Paneer Pulao Recipe in Kannada – ಪನೀರ್ ಪಲಾವ್
Read this-Bhindi pepper fry Recipe in Kannada ಬೆಂಡೆಕಾಯಿ ಪೆಪ್ಪರ್ ಫ್ರೈ
ಬೇಕಾಗುವ ಪದಾರ್ಥಗಳು…
- ಶುಂಠಿ- ಸ್ವಲ್ಪ
- ಬೆಳ್ಳುಳ್ಳಿ- ಸ್ವಲ್ಪ
- ಹಸಿಮೆಣಸಿನ ಕಾಯಿ- 5
- ಚಕ್ಕೆ-ಸ್ವಲ್ಪ
- ಲವಂಗ-ಸ್ವಲ್ಪ
- ಸೋಂಪು- ಸ್ವಲ್ಪ
- ಹಸಿ ಕಾಯಿತುರಿ-ಸ್ವಲ್ಪ
- ಪುದೀನಾ-ಸ್ವಲ್ಪ
- ಕೊತ್ತಂಬರಿ ಸೊಪ್ಪು-ಸ್ವಲ್ಪ
- ಎಣ್ಣೆ-4 ಚಮಚ
- ತುಪ್ಪ– 2 ಚಮಚ
- ಈರುಳ್ಳಿ-1
- ಪಲಾವ್’ಗೆ ಬೇಕಾಗುವ ಪದಾರ್ಥಗಳು-ಸ್ವಲ್ಪ
- ಅರಿಶಿಣದ ಪುಡಿ-ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ದನಿಯಾ ಪುಡಿ- 1 ಚಮಚ
- ಗರಂ ಮಸಾಲಾ- ಅರ್ಧ ಚಮಚ
- ಕಸೂರಿ ಮೇಥಿ-ಸ್ವಲ್ಪ
- ಬಟಾಣಿ- 1 ಚಮಚ
- ಪನ್ನೀರ್- 100 ಗ್ರಾಂ
- ಅಕ್ಕಿ- 1 ಬಟ್ಟಲು
- ನಿಂಬೆ ರಸ- 1 ಚಮಚ
ಮಾಡುವ ವಿಧಾನ…
ಮೊದಲಿಗೆ ಮಿಕ್ಸಿ ಜಾರ್’ಗೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಚಕ್ಕೆ, ಲವಂಗ, ಸೋಂಪು, ಹಸಿ ಕಾಯಿತುರಿ, ಪುದೀನಾ, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ಎಣ್ಣೆ, ತುಪ್ಪ ಹಾಕ ಕಾಯಲು ಬಿಡಿ. ಬಳಿಕ ಪಲಾವ್ ಪದಾರ್ಥಗಳನ್ನು ಹಾಕಿ. ಕೆಂಪಗಾಗಲು ಬಿಡಿ. ನಂತರ ಕತ್ತರಿಸಿಕೊಂಡ ಈರುಳ್ಳಿ ಹಾಕಿ ಕೆಂಪಗಾದ ಬಳಿಕ ರುಬ್ಬಿಕೊಂಡ ಮಿಶ್ರಣ ಹಾಕಿ 5 ನಿಮಿಷ ಬಿಡಿ.
ನಂತರ ಅರಿಶಿಣದ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ, ಕಸೂರಿ ಮೇಥಿ, ಬಟಾಣಿ, ಉಪ್ಪು, ಪನ್ನೀರ್ ಹಾಕಿ ಚೆನ್ನಾಗಿ ಮಿಶ್ರಣ 1 ನಿಮಿಷ ಕೈಯಾಡಿಸಿ. ಇದೀಗ ಅಕ್ಕಿಯನ್ನು ಹಾಕಿ. ನಂತರ ಅಕ್ಕಿ ಹಾಕಿದ ಬಟ್ಟಲಿನಲ್ಲೇ 2 ಬಟ್ಟಲು ನೀರು ಹಾಕಿ. ನಂತರ ನಿಂಬೆ ರಸ ಹಾಕಿ 2 ವಿಷಲ್ ಕೂಗಿಸಿದರೆ ರುಚಿತರವಾದ ಪನೀರ್ ಪಲಾವ್ ಸವಿಯಲು ಸಿದ್ಧ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



