HomeNewsNo IND-PAK Semi Clash-ಭಾರತ-ಪಾಕ್ ಸೆಮಿ ಮುಖಾಮುಖಿ ಇಲ್ಲ!

No IND-PAK Semi Clash-ಭಾರತ-ಪಾಕ್ ಸೆಮಿ ಮುಖಾಮುಖಿ ಇಲ್ಲ!

Semi-final hopes dashed as tournament results rule out India-Pakistan showdown

No IND-PAK Semi Clash-ಭಾರತ-ಪಾಕ್ ಸೆಮಿ ಮುಖಾಮುಖಿ ಇಲ್ಲ!

T20 World Cup 2026: ಟಿ20 ವಿಶ್ವಕಪ್​ನ ಸೂಪರ-8 ಸುತ್ತಿನಲ್ಲಿ ಭಾರತ, ಸೌತ್ ಆಫ್ರಿಕಾ, ಇಂಗ್ಲೆಂಡ್, ಝಿಂಬಾಬ್ವೆ, ಪಾಕಿಸ್ತಾನ್, ನ್ಯೂಝಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳು ಕಣಕ್ಕಿಳಿದಿವೆ. ಈ ಎಂಟು ತಂಡಗಳಲ್ಲಿ ಇಂಗ್ಲೆಂಡ್ ಸೆಮಿಫೈನಲ್​ಗೆ ಪ್ರವೇಶಿಸಿದ್ದು, ಇನ್ನುಳಿದ 3 ಸ್ಥಾನಗಳಿಗಾಗಿ ಪೈಪೋಟಿ ಮುಂದುವರೆದಿದೆ.

Asia Cup 2025: When is next India vs Pakistan match?

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್​ಗೇರುವ ನಾಲ್ಕು ತಂಡಗಳಾವುವು ಎಂಬ ಲೆಕ್ಕಾಚಾರ ಜೋರಾಗಿದೆ. ಈ ಲೆಕ್ಕಾಚಾರದ ಜೊತೆಗೆ ಇದೀಗ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲ್ಲ ಎಂಬುದು ಕೂಡ ಬಹುತೇಕ ಖಚಿತವಾಗಿದೆ. ಏಕೆಂದರೆ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಇಂಗ್ಲೆಂಡ್ ತಂಡವು ಸೆಮಿಫೈನಲ್​ಗೇರಿದೆ.

ಮೊದಲ ಪಂದ್ಯದಲ್ಲಿ ಶ್ರೀಲಂಕಾಗೆ ಸೋಲುಣಿಸಿದ್ದ ಇಂಗ್ಲೆಂಡ್, ಇದೀಗ ಪಾಕ್ ವಿರುದ್ಧ ಗೆದ್ದು ಒಟ್ಟು 4 ಅಂಕಗಳನ್ನು ಪಡೆದುಕೊಂಡಿದೆ. ಇನ್ನು ನ್ಯೂಝಿಲೆಂಡ್ ವಿರುದ್ಧ ಗೆದ್ದರೆ ಒಟ್ಟು 6 ಅಂಕಗಳನ್ನು ಪಡೆಯಲಿದೆ. ಅತ್ತ ಪಾಕಿಸ್ತಾನ್ ತಂಡ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದರೆ ಪಡೆಯುವುದು ಕೇವಲ 3 ಅಂಕಗಳು ಮಾತ್ರ.

ಏಕೆಂದರೆ ಪಾಕಿಸ್ತಾನ್-ನ್ಯೂಝಿಲೆಂಡ್ ನಡುವಣ ನಡುವಣ ಪಂದ್ಯವು ರದ್ದಾಗಿರುವ ಕಾರಣ 1 ಅಂಕಗಳನ್ನು ಹಂಚಿಕೊಳ್ಳಲಾಗಿದೆ. ಅದರಂತೆ ಇನ್ನುಳಿದಿರುವ ಮ್ಯಾಚ್​ನಲ್ಲಿ ಗೆದ್ದರೂ ಪಾಕಿಸ್ತಾನ್ ತಂಡಕ್ಕೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಸಾಧ್ಯವಾಗುವುದಿಲ್ಲ.

ಇದರಿಂದ ಸೆಮಿಫೈನಲ್ ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವ ಸಾಧ್ಯತೆ ಕೂಡ ಸಂಪೂರ್ಣ ಕ್ಷೀಣಿಸಿದೆ. ಏಕೆಂದರೆ ಇತ್ತ ಗ್ರೂಪ್-1 ರಿಂದ ಸೆಮಿಫೈನಲ್​ಗೇರಲು ಟೀಮ್ ಇಂಡಿಯಾ ಮುಂದಿನ ಎರಡು ಮ್ಯಾಚ್​ಗಳಲ್ಲೂ ಜಯ ಸಾಧಿಸಬೇಕು. ಅತ್ತ ಸೌತ್ ಆಫ್ರಿಕಾ ಅಥವಾ ವೆಸ್ಟ್ ಇಂಡೀಸ್​ ತಂಡಗಳು ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಜಯ ಸಾಧಿಸಿದರೂ ಅತ್ಯುತ್ತಮ ನೆಟ್ ರನ್ ರೇಟ್ ಕಾರಣ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ.

ಟಿ20 ವಿಶ್ವಕಪ್​ ಟೂರ್ನಿಯ ‘ಸೂಪರ್ 8’ ಹಂತದ ನಿಯಮದಂತೆ, ಒಂದು ಗುಂಪಿನ ಅಗ್ರಸ್ಥಾನಿ ತಂಡವು ಮತ್ತೊಂದು ಗುಂಪಿನ ಎರಡನೇ ಸ್ಥಾನದ ತಂಡದೊಂದಿಗೆ ಸೆಮಿಫೈನಲ್‌ನಲ್ಲಿ ಆಡಬೇಕಾಗುತ್ತದೆ.

  • ಸೆಮಿಫೈನಲ್ 1: ಗ್ರೂಪ್ 1 ರ ವಿಜೇತ vs ಗ್ರೂಪ್ 2 ರ ರನ್ನರ್ ಅಪ್.
  • ಸೆಮಿಫೈನಲ್ 2: ಗ್ರೂಪ್ 2 ರ ವಿಜೇತ vs ಗ್ರೂಪ್ 1 ರ ರನ್ನರ್ ಅಪ್.

ಇಂಗ್ಲೆಂಡ್ ತಂಡವು ಗ್ರೂಪ್ 2 ರಲ್ಲಿ ಮೊದಲ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಈಗ ಕೇವಲ ಎರಡನೇ ಸ್ಥಾನ ಪಡೆಯಲು ಮಾತ್ರ ಅವಕಾಶವಿದೆ. ಇತ್ತ ಗ್ರೂಪ್ 1 ರಲ್ಲಿ ಭಾರತ ತಂಡವು ಸೌತ್ ಆಫ್ರಿಕಾ ವಿರುದ್ಧ ಸೋತಿರುವುದರಿಂದ, ತನ್ನ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಇಬ್ಬರೂ ತಮ್ಮ ಗುಂಪುಗಳಲ್ಲಿ ಎರಡನೇ ಸ್ಥಾನ ಪಡೆದರೆ, ಅವರು ಪರಸ್ಪರ ಎದುರಾಗಲು ಸಾಧ್ಯವಿಲ್ಲ.

ಇದಾಗ್ಯೂ ಮುಂದಿನ ಎರಡು ಮ್ಯಾಚ್​ಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ನೆಟ್ ರನ್ ರೇಟ್​ನಲ್ಲಿ ಉಳಿದ ತಂಡಗಳನ್ನು ಹಿಂದಿಕ್ಕಿದರೆ ಭಾರತ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಬಹುದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಮುಖಾಮುಖಿ.

ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ಒಂದು ಟೀಮ್ ಜಯಗಳಿಸುವುದು ಖಚಿತ. ಇದರಿಂದ ಎರಡು ಟೀಮ್​ಗಳಲ್ಲಿ ಒಂದು ತಂಡದ ನೆಟ್ ರನ್ ರೇಟ್ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ನೆಟ್ ರನ್ ರೇಟ್​ ಟಾರ್ಗೆಟ್ ಮಾಡಿ ಟೀಮ್ ಇಂಡಿಯಾ ಅಮೋಘ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಮೇಲೇರುವುದು ಅಂದುಕೊಂಡಷ್ಟು ಸುಲಭವಲ್ಲ.

ಹೀಗಾಗಿಯೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಇನ್ನು ಉಭಯ ತಂಡಗಳು ಸೆಮಿಫೈನಲ್​ಗೇರಿ ಆ ಪಂದ್ಯಗಳಲ್ಲಿ ಜಯ ಗಳಿಸಿದರೆ ಮಾತ್ರ ಫೈನಲ್​ನಲ್ಲಿ ಮುಖಾಮುಖಿಯಾಗಬಹುದು.

ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಮತ್ತೊಂದು ಮುಖಾಮುಖಿ ಖಚಿತವಾಗಲು ಮಾರ್ಚ್ 1 ರವರೆಗೆ ಕಾಯಲೇಬೇಕು. ಏಕೆಂದರೆ ಭಾನುವಾರದೊಳಗೆ ಸೆಮಿಫೈನಲ್ ಆಡಲಿರುವ 4 ತಂಡಗಳಾವುವು ಎಂಬುದು ಕನ್ಫರ್ಮ್ ಆಗಲಿದೆ. ಈ ನಾಲ್ಕು ತಂಡಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡವಿದ್ದರೆ ಮಾತ್ರ ಉಭಯ ತಂಡಗಳ ಫೈನಲ್ ಮುಖಾಮುಖಿಯನ್ನು ನಿರೀಕ್ಷಿಸಬಹುದು.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×