HomeNewsLife Story of Siddaramaiah - ಸಿದ್ದರಾಮಯ್ಯ| Kannada Folks

Life Story of Siddaramaiah – ಸಿದ್ದರಾಮಯ್ಯ| Kannada Folks

Leader Rooted in Social Justice

Life Story of Siddaramaiah – ಸಿದ್ದರಾಮಯ್ಯ| Kannada Folks

ಕರ್ನಾಟಕ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಪೂರ್ಣಾವಧಿಗೆ ಜವಾಬ್ದಾರಿ ನಿಭಾಯಿಸಿದ ಸಿದ್ದರಾಮಯ್ಯ ಅವರು ಸದ್ಯ ಕಾಂಗ್ರೆಸ್ ವಿರೋಧ ಪಕ್ಷದ ನಾಯಕರಾಗಿದ್ದಾರೆ. ತಮ್ಮ ರಾಜಕೀಯ ಅನುಭವ, ವಾಕ್‌ಚಾತುರ್ಯದಿಂದಲೇ ಹೆಸರುವಾಸಿಯಾದ ಇವರು, ಇದೀಗ 2023ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ.ವಿವಿಧ ಖಾತೆಗಳ ಸಚಿವರಾಗಿಯೂ ಅನುಭವ

Read this – Highlights news of the day-ದಿನದ ಪ್ರಮುಖ ಸುದ್ದಿಗಳು

ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನಹುಂಡಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹುಟ್ಟೂರು. 1948 ರ ಆಗಸ್ಟ್ 12 ರಂದು ಅವರು ಸಿದ್ಧರಾಮೇಗೌಡ-ಬೋರಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಅವಿಭಕ್ತ ಕುಟುಂಬ ಸದಸ್ಯರಾಗಿದ್ದ ಅವರು ಬಾಲ್ಯದಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತವರು. ಇಂದಿಗೂ ಆ ಕಲಾ ಪ್ರಕಾರಗಳಲ್ಲಿ ಆಸಕ್ತಿ ಉಳಿಸಿಕೊಂಡಿದ್ದಾರೆ.

10ನೇ ವಯಸ್ಸಿನವರೆಗೆ ಶಾಲೆ ಮೆಟ್ಟಿಲು ತುಳಿಯದ ಇವರು, ನೇರವಾಗಿ ಐದನೇ ತರಗತಿಗೆ ವಿದ್ಯಾಭ್ಯಾಸ ಮಾಡಿದರು. ಹೀಗೆ ಹುಟ್ಟೂರಿನಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣ ಪೂರೈಸಿದರು. ಬಿಎಸ್‌ಸಿ ಪೂರ್ಣಗೊಳಿಸಿದ ನಂತರ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದರು. ಬಳಿಕ ಹಲವು ವರ್ಷಗಳ ಕಾಲ ವಕೀಲಿಕೆ ವೃತ್ತಿಯನ್ನು ಹಿರಿಯರೊಬ್ಬರ ಬಳಿ ಪ್ರ್ಯಾಕ್ಟೀಸ್ ಮಾಡಿದರು.

ಸಿದ್ದರಾಮಯ್ಯನವರ ಬಾಲ್ಯ, ರಾಜಕೀಯ ಆರಂಭದ ಪರಿಚಯ ವಕೀಲಿಕೆ ವೃತ್ತಿ ಕಲಿಕೆ ಬಳಿಕ ಸಿದ್ದರಾಮಯ್ಯನವರು 1983ರಲ್ಲಿ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳ ಪಕ್ಷದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ವಿಜಯ ಪತಾಕೆ ಹಾರಿಸಿದರು. ಬಳಿಕ ಅವರು ಜನತಾಪಕ್ಷಕ್ಕೆ ಸೇರ್ಪಡೆಯಾದರು. ಆಗ ಅವರನ್ನು ಆಗಷ್ಟೇ ರಚಿಸಿದ ‘ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಮಾಡಲಾಯಿತು. ಅಲ್ಲಿ ಸಹ ದಕ್ಷತೆಯಿಂದ ಹೊಣೆ ನಿಭಾಯಿಸಿದರು. ನಂತರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದರು. ಪಶುಸಂಗೋಪನೆ ಸಚಿವರಾಗಿ ಮೊದಲ ಬಾರಿಗೆ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಅದಾದ ನಂತರ ಸಿದ್ದರಾಮಯ್ಯನವರ ಅದೃಷ್ಟ ಕೈ ಕೊಟ್ಟಿತ್ತು. ಕಾರಣ ಆಗ ಕಾಂಗ್ರೆಸ್ ಅಲೆ ಎಲ್ಲೆಡೆ ಆರಂಭವಾಗಿತ್ತು.

Read this – Nimika ratnakar signed to act new film Wild Tiger Safari’

ವಿವಿಧ ಖಾತೆಗಳ ಸಚಿವರಾಗಿಯೂ ಅನುಭವ ಕಾಂಗ್ರೆಸ್ ಅಲೆ ಆರಂಭದ ನಂತರ ಕಾರಣಾಂತರಗಳಿಂದ ಜನತಾ ಪಕ್ಷ ಇಬ್ಬಾಗ ಆಯಿತು. ಈ ವೇಳೆ ಸಿದ್ದರಾಮಯ್ಯ ಜನತಾದಳ (ಜಾತ್ಯಾತೀತ) ಪಕ್ಷ ಸೇರಿದರು. ಇದಾದ ಬಳಿಕ ಮತ್ತೆ ಗೆಲುವಿನ ಕುದುರೆಯಂತಾದ ಸಿದ್ದರಾಮಯ್ಯನವರು 1994 ರಲ್ಲಿ ಚುನಾವನಣೆಯಲ್ಲಿ ಗೆದ್ದು ಹಣಕಾಸು ಖಾತೆ ಸಚಿವರೂ ಆಗಿ ಅನುಭವ ಪಡೆದರು. ಚುನಾವಣೆ ವೇಳೆ ಜನತಾ ದಳ ಎರಡು (1999) ಭಾಗವಾಯಿತು. ಅದಾದ ವರ್ಷ ಚುನಾವಣೆಯಲ್ಲಿ ಸೋಲು ಕಂಡರು. 2004ರಲ್ಲಿ ಸಿದ್ದರಾಮಯ್ಯನವರು ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರೂ ಸಹ ಅಂದು ಎದುರಾದ ಅತಂತ್ರ ವಿಧಾನಸಭೆ ಸ್ಥಿತಿಯಿಂದಾಗಿ ಕಾಂಗ್ರೆಸ್ ಜತೆಗೂಡಿ ಜನತಾದಳಿ ಸರ್ಕಾರ ರಚನೆ ಮಾಡಿತು. ಅಂದು ಅವರು ಎರಡನೇ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು. ನಂತರ ಸಿದ್ದರಾಮಯ್ಯರನ್ನು ಜನತಾದಳಿದಿಂದ ಹೊರದಬ್ಬಲಾಯಿತು.

2008-12ರವರೆಗೆ ಐದು ವರ್ಷ ಪೂಣಾವಧಿಗೆ ಸಿಎಂ ಇದಾದ ಮೇಲೆ ಕಾಂಗ್ರೆಸ್‌ ಸೇರಿದ ಸಿದ್ದರಾಮಯ್ಯ ಅವರು 2008ರಲ್ಲಿ ಗೆಲುವು ಸಾಧಿಸಿದರು. ಅಲ್ಲಿಂದ 2012ರವರೆಗೆ ಐದು ವರ್ಷಗಳ ಪೂರ್ಣಾವಧಿಗೆ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಬಳಿಕ 2013ರಲ್ಲಿ ಕಾಂಗ್ರೆಸ್‌ ಪಕ್ಷದಿಂದಲೇ ಮುಖ್ಯಮಂತ್ರಿ ಅಭ್ಯರ್ಥಿಯಾದರು. ಅದಾದ ಬಳಿಕ 2018ರಲ್ಲಿ ಜೆಡಿಎಸ್ ಜೊತೆ ಸೇರಿ ಮೈತ್ರಿ ರಚನೆ ಮಾಡುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ನಂತರ ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂಬ ಮಾಜಿ ಮುಖ್ಯಮಂತ್ರಿ ಜೆಡಿಎಸ್‌ನ ಎಚ್‌.ಡಿ ಕುಮಾರಸ್ವಾಮಿಯವರ ಟೀಕೆಗೆ ಗುರಿಯಾದರು.

Read this – Life Story of Shamanur Shivashankarappa ಶಾಮನೂರು ಶಿವಶಂಕರಪ್ಪ| Kannada Folks

2023ರಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆ? ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರು ಐದ ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಅಲ್ಲದೇ ಮೂರು ಬಾರಿ ಸೋಲು ಕಂಡಿದ್ದು, ರಾಜಕೀಯದಲ್ಲಿ ಒಟ್ಟು 8 ಬಾರಿ ಗೆಲುವು ನನ್ನದಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯವಾಗಿ ಶಕ್ತಿ ನೀಡಿದ ಕ್ಷೇತ್ರ, ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಆಗಾಗ ಹೇಳಿದ್ದು ಇದು. ಆದರೆ 2018ರಲ್ಲಿ ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಸದ್ಯ ಮುಂಬರಲಿರುವ ವಿಧಾನಸಭೆ ಚುನಾವಣೆ (2023) ಎದರಿಸಲು ಸಜ್ಜಾಗಿರುವ ಅವರು ಹೈಕಮಾಂಡ್ ಒಪ್ಪಿದರೆ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇತ್ತ ಅವರಿಗೆ ಬೆಂಗಳೂರಿನ ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆಯೂ ಆಹ್ವಾನ ಬಂದಿದ್ದರ ಬಗ್ಗೆ ಚರ್ಚೆಗಳು ನಡೆದಿದ್ದವು.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×