HomeNewsNEET Update - ಕರ್ನಾಟಕದಲ್ಲಿ 1,122 ವೈದ್ಯಕೀಯ ಸೀಟುಗಳು ಲಭ್ಯ

NEET Update – ಕರ್ನಾಟಕದಲ್ಲಿ 1,122 ವೈದ್ಯಕೀಯ ಸೀಟುಗಳು ಲಭ್ಯ

NEET Update - ನೀಟ್ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್: ರಾಜ್ಯಕ್ಕೆ 1122 ಸರ್ಕಾರಿ ಮೆಡಿಕಲ್‌ ಸೀಟ್‌ ಲಭ್ಯ; ಡಾ ಶರಣಪ್ರಕಾಶ ಪಾಟೀಲ್

NEET Update – ನೀಟ್ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್: ರಾಜ್ಯಕ್ಕೆ 1122 ಸರ್ಕಾರಿ ಮೆಡಿಕಲ್‌ ಸೀಟ್‌ ಲಭ್ಯ; ಡಾ ಶರಣಪ್ರಕಾಶ ಪಾಟೀಲ್

 

ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ರಾಜ್ಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶವೊಂದು ಲಭಿಸಿದೆ. ರಾಜ್ಯಕ್ಕೆ ಈ ಬಾರಿ ದಾಖಲೆಯ 1,122 ಹೆಚ್ಚುವರಿ ಮೆಡಿಕಲ್ ಸೀಟುಗಳು ಮಂಜೂರಾಗಿವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.

ನೀಟ್ ಪರೀಕ್ಷೆ (NEET Exam) ಅಕ್ರಮ ದೇಶಾದ್ಯಂತ ಸದ್ದು ಮಾಡುತ್ತಿದೆ. ಬಗೆದಷ್ಟು ನೀಟ್​ ಮಾಫಿಯಾ ಬಯಲಾಗುತ್ತಿದೆ. ಒಂದೆಡೆ ಪರೀಕ್ಷಾ ಅಕ್ರಮಕ್ಕೆ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಆದರೆ ಈ ಮಧ್ಯೆ ರಾಜ್ಯದ (Karnataka) ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಒಂದು ಒದಗಿಬಂದಿದೆ. ಅದೇನೆಂದರೆ ರಾಜ್ಯಕ್ಕೆ ಹೆಚ್ಚುವರಿ 1122 ಸರ್ಕಾರಿ ಮೆಡಿಕಲ್‌ ಸೀಟ್​ಗಳು ಮಂಜೂರಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಘೋಷಿಸಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​ ನೀಡಿದ್ದಾರೆ.

ಮುಖ್ಯಾಂಶಗಳು

  • ಮೆಡಿಕಲ್ ಸೀಟ್ ಲಭ್ಯತೆಯಲ್ಲಿ ಕರ್ನಾಟಕದ ಹೊಸ ದಾಖಲೆ
  • ರಾಜ್ಯಕ್ಕೆ ದಾಖಲೆಯ 1,122 ಹೆಚ್ಚುವರಿ ಮೆಡಿಕಲ್ ಸೀಟುಗಳ ಮಂಜೂರಾತಿ
  • ಮೆಡಿಕಲ್ ಸೀಟ್ ಲಭ್ಯತೆಯಲ್ಲಿ ಕರ್ನಾಟಕದ ಹೊಸ ದಾಖಲೆ

ಶನಿವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್​​, ರಾಜ್ಯದಲ್ಲಿ ಮೆಡಿಕಲ್‌ ಸೀಟು ಲಭ್ಯತೆ ಹೆಚ್ಚಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ಲಭಿಸಲಿದೆ. ರಾಜ್ಯಕ್ಕೆ ಹೆಚ್ಚುವರಿ 1122 ಸೀಟುಗಳು ದೊರೆಯಲಿವೆ ಎಂದರು. ನಮ್ಮ ರಾಜ್ಯದ ವೈದ್ಯಕೀಯ ಕ್ಷೇತ್ರದ ದೇಶದಲ್ಲೇ ಮುಂಚೂಣಿಯಲ್ಲಿದೆ. ಒಂದು ರಾಜ್ಯಕ್ಕೆ ಒಂದೇ ಬಾರಿ ಸಾವಿರಕ್ಕೂ ಹೆಚ್ಚು ಮೆಡಿಕಲ್ ಸೀಟು ಸಿಕ್ಕಿರುವುದು ದಾಖಲೆಯಾಗಿದೆ. ಇದು ಕರ್ನಾಟಕದ ಸಾಧನೆಗೆ ಪೂರಕ ಸಾಕ್ಷಿ ಎಂದು ಅವರು ಹೇಳಿದರು.

ನೀಟ್ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್: ರಾಜ್ಯಕ್ಕೆ 1122 ಸರ್ಕಾರಿ ಮೆಡಿಕಲ್‌ ಸೀಟ್‌ ಲಭ್ಯ; ಡಾ ಶರಣಪ್ರಕಾಶ ಪಾಟೀಲ್ - Kannada News | Good News for NEET Aspirants: Karnataka Gets 1,122 Additional ...

ಎಲ್ಲೆಲ್ಲಿ ಹೆಚ್ಚುವರಿ ಸೀಟು?

ಹೊಸದಾಗಿ ಮಂಜೂರಾದ ಸೀಟುಗಳು ಕೊಪ್ಪಳ, ಗದಗ, ಚಾಮರಾಜನಗರ, ಕಾರವಾರ, ಕಾವೇರಿ ಸೇರಿದಂತೆ ಹಲವು ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳಿಗೆ ಹಂಚಿಕೆಯಾಗಲಿವೆ.

1090 ಕೋಟಿ ರೂ ಅನುದಾನ

ಕೇಂದ್ರ ಸರ್ಕಾರ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮೇ 15ರಂದು ಇದಕ್ಕೆ ಅಂತಿಮ ಮುದ್ರೆ ಹಾಕಿದೆ. ಪದವಿಪೂರ್ವ ವೈದ್ಯಕೀಯ ಸೀಟುಗಳಿಗೆ 495 ಕೋಟಿ ರೂ. ಹಾಗೂ ಸ್ನಾತಕೋತ್ತರ ಸೀಟುಗಳಿಗೆ 541 ಕೋಟಿ ರೂ. ಸೇರಿ ಒಟ್ಟು 1090 ಕೋಟಿ ರೂ. ಅನುದಾನ ರಾಜ್ಯಕ್ಕೆ ದೊರೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಕರ್ನಾಟಕದಲ್ಲಿ ಈಗ ವಿಫುಲ ಅವಕಾಶಗಳು ಸೃಷ್ಟಿಯಾಗಿವೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ. ಶರಣಪ್ರಕಾಶ ಪಾಟೀಲ್ ಕರೆ ನೀಡಿದರು.

ರಾಜ್ಯದ ಮೆಡಿಕಲ್ ಸೀಟುಗಳ ವಿವರ

  • ಒಟ್ಟು ವೈದ್ಯಕೀಯ ಕಾಲೇಜು- 72 (ಖಾಸಗಿ, ಡೀಮ್ಡ್ ಸೇರಿ)
  • ಈಗ ಲಭ್ಯವಿರುವ UG ಸೀಟು- 13,945
  • ಈಗ ಲಭ್ಯವಿರುವ PG ಸೀಟು- 7,727
  • ಹೊಸದಾಗಿ ಸೇರ್ಪಡೆಯಾದ ಸೀಟು- 1,122

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments