Maayadantha Male Banthanna Song Lyrics – ಮಾಯದಂತ ಮಳೆ ಬಂತಣ್ಣ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಅಂಗೈಯಷ್ಟು ಮೋಡನಾನೆ ಭೂಮಿ ತೂಕದ ಗಾಳಿ ಬೀಸಿ
ಭೂಮಿ ತೂಕದ ಗಾಳಿ ಬೀಸಿ, ಭೂಮಿ ತೂಕದ ಗಾಳಿ ಬೀಸಿ
ಗುಡುಗಿ ಗೂಡಾಗಿ ಚೆಲ್ಲಿದಳೋ ಗಂಗಮ್ಮ ತಾಯಿ
ಗುಡುಗಿ ಗೂಡಾಗಿ ಚೆಲ್ಲಿದಳೋ ಗಂಗಮ್ಮ ತಾಯಿ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಏರಿ ಮ್ಯಾಗಳ ಬಲ್ಲಾಳರಾಯ
ಕೆರೆಯ ಒಳಗಡೆ ಬೆಸ್ತರ ಹುಡುಗ
ಓಡಿ ಓಡಿ ಸುದ್ದಿಯ ಕೊಡಿರಯ್ಯೊ ನಾ ನಿಲ್ಲುವವಳಲ್ಲ
ಓಡಿ ಓಡಿ ಸುದ್ದಿಯ ಕೊಡಿರಯ್ಯೊ ನಾ ನಿಲ್ಲುವವಳಲ್ಲ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಆರು ಸಾವಿರ ಒಡ್ಡರ ಕರಸಿ
ಮೂರು ಸಾವಿರ ಗುದ್ದಲಿ ತರಿಸಿ
ಸೋಲು ಸೋಲಿಗೆ ಮಣ್ಣನ ಹಾಕ್ಸಯ್ಯೋ ನಾ ನಿಲ್ಲುವವಳಲ್ಲ
ಸೋಲು ಸೋಲಿಗೆ ಮಣ್ಣನ ಹಾಕ್ಸಯ್ಯೋ ನಾ ನಿಲ್ಲುವವಳಲ್ಲ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಆರು ಸಾವಿರ ಕುರಿಗಳ ತರಿಸಿ
ಮೂರು ಸಾವಿರ ಕುಡುಗೋಲು ತರಿಸಿ
ಕಲ್ಲು ಕಲ್ಲಿಗೆ ರೈತವ ಬಿಡಿಸಯ್ಯೊ ನಾ ನಿಲ್ಲುವವಳಲ್ಲ
ಕಲ್ಲು ಕಲ್ಲಿಗೆ ರೈತವ ಬಿಡಿಸಯ್ಯೊ ನಾ ನಿಲ್ಲುವವಳಲ್ಲ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಒಂದು ಬಂಡೀಲಿ ವಿಳೇದಡಿಕೆ
ಒಂದು ಬಂಡೀಲಿ ಚಿಗಿಲಿ ತಮಟ
ಮೂಲೆ ಮೂಲೆಗು ಗಂಗಮ್ಮನ ಮಾಡಿಸಯ್ಯೊ ನಾ ನಿಲ್ಲುವವಳಲ್ಲ
ಮೂಲೆ ಮೂಲೆಗು ಗಂಗಮ್ಮನ ಮಾಡಿಸಯ್ಯೊ ನಾ ನಿಲ್ಲುವವಳಲ್ಲ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
Get More Here :
Kelo Madeva Kannada Song – kelo mahadeva kannada song lyrics
Devare neenu nijavappa lyrics in kannada
Madeshwara song lyrics in kannada
Mahadeshwara daya barade lyrics
Siddayya swamy banni lyrics in kannada
Ganga jatadhara lyrics in kannada
Adidavara manava balle song lyrics
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


