Paneer cutlet recipe in Kannada – ಪನ್ನೀರ್ ಕಟ್ಲೆಟ್
ಬೇಕಾಗುವ ಪದಾರ್ಥಗಳು…
- ಪನ್ನೀರ್- 400 ಗ್ರಾಂ
- ಈರುಳ್ಳಿ- 1 ಚಿಕ್ಕದಾಗಿ ಹೆಚ್ಚಿದ್ದು
- ಕ್ಯಾರೆಟ್- 1 ತುರಿದದ್ದು
- ಎಲೆಕೋಸು- 1 ಬಟ್ಟಳು ಚಿಕ್ಕದಾಗಿ ಹೆಚ್ಚಿದ್ದು
- ಕ್ಯಾಪ್ಸಿಕಂ – 1/2 ಚಿಕ್ಕದಾಗಿ ಹೆಚ್ಚಿದ್ದು
- ಆಲೂಗೆಡ್ಡೆ-2 ಬೇಯಿಸಿ ನುಣ್ಣಗೆ ಪುಡಿ ಮಾಡಿದ್ದು
- ಹಸಿಮೆಣಸಿನಕಾಯಿ – 2 ಚಿಕ್ಕದಾಗಿ ಕತ್ತರಿಸಿದ್ದು
- ಕೊತ್ತಂಬರಿ ಸೊಪ್ಪು -ಸ್ವಲ್ಪ
- ಶುಂಠಿಬೆಳ್ಳುಳ್ಳಿ ಪೇಸ್ಟ್ -1 ಚಮಚ
- ಚಾಟ್ ಮಸಾಲ -1 ಚಮಚ
- ಗರಂಮಸಾಲ- ಅರ್ಧ ಚಮಚ
- ಜೀರಿಗೆಪುಡಿ – ಅರ್ಧ ಚಮಚ
- ಅಚ್ಚಖಾರದಪುಡಿ- 1 ಚಮಚ
- ಆಮ್ ಚೂರ್ ಪುಡಿ- ಅರ್ಧ ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಅರಶಿನ- ಅರ್ಧ ಟೀ ಚಮಚ.
- ಪೇಸ್ಟ್ ತಯಾರಿಸಿಕೊಳ್ಳಲು…
- ಕಾರ್ನ್ ಫೋರ್-4 ಟೇಬಲ್ ಚಮಚ
- ಚಿಲ್ಲಿ ಫ್ಲೆಕ್ಸ್- ಅರ್ಧ ಚಮಚ
- ಬ್ರೆಡ್ ಕ್ರಮ್ಸ್- ಸ್ವಲ್ಪ
- ಎಣ್ಣೆ-ಕರಿಯಲು
Read this – Doctor Suggests Foods Diabetics Should Eat For Breakfast To Manage Blood Sugar:
ಮಾಡುವ ವಿಧಾನ…
- ಪನ್ನೀರ್ ಅನ್ನು ಪುಡಿ ಮಾಡಿಕೊಂಡು ಅದರೊಂದಿಗೆ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಬಳಿಕ ತಯಾರಿಸಿಕೊಂಡ ಮಿಶ್ರಣದಿಂದ ದೊಡ್ಡ ದೊಡ್ಡ ಉಂಡೆಗಳನ್ನು ಮಾಡಿಕೊಂಡು ಅದನ್ನು ಸಮತಟ್ಟಾಗಿ ತಟ್ಟಿಕೊಳ್ಳಿ. ಒಂದು ಚಿಕ್ಕ ಬಟ್ಟಲಿಗೆ ಕಾರ್ನ್ ಫ್ಲೋರ್, ಚಿಲ್ಲಿ ಪ್ಲೆಕ್ಸ್ ಮತ್ತು ಸ್ವಲ್ಪ ನೀರನ್ನು ಹಾಕಿ ದೋಸೆ ಹಿಟ್ಟಿನ ಹದದಲ್ಲಿ ಕಲಸಿಕೊಳ್ಳಿ.
- ತಯಾರಿಸಿದ ಪನ್ನೀರ್ ಕಟ್ಲೆಟ್ ಅನ್ನು ಹಿಟ್ಟಿನಲ್ಲಿ ಅದ್ದಿ ನಂತರ ಬ್ರೆಡ್ ಕ್ರಮ್ಸ್ ಅದರ ಮೇಲೆ ಮತ್ತು ಸುತ್ತಲೂ ಹರಡಿ. ಎಲ್ಲವನ್ನು ಹೀಗೆ ಮಾಡಿ ತಟ್ಟೆಯಲ್ಲಿಟ್ಟುಕೊಳ್ಳಿ.
- ನಂತರ ಎಣ್ಣೆಯನ್ನು ಬಿಸಿ ಮಾಡಿಕೊಂಡು ತಯಾರಿಸಿಕೊಂಡ ಕಟ್ಲೆಟ್‌ನ್ನು ಹಾಕಿ. ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ಕೆಂಬಣ್ಣಕ್ಕೆ ಬರುವರೆಗೆ ಬೇಯಿಸಿ ಎಣ್ಣೆಯಿಂದ ತೆಗೆಯಿರಿ. ಇದೀಗ ರುಚಿಕರವಾದ ಪನ್ನೀರ್ ಕಟ್ಲೆಟ್ ಸವಿಯಲು ಸಿದ್ಧ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ