Methi mutton Recipe in Kannada – ಮೆಂತ್ಯೆ ಮಟನ್
ಬೇಕಾಗುವ ಪದಾರ್ಥಗಳು…
- ಮೆಂತ್ಯೆ ಸೊಪ್ಪು-ಸ್ವಲ್ಪ
- ಮಟನ್- ಅರ್ಧ ಕೆಜಿ
- ತೆಂಗಿನ ಹಾಲು- ಸ್ವಲ್ಪ
- ಶುಂಠಿ-ಬೆಳ್ಳುಳ್ಳಿ-ಸ್ವಲ್ಪ
- ಹಸಿ ಮೆಣಸಿನಕಾಯಿ- ಸ್ವಲ್ಪ
- ಗರಂ ಮಸಾಲಾ ಪೌಡರ್- 1 ಚಮಚ
- ಈರುಳ್ಳಿ-1
- ಟೊಮ್ಯಾಟೊ- 1
- ಎಣ್ಣೆ – ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟುRead this – Mushroom fry recipe in Kannada ಮಶ್ರೂಮ್ ಫ್ರೈ
ಮಾಡುವ ವಿಧಾನ…
- ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ ನಂತರ ಹೆಚ್ಚಿದ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ತಿರುಗಿದ ಮೇಲೆ ಅದರಲ್ಲಿ ರುಬ್ಬಿಟ್ಟುಕೊಂಡ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಇದಕ್ಕೆ ಮಟನ್ ಹಾಕಿ ಮತ್ತೆ ಫ್ರೈ ಮಾಡಿ.
- ಬಳಿಕ ಅದಕ್ಕೆ ಟೊಮೆಟೋ ಹಾಕಿ ಮೆತ್ತಗಾಗುವವರೆಗೂ ಕೈಯಾಡಿಸಿ. ಬಳಿಕ ಹೆಚ್ಚಿದ ಮೆಂತ್ಯೆ ಸೊಪ್ಪು ಹಾಕಿ ನಂತರ ಹಸಿ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಫ್ರೈ ಮಾಡಿ.
- ತೆಂಗಿನ ಹಾಲು ಹಾಗೂ ಗರಂ ಮಸಾಲಾ ಪೌಡರ್ ಹಾಕಿ ಕುದಿಯಲು ಬಿಡಿ. ನಂತರ ಸ್ವಲ್ಪ ಉಪ್ಪು ಹಾಕಿ ಮತ್ತೆ ಕುದಿಸಿ. ಕೊನೆಯಲ್ಲಿ ಕತ್ತರಿಸಿದ ಮೆಂತ್ಯೆ ಸೊಪ್ಪು ಹಾಕಿದರೆ ಮೆಂತ್ಯೆ ಮಟನ್ ಸವಿಯಲು ಸಿದ್ಧ.
Subscribe for Free and Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ