HomeLyricsMooru Kannina Song Lyrics-ಮೂರು ಕಣ್ಣಿನ|Sri Male Mahadeshwara|Devotional Song

Mooru Kannina Song Lyrics-ಮೂರು ಕಣ್ಣಿನ|Sri Male Mahadeshwara|Devotional Song

Mooru Kannina Song Lyrics-ಮೂರು ಕಣ್ಣಿನ

Mooru Kannina Song Lyrics-ಮೂರು ಕಣ್ಣಿನ

ಮೂರು ಕಣ್ಣಿನ ಮುಗಿಲಬಣ್ಣದ ಮುದ್ದುಮಾದಯ್ಯ..
ಮೂರು ಕಣ್ಣಿನ ಮುಗಿಲು ಬಣ್ಣದ ಮುದ್ದು ಮಾದಯ್ಯ..
ನೆತ್ತಿಯ ಮ್ಯಾಲೆ ನಾಗರನ್ಹೆಡೆ ನಲ್ದು ಬಾರಯ್ಯ
ನಿಮ್ಮ ನೆತ್ತಿಯ ಮ್ಯಾಲೆ ನಾಗರನ್ಹೆಡೆ
ನಲ್ದು ಬಾರಯ್ಯ
ಅಯ್ಯಮೂರುಕಣ್ಣಿನ ಮುಗಿಲಬಣ್ಣದ ಮುದ್ದುಮಾದಯ್ಯ
ಮೂರು ಕಣ್ಣಿನ ಮುಗಿಲು ಬಣ್ಣದ ಮುದ್ದು ಮಾದಯ್ಯ..
ನೆತ್ತಿಯ ಮ್ಯಾಲೆ ನಾಗರನ್ಹೆಡೆ ನಲ್ದು ಬಾರಯ್ಯ
ನಿಮ್ಮ ನೆತ್ತಿಯ ಮ್ಯಾಲೆ ನಾಗರನ್ಹೆಡೆ
ನಲ್ದು ಬಾರಯ್ಯ
ಕೂಗಿ ಕೂಗಿ ಕರೆದೆವಲ್ಲೋ ಕುಣಿಯುತ ಬಾರಯ್ಯ
ಕೂಗಿ ಕೂಗಿ ಕರೆದೆವಲ್ಲೋ ಕುಣಿಯುತ ಬಾರಯ್ಯ.
ಕೂಗಿನ ದನಿಗೆ ನವಿಲಿನಂತೆ ನಲಿದು ಬಾರಯ್ಯ…
ನಮ್ಮಕೂಗಿನದನಿಗೆ ನವಿಲಿನಂತೆ ನಲಿದುಬಾರಯ್ಯ
ಮಲ್ಲಿಗೆ ಹೂವ ಮುಡಿದು ಬಾರೋ ಮಲೆಯ ಮಾದಯ್ಯ…
ಮಲ್ಲಿಗೆ ಹೂವ ಮುಡಿದು ಬಾರೋಮಲೆಯ ಮಾದಯ್ಯ.
ಮೆಲ್ಲ ಮೆಲ್ಲಗೆ ಪಾದವ ಇಟ್ಟು ಒಲಿದು ಬಾರಯ್ಯ.
ನೀ ಮೆಲ್ಲ ಮೆಲ್ಲಗೆ ಪಾದವ ಇಟ್ಟು
ಒಲಿದು ಬಾರಯ್ಯ
ಅಯ್ಯ ಮೂರುಕಣ್ಣಿನ ಮುಗಿಲ ಬಣ್ಣದ ಮುದ್ದುಮಾದಯ್ಯ
ನೆತ್ತಿಯ ಮ್ಯಾಲೆ ನಾಗರನ್ಹೆಡೆ ನಲ್ದು ಬಾರಯ್ಯ
ನಿಮ್ಮ ನೆತ್ತಿಯ ಮ್ಯಾಲೆ ನಾಗರನ್ಹೆಡೆ
ನಲ್ದು ಬಾರಯ್ಯ
ಕಂಬದ ಬೋಳಿ ದಿಂಬದ ಮ್ಯಾಲೆ ನಿಂದು ನೋಡಯ್ಯ
ಕಂಬದ ಬೋಳಿ ದಿಂಬದ ಮ್ಯಾಲೆ ನಿಂದು ನೋಡಯ್ಯ
ಪಡುವಾಲ ಪರುಷೆ ಬರುವ ಚಂದವ ನೋಡಯ್ಯ
ನಿನ್ನ ಪಡುವಾಲ ಪರುಷೆ ಬರುವ ಚಂದವ ನೋಡಯ್ಯ.
ಕರಿಯಾ ಕಂಬಳಿ ಗದ್ದುಗೆಯಿಂದ ಎದ್ದು ಬಾರಯ್ಯ
ಕರಿಯಾ ಕಂಬಳಿ ಗದ್ದುಗೆಯಿಂದ ಎದ್ದು ಬಾರಯ್ಯ
ನೀನು ಭಾರಿ ಚಿರುಗನಏರಿಕೊಂಡು ಬ್ಯಾಗನೆಬಾರಯ್ಯ
ನೀನು ಭಾರಿ ಚಿರುಗನ ಏರಿಕೊಂಡು
ಬ್ಯಾಗನೆ ಬಾರಯ್ಯ
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದು ಮಾದಯ್ಯ
ನೆತ್ತಿಯ ಮ್ಯಾಲೆ ನಾಗರನ್ಹೆಡೆ ನಲ್ದು ಬಾರಯ್ಯ
ನಿಮ್ಮ ನೆತ್ತಿಯ ಮೇಲೆ ನಾಗರನ್ಹೆಡೆ
ನಲ್ದು ಬಾರಯ್ಯ
ಕೆಂಡದೋಕುಳಿ ಗಂಡ ನೀನು ಕೆಂಡಗಣ್ಣಯ್ಯ
ಕೆಂಡದೋಕುಳಿ ಗಂಡ ನೀನು ಕೆಂಡಗಣ್ಣಯ್ಯ
ಕೆಂಡ ಕೊಂಡಕೆ ದಯ ಮಾಡೋ ದುಂಡು ಮಾದಯ್ಯ
ಕೆಂಡ ಕೊಂಡಕೆ ದಯ ಮಾಡೋ ದುಂಡು ಮಾದಯ್ಯ
ಬಾಣದಲ್ಲಿ ಮಿಂಚುಳದಂಗೆ ಜಾಣ ಮಾದಯ್ಯ
ಬಾಣದಲ್ಲಿ ಮಿಂಚುಳದಂಗೆ ಜಾಣ ಮಾದಯ್ಯ
ನೀನು ಪಾಶುಪತಿ ಪಂಜು ಬಾಣ ತೊಟ್ಟು ಬಾರಯ್ಯ
ನೀನು ಪಾಶುಪತಿ ಪಂಜು ಬಾಣತೊಟ್ಟು ಬಾರಯ್ಯ
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದುಮಾದಯ್ಯ
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದು ಮಾದಯ್ಯ
ನೆತ್ತಿಯ ಮ್ಯಾಲೆ ನಾಗರನ್ಹೆಡೆ ನಲ್ದು ಬಾರಯ್ಯ
ನಿಮ್ಮ ನೆತ್ತಿಯ ಮ್ಯಾಲೆ ನಾಗರನ್ಹೆಡೆ

ನಲ್ದು ಬಾರಯ್ಯ

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×