Neene Rama Neene Shama song lyrics – ನೀನೇ ರಾಮ ನೀನೇ ಶ್ಯಾಮ
ನೀನೇ ರಾಮ…
ನೀನೇ ಶ್ಯಾಮ..
ನೀನೇ ಅಲ್ಲಾ…
ನೀನೇ ಯೇಸು
ನೀನೇ ಕರ್ಮಾ…
ನೀನೇ ಧರ್ಮಾ..
ನೀನೇ ಮರ್ಮಾ..
ನೀನೇ ಪ್ರೇಮ
ನಿಮ್ಮ ಜೀವದ ಮಾಲಿಕ ನಾ..ನು
ನಿಮ್ಮ ಪಾಲಿನ ಸೇವಕ ನಾ..ನು..
ನನಗೇನು.. ಹೆಸರಿಲ್ಲಾ
ಹೆಸರಲ್ಲಿ.. ನಾನಿಲ್ಲಾ…
ಕಣಕಣ ಕಣದೊಳಗೆ
ಕುಳಿತಿರುವೇ…
ಮುಕುಂದಾ.. ಮುರಾರಿ..
ಮುಕುಂದಾ… ಮುರಾರಿ..
ಮುಕುಂದಾ.. ಮುರಾರಿ..
ಮುಕುಂದಾ… ಮುರಾರಿ..
ನೀನೇ ರಾಮ…
ನೀನೇ ಶ್ಯಾಮ…
ನೀನೇ ಅಲ್ಲಾ…
ನೀನೇ ಯೇಸು…
ಗುಡಿಯ ಕಟ್ಟಿದ ಬಡವನೆದೆಯ
ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ
ಬೆವರಲ್ಲಿರುವೆ ನಾನು
ಕೆಲಸ ನಿನದೆ ಫಲವು ನಿನದೆ
ಛಲದ ಒಡೆಯ ನೀನು..
ಇದನು ಮರೆತು ನನಗೆ ನಮಿಸಿ
ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳಾ
ಇದೆ ಕೆಲಸವು ಬಹಳಾ
ನನ್ನ ಒಲಿಸಲು ಮರುಳಾ
ಇರೋ ಮಾರ್ಗವು ಸರಳಾ
ನನ್ನ ಸೇರಲು ದಾರಿಯು ನೂ..ರು
ಅದಕೇತಕೆ ಈ ತಕರಾ..ರು..
ಅಣುಅಣು ಅಣುವೊಳಗೆ
ಕುಳಿತಿರುವೇ..ಏ..ಏ…
ಮುಕುಂದಾ.. ಮುರಾರಿ..
ಮುಕುಂದಾ… ಮುರಾರಿ..
ಮುಕುಂದಾ.. ಮುರಾರಿ..
ಮುಕುಂದಾ… ಮುರಾರಿ..
ಯುಗದ ಯುಗದ ಮೃಗದ
ಖಗದ ಉಸಿರಲ್ಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ
ಪರಮ ಅಣುವೆ ನಾನು…
ಹೊಸದು ಹೊಸದು
ಹೆಸರ ಹೊಸೆದು ಕರೆವೆ ನನ್ನ ನೀನು
ನನಗೂ ನಿನಗೂ ನಡುವೆ ನೀನೇ
ಗೋಡೆ ಕಟ್ಟಿದವನು ನಾ..
ಇರುವೆನು ಒಳಗೆ
ನೀ ಹುಡುಕಿದೆ ಹೊರಗೆ
ಬಿಚ್ಚು ಮದದಾ ಉಡುಗೆ
ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲಿಕ ನಾ..ನು
ನಿಮ್ಮ ಪಾಲಿನ ಸೇವಕ ನಾ..ನು..
ಕಣಕಣ ಕಣದೊಳಗೆ
ನಾನಿರುವೇ..ಏ…ಏಏ….
ಮುಕುಂದಾ.. ಮುರಾರಿ..
ಮುಕುಂದಾ… ಮುರಾರಿ..
ಮುಕುಂದಾ… ಮುರಾರಿ..
ಮುಕುಂದಾ… ಮುರಾರಿ..
ನೀನೇ ರಾಮ…
ನೀನೇ ಶ್ಯಾಮ…
ನೀನೇ ಅಲ್ಲಾ…
ನೀನೇ.. ಎ..ಲ್ಲಾ….
Get More Here :
Kelo Madeva Kannada Song – kelo mahadeva kannada song lyrics
Devare neenu nijavappa lyrics in kannada
Madeshwara song lyrics in kannada
Mahadeshwara daya barade lyrics
Siddayya swamy banni lyrics in kannada
Ganga jatadhara lyrics in kannada
Adidavara manava balle song lyrics
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ
