ಜೈ ಹನುಮಾನ್’ ಸಿನಿಮಾ ಪ್ರಾರಂಭ ಮಾಡುತ್ತಿದ್ದು, ಆ ಸಿನಿಮಾದ ಮೇಲೆ ಹೆಚ್ಚು ಗಮನ ಹರಿಸಬೇಕಿರುವ ಕಾರಣ ಅವರೇ ‘ಬಕ’ ಸಿನಿಮಾ ಪ್ರಾಜೆಕ್ಟ್ ಅನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಪ್ರಶಾಂತ್ ವರ್ಮ ಅವರು ಪೌರಾಣಿಕ ಪಾತ್ರಗಳನ್ನು ಆಧರಿಸಿ ಕೆಲವು ಕತೆಗಳನ್ನು ರೆಡಿ ಮಾಡಿಕೊಂಡಿದ್ದು ಅವುಗಳನ್ನು ಸಿನಿಮಾ ಮಾಡಲು ಯೋಜನೆ ಹಾಕಿಕೊಂಡಿದ್ದರು. ಆದರೆ ಅವರ ಈ ಯೋಜನೆಗೆ ಒಂದರ ಮೇಲೊಂದು ಪೆಟ್ಟು ಬೀಳುತ್ತಲೇ ಇದೆ. ಈ ಹಿಂದೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರೊಂದಿಗೆ ಮಾಡಬೇಕಿದ್ದ ‘ರಾಕ್ಷಸ’ ಚಿತ್ರವು ಸೃಜನಶೀಲ ಭಿನ್ನಾಭಿಪ್ರಾಯಗಳಿಂದಾಗಿ ರದ್ದಾಗಿತ್ತು. ಇದಾದ ನಂತರ ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಜ್ಞ ಅವರ ಪದಾರ್ಪಣೆ ಚಿತ್ರದ ಬಗ್ಗೆಯೂ ಗೊಂದಲಗಳು ಏರ್ಪಟ್ಟಿದ್ದವು. ಈಗ ಪ್ರಭಾಸ್ ಅವರಂತಹ ಪ್ಯಾನ್-ಇಂಡಿಯಾ ಸ್ಟಾರ್ ಚಿತ್ರದಿಂದ ಹೊರಬಂದಿರುವುದು ಪ್ರಶಾಂತ್ ವರ್ಮ ಅವರ ವೃತ್ತಿಜೀವನಕ್ಕೆ ಸವಾಲಾಗಿ ಪರಿಣಮಿಸಿದೆ.
Read this – Appointment of District Working President ಜಿಲ್ಲಾ ಘಟಕಗಳಿಗೆ ಕಾರ್ಯಾಧ್ಯಕ್ಷರ ನೇಮಕ |Kannada Folks
‘ಬಕ’ ಸಿನಿಮಾನಲ್ಲಿ ಪ್ರಭಾಸ್ ಅವರು ‘ಬಕಾಸುರ’ನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಇತ್ತು. ಪ್ರಶಾಂತ್ ವರ್ಮ ಅವರ ಕಲ್ಪನೆಯ ಪೌರಾಣಿಕ ಮತ್ತು ಆಧುನಿಕ ಸ್ಪರ್ಶದ ಈ ಕಥೆಯ ಮೇಲೆ ಅಭಿಮಾನಿಗಳು ಬಹಳ ನಂಬಿಕೆ ಇಟ್ಟಿದ್ದರು. ಆದರೆ ‘ಹನು-ಮಾನ್’ ನಿರ್ಮಾಪಕರ ಜೊತೆಗಿನ ಬಜೆಟ್ ಕಿರಿಕ್ ಮತ್ತು ಸರಣಿ ಪ್ರಾಜೆಕ್ಟ್ಗಳು ಕೈತಪ್ಪುತ್ತಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Support Us 


