HomeLyricsMaate Poojaka Naanu Song Lyrics - ಮಾತೆ ಪೂಜಕ ನಾನು

Maate Poojaka Naanu Song Lyrics – ಮಾತೆ ಪೂಜಕ ನಾನು

Maate Poojaka Naanu Song Lyrics - ಮಾತೆ ಪೂಜಕ ನಾನು

Maate Poojaka Naanu Song Lyrics – ಮಾತೆ ಪೂಜಕ ನಾನು

 

 

ಮಾತೆ ಪೂಜಕ ನಾನು ಎನ್ನಯ
ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ
ಮೆರೆಯಲಿ ಒಂದೆ ಆಸೆಯು ಮನದಲಿ
 ಎಡರು ತೊಡರುಗಳೆಲ್ಲ ತುಳಿಯುತ
ಮುಂದೆ ನುಗ್ಗುವೆ ಭರದಲಿ
 ನಿನ್ನ ನಾಮ ನಿನಾದವಾಗಲಿ
ಶ್ರಮಿಪೆ ನಾ ಪ್ರತಿ ಕ್ಷಣದಲಿ
 ನಿನ್ನ ಗೌರವಕ್ಕೆದುರು ಬರುವ
ಬಲವ ಮುರಿವೆನು ಛಲದಲಿ
 ಜಗದ ಜನನಿ ಭಾರತ
ಇದ ಕೇಳಿ ನಲಿಯುವೆ ಮನದಲಿ
ಮಾತೆ ಪೂಜಕ ನಾನು ಎನ್ನಯ
ಶಿರವನಿಡುವೆನು ಅಡಿಯಲಿ
 ನಗುತ ನಲಿಯುವ ನಿನ್ನ ವದನವ
ನೋಡಿ ನಲಿಯುವುದೆನ್ನೆದೆ
 ನಿನ್ನ ದುಃಖಿತ ವದನ ವೀಕ್ಷಿಸೆ
ಸಿಡಿವುದೆನ್ನಯ ಹೃದಯವು
 ನಿನ್ನ ಮುಖದಲಿ ಗೆಲುವು
ತರಲು ನೀರುಗೈಯುವೆ ರಕ್ತವ
 ಎನ್ನ ಕಣಕಣ ತೇದು ಬಸಿಯುವೆ
ಪೂರ್ಣ ಜೀವನ ಶಕ್ತಿಯ
ಮಾತೆ ಪೂಜಕ ನಾನು ಎನ್ನಯ
ಶಿರವನಿಡುವೆನು ಅಡಿಯಲಿ
 ನಿನ್ನ ತೇಜವ ಜಗವು ನೋಡಲಿ
ಉರಿವ ದೀಪದ ತೆರದಲಿ
 ಎನ್ನ ಶಕ್ತಿಯ ಘೃತವು ಸತತವು
ಎರೆಯುತಿರುವೆನು ಭರದಲಿ
 ಮಾತೃಮಂದಿರ ಬೆಳಗುತಿರಲಿ
ನಾನೆ ನಂದಾ ದೀವಿಗೆ
 ಬತ್ತಿ ತೆರದಿ ದೇಹ ಉರಿಯಲಿ
ಸಾರ್ಥಕತೆ ಈ ಬಾಳಿಗೆ
 ಮಾತೆ ಪೂಜಕ ನಾನು ಎನ್ನಯ
ಶಿರವನಿಡುವೆನು ಅಡಿಯಲಿ
 ರುದ್ರನಾಗಿ ವಿರೋಧಿ ವಿಷವನು
ಭರದಿ ನಾನದ ನುಂಗುವೆ
 ಜಗವ ಮೆಚ್ಚಿಸಿ ಅದರ ಹೃದಯವ
ನಿನ್ನೆಡೆಗೆ ನಾ ಸೆಳೆಯುವೆ
 ಸೃಜಿಪೆ ಜಗದಲಿ ನಿನ್ನ ಪೂಜಿಪ
ಕೋಟಿ ಕೋಟಿ ಭಕ್ತರ
 ಕೀರ್ತಿ ಶಿಖರದಿ ಮಾತೆ ಮಂಡಿಸು
ಅರ್ಪಿಸುವೆ ನಾ ಸರ್ವವಾ
 ಮಾತೆ ಪೂಜಕ ನಾನು ಎನ್ನಯ
ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ(ಆಆಆಆಆ….)
ಮೆರೆಯಲಿ ಒಂದೆ ಆಸೆಯು ಮನದಲಿ
(ಆಆಆಆಆ…..)
ಒಂದೆ ಆಸೆಯು ಮನದಲಿ
(ಆಆಆಆಆ…..)
ಒಂದೆ ಆಸೆಯು ಮನದಲಿ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments