Welcome to Kannada Folks   Click to listen highlighted text! Welcome to Kannada Folks
HomeNewsPM modi takes holy dip in prayagraj sangam - ಪ್ರಯಾಗ್ರಾಜರ ಸಂಗಮದಲ್ಲಿ ಪವಿತ್ರ...

PM modi takes holy dip in prayagraj sangam – ಪ್ರಯಾಗ್ರಾಜರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ

PM modi takes holy dip in prayagraj sangam - ಪ್ರಯಾಗ್ರಾಜರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ

Spread the love

PM modi takes holy dip in prayagraj sangam – ಪ್ರಯಾಗ್ರಾಜರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ

ಪ್ರಯಾಗ್‌ರಾಜ್‌: 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ  ಅವರಿಂದು ಪುಣ್ಯ ಸ್ನಾನ  ಮಾಡಿದ್ದಾರೆ.ಬೆಳಗ್ಗೆ 11:30 ಗಂಟೆ ಸುಮಾರಿಗೆ ಬೋಟ್‌ ಮೂಲಕ ಪ್ರಯಾಗ್‌ರಾಜ್‌ನ  ತ್ರಿವೇಣಿ ಸಂಗಮ್‌ಘಾಟ್‌ಗೆ ತೆರಳಿದ ಮೋದಿ ಕೊರಳಲ್ಲಿ ರುದ್ರಾಕ್ಷಿ ಮಾಲೆ, ಕೇಸರಿ ಹಾಗೂ ಕಡುನೀಲಿ ವಸ್ತ್ರ ಧರಿಸಿ ಪುಣ್ಯಸ್ನಾನ ಮಾಡಿದ್ದಾರೆ. ಇದೇ ವೇಳೆ ರುದ್ರಾಕ್ಷಿ ಮಾಲೆಯನ್ನು ಹಿಡಿದು ಸೂರ್ಯದೇವ ಹಾಗೂ ಗಂಗಾ ಮಾತೆಗೆ ನಮಿಸಿದ್ದಾರೆ.BREAKING: PM Modi takes holy dip at Triveni Sangam in Maha Kumbh (WATCH)- Asianet Newsable

ಇದಾದ ಬಳಿಕ ತಟದಲ್ಲಿ ನಿಂತು ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ದೇಶದ ಒಳಿತಾಗಿ ಪ್ರಾರ್ಥಿಸಿದ್ದಾರೆ.ಹಿಂದೂಗಳಿಗೆ ಪವಿತ್ರ ದಿನ ಎಂದೇ ಹೇಳಲಾಗುವ ರಥ ಸಪ್ತಮಿಯ ದಿನದಂದು ಪ್ರಧಾನಿಗಳು ಪುಣ್ಯಸ್ನಾನ ಮಾಡಿದ್ದಾರೆ. ಇದಾದ ಬಳಿಕ ಇಲ್ಲಿನ ಸಂತರೊಂದಿಗೆ ಚರ್ಚಿಸಲಿರುವ ಮೋದಿ 12 ಗಂಟೆ ಸುಮಾರಿಗೆ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.PM Modi Takes Holy Dip at Triveni Sangam, Leads Grand Rituals at Maha Kumbh 2025 - Bold News

ಇಂದೇ ಪ್ರಧಾನಿಗಳ ಪುಣ್ಯಸ್ನಾನ ಏಕೆ?:

ಇಂದು ರಥಸಪ್ತಮಿಯ ದಿನವಾಗಿದೆ. ರಥ ಸಪ್ತಮಿ ಹಬ್ಬವನ್ನು ರೈತರಿಗೆ ಸುಗ್ಗಿಯ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನದಿಂದಲೇ ಬೇಸಿಗೆಯೂ ಪ್ರಾರಂಭವಾಗುತ್ತದೆ. ಈ ದಿನವನ್ನು ದಾನ – ಧರ್ಮ ಮಾಡುವುದಕ್ಕೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನದಂದು ದಾನ ಮಾಡುವುದರಿಂದ ಹಿಂದೆ ಮಾಡಿದ ಎಲ್ಲಾ ಪಾಪಗಳು ಮತ್ತು ರೋಗಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡುವ ಸಂಪ್ರದಾಯವಿದೆ. ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ದೇಹದ ಎಲ್ಲಾ ರೋಗಗಳು, ವಿಶೇಷವಾಗಿ ಚರ್ಮಕ್ಕೆ ಸಂಬಂಧಿಸಿದಂತಹ ರೋಗಗಳು ಗುಣವಾಗುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕಾಗಿಯೇ ರಥ ಸಪ್ತಮಿಯನ್ನು ಆರೋಗ್ಯ ಸಪ್ತಮಿ ಎಂದೂ ಕರೆಯುತ್ತಾರೆ. ಹಾಗಾಗಿಯದೇ ಮೋದಿ ದೇಶಕ್ಕೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಪುಣ್ಯಸ್ನಾನ ಮಾಡಿದ್ದಾರೆ ಎಂದು ಜೋತಿಷಿಗಳು ಹೇಳುತ್ತಾರೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!