HomeNewsNamma Metro - ಮೆಟ್ರೋ ಪ್ರಯಾಣ ಸುಲಭ: ಕಡಿಮೆ ಕಾಯುವ ಸಮಯ

Namma Metro – ಮೆಟ್ರೋ ಪ್ರಯಾಣ ಸುಲಭ: ಕಡಿಮೆ ಕಾಯುವ ಸಮಯ

Namma Metro - ಮೆಟ್ರೋ ಪ್ರಯಾಣ ಸುಲಭ: ಕಡಿಮೆ ಕಾಯುವ ಸಮಯ

Namma Metro – ಮೆಟ್ರೋ ಪ್ರಯಾಣ ಸುಲಭ: ಕಡಿಮೆ ಕಾಯುವ ಸಮಯBJP MP Surya opposes Karnataka govt's move to extend Metro to Tumakuru

Read this-Gold Rate  ಚಿನ್ನದ ಬೆಲೆ ಇಳಿಕೆ

ಕಳೆದ ನವೆಂಬರ್ 18ರಂದು ಕೊಲ್ಕತ್ತಾದ ಟಿಟಾಘರ್ ನಿಂದ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದ 6ನೇ ಮೆಟ್ರೋ ರೈಲು ಸೆಟ್‌ ಅನ್ನು ಲಾರಿ ಮೂಲಕ ಕಳುಹಿಸಲಾಗಿತ್ತು. ಎರಡು ವಾರಗಳ ರಸ್ತೆ ಹೆದ್ದಾರಿ ಪ್ರಯಾಣ ಮುಗಿಸಿದ ಲಾರಿಗಳೂ ಬೆಂಗಳೂರಿನ ಹೆಬ್ಬಗೋಡಿ ಮೆಟ್ರೋ ಡಿಪೋಗೆ ವಾರಾಂತ್ಯಕ್ಕೆ ಆಗಮಿಸಿವೆ. ಒಟ್ಟು 06ಬೋಗಿಗಳ ಪೈಕಿ ಮೂರು ಮೆಟ್ರೋ ಬೋಗಿಗಳು ಆಗಮಿಸಿವೆ.

ಉಳಿದ ಮೂರು ಬೋಗಿಗಳು ಶೀಘ್ರವೇ ಹೆಬ್ಬಗೋಡಿ ಡಿಪೋಗೆ ಬರಲಿವೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ರೈಲು ಸೆಟ್‌ ಸೇವೆ ನಿಯೋಜನೆಗೊಂಡರೆ ಹಳದಿ ಮಾರ್ಗದಲ್ಲಿನ ಮೆಟ್ರೋ ಆವರ್ತನ ಸಮಯ ಇಳಿಕೆ ಆಗಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಅಧಿಕಾರಿಗಳು ರೈಲಿನಲ್ಲಿ ಸ್ಥಿರ ಮತ್ತು ಕ್ರಿಯಾತ್ಮಕ ಪರೀಕ್ಷೆಗಳನ್ನು ನಡೆಸಲಿದ್ದಾರೆ. ವಿವಿಧ ಪರೀಕ್ಷೆಗಳು ಪೂರ್ಣಗೊಂಡ ನಂತರ ಅದು ಡಿಸೆಂಬರ್ ಮೂರನೇ ವಾರದಲ್ಲಿ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಡಿಸೆಂಬರ್ ಅಂತ್ಯದ ಹೊತ್ತಿಗೆ ಮತ್ತೊಂದು ರೈಲು ಸೇಟ್ ಕೊಲ್ಕತ್ತದಿಂದ ಹೊರಡುವ ನಿರೀಕ್ಷೆ ಇದೆ.

Read this-Menstrual Leave: New Karnataka Govt Order  ಋತುಚಕ್ರ ರಜೆ: ಕರ್ನಾಟಕ ಸರ್ಕಾರದ ಹೊಸ ಆದೇಶ

ರೈಲಿಗೆ ಕಾಯುವ ಸಮಯ 12 ನಿಮಿಷಕ್ಕೆ ಇಳಿಕೆ

ಸದ್ಯ 15-17 ನಿಮಿಷಗಳ ಅಂತರದಲ್ಲಿ ಹಳದಿ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಆಗುತ್ತಿದೆ. ಈ ಆರನೇ ರೈಲಿನ ನಿಯೋಜನೆ ಬಳಿಕ ಅದರ ಆವರ್ತನ ಸಮಯ ಸುಮಾರು 12 ನಿಮಿಷಗಳಿಗೆ ಇಳಿಯುವ ನಿರೀಕ್ಷೆ ಇದೆ. ಡಿಸೆಂಬರ್, ಜನರಿಗೆ ಅಂದುಕೊಂಡಂತೆ ತಿಂಗಳಿಗೆ ಒಂದು ಸೆಟ್ ರೈಲು ಬೆಂಗಳೂರಿಗೆ ಬಂದರೆ, ಫೆಬ್ರವರಿ 2026ರ ಹೊತ್ತಿಗೆ ಎಂಟು ರೈಲುಗಳು ಸಂಚಾರ ಮಾಡಬಹುದೆಂದು ಅಂದಾಜಿಸಲಾಗಿದೆ.

ನಮ್ಮ ಮೆಟ್ರೋ ಜಾಲದ ಪೈಕಿ ನೇರಳೆ ಮಾರ್ಗದಲ್ಲಿ ಮತ್ತು ಹಸಿರು ಮಾರ್ಗಗಳಲ್ಲಿ ಬೆಳಗ್ಗೆ ನಿತ್ಯ 5 ಗಂಟೆಗೆ ಬದಲಾಗಿ ಬೆಳಗ್ಗೆ 6 ಗಂಟೆಗೆ ರೈಲು ಸೇವೆಗಳು ಪ್ರಾರಂಭವಾಗುತ್ತಿವೆ. ಭಾನುವಾರ ಮಾತ್ರ 6 ಗಂಟೆಗೆ ಬದಲಾಗಿ 7 ಗಂಟೆಗೆ ಮೆಟ್ರೋ ಸೇವೆ ಆರಂಭವಾಗುತ್ತದೆ. ಕಳೆದ ಸೋಮವಾರ (ಡಿ.1) ಈ ಹಳದಿ ಮಾರ್ಗದಲ್ಲೂ ಎರಡು ರೈಲು ಸೇವೆ ಬೆಳಗ್ಗೆ 5.5ಗಂಟೆಗೆ ಸೇವೆ ಪ್ರಾರಂಭಿಸಲಾಗಿತ್ತು.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×