Okra Rava Fry Recipe in Kannada – ಬೆಂಡೆಕಾಯಿ ರವಾ ಫ್ರೈ
ಬೇಕಾಗುವ ಪದಾರ್ಥಗಳು…
- ಬೆಂಡೆಕಾಯಿ-20
- ಖಾರದ ಪುಡಿ- 1 ಚಮಚ
- ದನಿಯಾ ಪುಡಿ- 1 ಚಮಚ
- ಇಂಗು- ಸ್ವಲ್ಪ
- ರವೆ- 1/4 ಬಟ್ಟಲು
- ಉಪ್ಪು-ರುಚಿಗೆ ತಕ್ಕಷ್ಟು
- ಅರಿಶಿನ ಪುಡಿ- ಸ್ವಲ್ಪ
- ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
- ಜೀರಿಗೆ ಪುಡಿ- ಅರ್ಧ ಚಮಚ
Read this – How to make the Beetroot Momos Recipe in Kannada ಬೀಟ್ರೂಟ್ ಮೊಮೊಸ್
ಮಾಡುವ ವಿಧಾನ…
- ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ನೀರಿನಂಶವನ್ನೆಲ್ಲಾ ಒರೆಸಿಕೊಳ್ಳಿ.
- ನಂತರ ಇದನ್ನು ಉದ್ದಕ್ಕೆ 4 ಭಾಗವಾಗಿ ಸೀಳಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಖಾರದಪುಡಿ, ದನಿಯಾ ಪುಡಿ, ಇಂಗು, ಉಪ್ಪು, ಅರಿಸಿನ ಪುಡಿ, ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ಹಾಗೇ ಬಿಡಿ.
- ಬೆಂಡೆಕಾಯಿ ನೀರು ಬಿಡುತ್ತದೆ. ನಂತರ ಒಂದು ತಟ್ಟೆಯಲ್ಲಿ ರವೆ ಇಟ್ಟುಕೊಳ್ಳಿ. ಒಂದು ಅಗಲವಾದ ಪಾತ್ರೆಗೆ ಎಣ್ಣೆ ಹಾಕಿ ಮಸಾಲೆ ಹಾಕಿಟ್ಟುಕೊಂಡ ಬೆಂಡೆಕಾಯಿಯನ್ನು ರವೆಯಲ್ಲಿ ಹೊರಳಿಸಿ ಎಣ್ಣೆ ಹಾಕಿ ಫ್ರೈ ಮಾಡಿಕೊಂಡರೆ ರುಚಿಕರವಾದ ಬೆಂಡೆಕಾಯಿ ರವಾ ಫ್ರೈ ಸವಿಯಲು ಸಿದ್ಧ.
Subscribe for Free and Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ