ಯಾರನ್ನು ಯಾವ ರೀತಿ ಕೊಲ್ಲಬೇಕು?
ಪಾಪಿಲ್ಲನ್ ಮನಸಲ್ಲಿ ಯಾರನ್ನು ಯಾವ ರೀತಿ ಕೊಲ್ಲಬೇಕು, ಯಾರಿಗೆ ಎಸ್ಟು ಹಿoಸೆ ಕೊಡಬೇಕು ಎನ್ನುವ ಆಲೋಚನೆ ದಿನೆ ದಿನೇ ಹೆಚ್ಚಾಗುತ್ತ ಹೋಗುತಿತ್ತು.
ಅವನ ದಿನಗಳು ಅಂಥ ಯೋಜನೆಗಳಲ್ಲೇ ಮುಳುಗಿರುತ್ತಿತ್ತು, ಪೊಲೀಸ್ ಗೆ ಎಷ್ಟು ಶಿಕ್ಷೆ, ಲಾಯರ್ ತಾನು ಗಳಿಸಿದ ವಿದ್ಯೆಯನ್ನ ನನ್ನ ಮೇಲೆ ಪ್ರಯೋಗಿಸಿದಕ್ಕೆ ಯಾವ ಶಿಕ್ಷೆ ಆ ಸುಳ್ಳು ಸಾಕ್ಷಿ ಹೇಳಿದವನು, ನ್ಯಾಯಾಧೀಶರು ಸರಿಯಾದ ನ್ಯಾಯ ಕೊಡಲಿಲ್ಲ ಅವರಿಗೂ ಶಿಕ್ಷೆ, ಎಂದು ತನ್ನ ಆಕ್ರೋಶ ವ್ಯಕ್ತ ಪಡಿಸುತ್ತ ಕೋಣೆಯಲ್ಲಿ ಅತ್ತಿಂದಿತ್ತ ತಿರುಗಾಡುತಿದ್ದ ಅವನ ದಿನಗಳು ಅಂಥಹ ಯೋಚನೆಗಳಲ್ಲೇ ಮುಳುಗುತಿತ್ತು ಎಂದು ಪ್ಯಾಪಿಗೆ ತಿಳಿಯಲು ತುಂಬಾ ಸಮಯ ಹಿಡಿಯಲಿಲ್ಲ.
Read this before – Papillon; the tale of a victim ; Book Review Part 1; K P Poornachandra Tejaswi
ನನ್ನ ಮೇಲೆ ಕಾನೂನೆಂಬ ವ್ಯವಸ್ಥೆ ದ್ರೋಹ ಮಾಡಿ ಆಗಿತ್ತು ಅದರಿಂದ ಹೊರಗೇ ಬರಲೇ ಬೇಕು. ಸಾಕು ಇಷ್ಟು ಯೋಚ್ನೆ ಮಾಡಿದ್ದು ಇನ್ನು 2ವರ್ಷ ಇರುವ ದುಡ್ಡನ್ನೇ ಬಳ್ಸಿ ಹೇಗಾದರೂ ಸರಿ ಇಲ್ಲಿಂದ ಪರರಿಯಾಗಬೇಕು, ಅದಕ್ಕೆ ಜೊತೆಯಾಗಿ ಯಾರು ಸಿಗುವರು ಮತ್ತೆ ಹೇಗೇ ಎಂದು ಯೋಚಿಸುತ್ತಾ ಇರುವ ಸಣ್ಣ ಕೋಣೆಯಲ್ಲೆ ಅತ್ತಿಂದಿತ್ತಾ ನಡೆಯ ತೊಡಗಿದ, ಬಂದಿಖಾನೆ ಪೂರ್ಣ ಮೌನ, ಸಿಗರೇಟ್ ಸೇದುವುದಕ್ಕೆ ಅವಕಾಶವಿದ್ದ ಆ ರೂಮ್ ನಲ್ಲಿ ಪರಾರಿ ಯಗುವ ಆಲೋಚನೆ ಯಲ್ಲೇ ಮುಳುಗಿದ.
ನಂತರ ಬಂದಿಖಾನೆಯಲ್ಲಿ DEGA ಮತ್ತೆ ಸಿಕ್ಕಾಗ ಚಾರ್ಜರ್ ನಾ ಹೇಗೇ ಉಪಯೊಗಿಸಬೇಕು. ದಿನವು ಹೀಗೇ ಶುಚಿಗೋಳಿಸಬೇಕು ಎಂದು ಹೇಳುತ್ತ ಹಣದ ಬಗೆ ಜೋಪಾನ ವಾಗಿರುಯೆಂದು ಎಚ್ಚರಿಸುತಿದ್ದ, DEGAಗೆ ತನ್ನ ಪರಾರಿ ಯಾಗುವ ವಿಚಾರ ತಿಳಿಸಿ ನನ್ನ ಜೊತೆ ಬಾ ಎಂದ.
Story – What Happened to Wynk Music; Story Behind the Screen of Apple
DEGA “ಹುಚ್ಚು ಹಿಡಿದಂತೆ ನಟಿಸಿ ಶಿಕ್ಷೆ ಕಡಿಮೆ ಮಾಡುವ ಉಪಾಯಹೇಳುತ್ತಾನೆ, ಅದಕ್ಕೊಪ್ಪದ PAPPI ಅದಂತು ಅಸಾದ್ಯ ಪೂರ್ಣ ನಂಬಿಕೆ ಇಲ್ಲದ ಆ ಕೆಲ್ಸಕ್ಕಿಂಥ ಗಾಯದ ಜೈಲಿನಿಂದ ತಪ್ಪಿಸಿಕೊಳ್ಳುವುದೆ ಲೇಸು ಎಂದು ತನ್ನ ನಿರ್ಧಾರ ಹೇಳುತ್ತನೆ
“ಹಾಗಲ್ಲ PAPPI ಅಲ್ಲಿರುವ ಖೈದಿಗಳು ನನ್ನ ಬಳಿ ಹಣವಿದೆ ಎಂದು ಚಾರ್ಜರ್ ಗಾಗಿ ಖಂಡಿತಾ ನನ್ನನ್ನು ಕೊಲೆಮಾಡುವ ಪಿತುರಿ ಮಾಡುತ್ತರೆ, ನೀನಿನ್ನು ಪ್ರಾಯದ ಹುಡುಗ ಆದರೆ ನನಗೆ 40 ದಾಟಿದೆ ಅವರಿಂದ ಹಾಗು ದ್ವೀಪದಿಂದ ತಪ್ಪಿಸಿಕೊಳ್ಳುವುದು ಕಷ್ಟ ಎನಿಸುತಿದೆ ”
“ನೋಡು ನನಗೇ ಸಮುದ್ರಯಾನದ ಅನುಭವವಿದೆ ಮತ್ತೆ ಚಿಕ್ಕ ವಯಸ್ಸಿನಿಂದ ಹೊಡೆದಾಟದಲ್ಲಿ ಬೆಳೆದ ನಾನು ನಿನಗೆ ಕಾವಲಾಗಿ ಇರುತೇನೆ” ನನಗೂ ಒಬ್ಬರು ಜೊತೆಗಿದ್ದರೇ ಪರಾರಿಗೆ ಸುಲಭ ಎಂದು ಒಪ್ಪಿಸುತ್ತಾನೆ.
ಹೊರಗಿನ ದೃಷ್ಟಿಕೋನದಿಂದ, ಜೈಲು ಸಮಯ ಹೆಪ್ಪುಗಟ್ಟುವ ಸ್ಥಳವಾಗಿದೆ ಮತ್ತು ಅಲ್ಲಿ ಜೀವನವು ನೀರಸ ಮತ್ತು ಆಸಕ್ತಿರಹಿತವಾಗಿರುತ್ತದೆ. ಆದರೆ ಕೆಲವು ಚಲನಚಿತ್ರಗಳು ನಮಗೆ ತೋರಿಸುವಂತೆ, ಜೈಲು ಎಲ್ಲವನ್ನೂ ಹೆಚ್ಚು ತೀವ್ರಗೊಳಿಸುತ್ತದೆ ಮತ್ತು ಪ್ರಾಪಂಚಿಕ ಘಟನೆಗಳಿಗೆ ವಿಶೇಷ ಅಂಚನ್ನು ನೀಡುತ್ತದೆ. ಸಾಮಾಜಿಕ ಬಹಿಷ್ಕಾರಗಳು ಸಹಬಾಳ್ವೆ ನಡೆಸಬೇಕಾದ ಮುಚ್ಚಿದ ಜಾಗವಿದು.
ಆದ್ದರಿಂದ, ಯಾವುದೇ ದ್ವೇಷ ಅಥವಾ ಯಾವುದೇ ಸ್ನೇಹವು ಉದ್ಭವಿಸುತ್ತದೆ. ಋಣಾತ್ಮಕ ಭಾವನೆಗಳು ಎರಡು ಪಟ್ಟು ನೋವಿನಿಂದ ಕೂಡಿರುತ್ತವೆ ಮತ್ತು ಧನಾತ್ಮಕ ಭಾವನೆಗಳು ದೀರ್ಘಕಾಲೀನ ಪರಿಣಾಮವನ್ನು ಬೀರುತ್ತವೆ. ಬಹುಶಃ ಇದಕ್ಕಾಗಿಯೇ ನೀವು ಬಾರ್ಗಳ ಹಿಂದೆ ಮಾಡುವ ಸ್ನೇಹವು ಜೀವನಕ್ಕಾಗಿ ಇರುತ್ತದೆ. ಆನ್-ಸ್ಕ್ರೀನ್ ಜೈಲು ಸ್ನೇಹವು ಪ್ರೇಕ್ಷಕರಿಗೆ ವಿಶೇಷ ವರ್ಚಸ್ಸನ್ನು ಹೊಂದಿರುತ್ತದೆ, ಏಕೆಂದರೆ ಈ ರೀತಿಯ ಸ್ನೇಹವನ್ನು ಖಂಡಿತವಾಗಿಯೂ ಸಾಮಾನ್ಯ ಸಂದರ್ಭಗಳಲ್ಲಿ ಭಿನ್ನವಾಗಿ ನೋಡಲಾಗುತ್ತದೆ. ಇಬ್ಬರು ಜನರು ಒಟ್ಟಾಗಿ ಧಿಕ್ಕರಿಸುವ ಮತ್ತು ಕಂಬಿಗಳ ಹಿಂದೆ ಇರುವ ಕಹಿ ಪರಿಸ್ಥಿತಿಗಳನ್ನು ಎದುರಿಸುವ ಸೌಂದರ್ಯವನ್ನು ಇದು ಚಿತ್ರಿಸುತ್ತದೆ.
ಬಂದಿಖಾನೆಯಲ್ಲಿ 1234 ಎಂದು ಹೆಜ್ಜೆ ಇಡುತ್ತ ನಡೆದಾಡುತಿದ್ದರೆ ಸುತ್ತಮುತ್ತಲಿನಿಂದ ಕೊನೆ ಯಲ್ಲಿರುವ ಕೂಗು PAPPI ಯನ್ನು ಹಿಂಸೆ ಮಾಡುತಿದ್ದವು, ಹುಚ್ಚು ಹಿಡಿಯುವ ಸ್ಥಿತಿಯ ಖೈದಿ, ಸಾಯುವ ಕೊನೆ ಗಳಿಗೆಯ ಕೂಗು PAPPI ಯನ್ನು ಒಂದು ಕ್ಷಣ ದೃತಿಗೆಡಿಸುತಿತ್ತು. ಆಗೆಲ್ಲಾ ತನ್ನ ಕೈ ಇಂದ ತನ್ನ ಎದೆಗೆ ಬಲವಾಗಿ ಹೊಡೆದುಕೊಂಡು ನಾನಿಂದು ಸದೃಢನಾಗಿದ್ದೇನೆ ಎಂದು ತನಗೆ ತಾನೇ ಹೇಳಿಕೊಳ್ಳುತಿದ್ದ.
(ಒಮ್ಮೆ ಅವನ ಮನಸ್ಥಿತಿಯನ್ನು ಯೋಚನೆ ಮಾಡಿ, ಸುತ್ತಲಿನ ಎಲ್ಲಾ ವಿಚಾರಗಳು ಅವನನ್ನು ಕುಗ್ಗಿಸುವಾಗ ಅವನ ಮನಸ್ಸಿಗೆ ಹೇಗೇ ಅನಿಸಿರಬೇಕು) ಮುಂದುವರೆಯುವುದು......................................................