HomeNewsHealth and FoodMethi rice bath Recipe in Kannada - ಮೆಂತ್ಯ ಸೊಪ್ಪಿನ ಬಾತ್

Methi rice bath Recipe in Kannada – ಮೆಂತ್ಯ ಸೊಪ್ಪಿನ ಬಾತ್

Methi rice bath Recipe in Kannada - ಮೆಂತ್ಯ ಸೊಪ್ಪಿನ ಬಾತ್

Methi rice bath Recipe in Kannada – ಮೆಂತ್ಯ ಸೊಪ್ಪಿನ ಬಾತ್

ಬ್ರೇಕ್‌ಫಾಸ್ಟ್‌ಗೆ ಮಾಡಿ ಮೆಂತ್ಯ ಸೊಪ್ಪಿನ ಬಾತ್..! ಸಖತ್ ಟೇಸ್ಟಿ ರೆಸಿಪಿ

Read this-Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್(food recipes)

ಬೇಕಾಗುವ ಪದಾರ್ಥಗಳು…

  • ತೆಂಗಿನ ತುರಿ- 1 ಬಟ್ಟಲು
  • ಬೆಳ್ಳುಳ್ಳಿ- 8-9
  • ಹಸಿಮೆಣಸಿನ ಕಾಯಿ- 3-4
  • ಶುಂಠಿ- ಸ್ವಲ್ಪ
  • ಕರಿಬೇವು-ಸ್ವಲ್ಪ
  • ಎಣ್ಣೆ- ಸ್ವಲ್ಪ
  • ಪಲಾವ್’ಗೆ ಬೇಕಾಗುವ ಸಾಮಾಗ್ರಿ- ಸ್ವಲ್ಪ
  • ಈರುಳ್ಳಿ- 1
  • ಬಟಾಣಿ- 1 ಬಟ್ಟಲು
  • ಟೊಮೆಟೋ- 1
  • ಮೆಂತ್ಯೆ ಸೊಪ್ಪು- 1 ಬಟ್ಟಲು
  • ಕೊತ್ತಂಬರಿ ಸೊಪ್ಪ- ಅರ್ಧ ಬಟ್ಟಲು
  • ಉಪ್ಪು ರುಚಿಗೆ ತಕ್ಕಷ್ಟು
  • ಅಕ್ಕಿ- 1 ಬಟ್ಟಲು

Read this – Carrot rice Recipe in Kannada ಕ್ಯಾರೆಟ್ ಬಾತ್

ಮಾಡುವ ವಿಧಾನ…

  • ಮೊದಲಿಗೆ ಮಿಕ್ಸಿ ಜಾರ್’ಗೆ ತೆಂಗಿನ ತುರಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ ಹಾಗೂ ಕರಿಬೇವು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  • ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಇದಕ್ಕೆ ಪಲಾವ್ ಸಾಮಾಗ್ರಿಗಳು, ಈರುಳ್ಳಿ, ಟೊಮೆಯೋ ಹಾಕಿ ಕೆಂಪಗೆ ಹುರಿದುಕೊಳ್ಳಿ.
  • ಬಳಿಕ ಬಟಾಣಿ, ಸಣ್ಣಗೆ ಕತ್ತರಿಸಿದ ಮೆಂತ್ಯೆ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2-3 ನಿಮಿಷ ಕೈಯಾಡಿಸಿ,
  • ನಂತರ ಅಕ್ಕಿಯನ್ನು ಅಳತೆ ಮಾಡಿಕೊಂಡ ಬಟ್ಟಲಿನಲ್ಲೇ ಒಂದು ಬಟ್ಟಲು ಅಕ್ಕಿಗೆ 2 ಬಟ್ಟಲು ನೀರು ಹಾಕಿ, ನೀರು ಕುದಿಯಲು ಬಿಡಿ. ನಂತರ ಅಕ್ಕಿಯನ್ನು ಹಾಕಿ ಮುಚ್ಚಳ ಮುಚ್ಚಿ, 2 ಕೂಗು ಕೂಗಿಸಿಕೊಂಡರೆ, ರುಚಿಕರವಾದ ಮೆಂತ್ಯೆ ಸೊಪ್ಪಿನ ಬಾತ್ ಸವಿಯಲು ಸಿದ್ಧ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×