Life Story of Basavaraj Horatti – ಬಸವರಾಜ ಹೊರಟ್ಟಿ| Kannada Folks
ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರ ಸತತ ಆರನೇ ಬಾರಿ ಗೆಲುವು ಸಾಧಿಸಿ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಆದರೆ, ಜೆಡಿಯುನ ಎಂ ಪಿ ನಾಡಗೌಡ ಅವರಿಗೆ ಈ ಬಾರಿ ಅದೃಷ್ಟ ಕೈಕೊಟ್ಟಿದೆ. ಬಸವರಾಜ ಹೊರಟ್ಟಿ ಅವರು 5ನೇ ಹಂತದ ಕೊನೆಗೆ 7699 ಮತಗಳನ್ನು ಪಡೆದು ಪುನರಾಯ್ಕೆಗೊಂಡರು. ಇದರಿಂದ ಹೊರಟ್ಟಿ 6ನೇ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಗಳಿಸಿದಂತಾಯಿತು. ವಿಧಾನ ಪರಿಷತ್ತಿನ ಹೆಚ್ಚು ಬಾರಿ ಆಯ್ಕೆಯಾದ ವ್ಯಕ್ತಿ ಎಂದು ಗೌರವಕ್ಕೂ ಹೊರಟ್ಟಿ ಪಾತ್ರರಾದರು.
Read this – ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold| kannadafolks
ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ವಾಯುವ್ಯ6 ಪದವೀಧರ ಕ್ಷೇತ್ರದಿಂದ ನಾಲ್ಕನೇ ಬಾರಿ ಆಯ್ಕೆ ಬಯಸಿ ನಾಡಗೌಡ ಅಖಾಡದಲ್ಲಿದ್ದರು. ಆದರೆ, ಅವರಿಗೆ ಕಾಂಗ್ರೆಸ್ ನ ಮಹಾಂತೇಶ್ ಕೌಜಲಗಿ ಹೊಡೆತ ಕೊಟ್ಟರು. ಇನ್ನೊಂದು ಕ್ಷೇತ್ರದಲ್ಲಿ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಆಡಳಿತರೂಢ ಬಿಜೆಪಿಯ ಅರುಣ್ ಶಹಾಪುರ ಪಕ್ಷೇತರ ಅಭ್ಯರ್ಥಿ ಆರ್ ಬಿ ಬನ್ನೂರು ಅವರನ್ನು ಮಣಿಸಿ ಜಯಭೇರಿ ಬಾರಿಸಿದರು. ಅರುಣ್ ಶಹಾಪುರ ಅವರ ಗೆಲುವು ಬಿಜೆಪಿಗೆ ಬೋನಸ್ ಆಗಿದೆ.
Support Us 


