Learn more about shiva – ಶಿವನ ಬಗ್ಗೆ ಇನ್ನಷ್ಟು ತಿಳಿಯಿರಿ
ಶಿವ (ಮಂಗಳಕರನು) ಹಾಗೂ ಮಹಾದೇವ (ದೇವರುಗಳಿಗೆ ದೇವರು) ಶಿವನು ಹಿಂದೂ ಧರ್ಮದ ಪ್ರಮುಖ ದೇವರು. ಶಿವನು ತ್ರಿಮೂರ್ತಿಗಳಲ್ಲಿ ಒಬ್ಬನ್ನು, ಇತರರು ಬ್ರಹ್ಮ ಮತ್ತು ವಿಷ್ಣು, ಶೈವ ಸಂಪ್ರದಾಯಲ್ಲಿ ಶಿವನೂ ಸರ್ವೋಚ್ಚನಾಗಿದ್ದಾನೆ, ಈತನು ಜಗತ್ತಿನ ಸೃಷ್ಟಿ, ರಕ್ಷಣೆ, ಮತ್ತು ಪರಿವರ್ತನೆಯ ದೈವ. ಆದಿಶಕ್ತಿ ಕೇಂದ್ರಿತ ಶಕ್ತ ಸಂಪ್ರದಾಯದಲ್ಲಿ ಶಿವನು ದೇವಿಯ ಪತಿ ಮತ್ತು ಸರಿಸಮನನಾಗಿದ್ದಾನೆ. ಸ್ಮಾರ್ತ ಸಂಪ್ರದಾಯದ ಐದು ಪ್ರಮುಖ ದೇವರಲ್ಲಿ ಶಿವನು ಒಬ್ಬನು. ಶಿವನು ಶಾಂತ ಹಾಗೂ ರೌದ್ರ ಸ್ವರೂಪನು, ಶಾಂತ ರೂಪದಲ್ಲಿ ಯೋಗಿಯಾಗಿ ವೈರಾಗ್ಯ ಜೀವನವನ್ನು ಮತ್ತು ಸಂಸಾರಿಯಾಗಿ ಪತ್ನಿ ಪಾರ್ವತಿ ಹಾಗೂ ಮಕ್ಕಳು ಗಣೇಶ, ಕಾರ್ತಿಕೇಯನ ಜೊತೆ ಇರವನು.ರೌದ್ರ ರೂಪದಲ್ಲಿ ದುಷ್ಟರನ್ನು ಸಂಹರಿಸುವ ಮಹಾಕಾಲ, ಭೈರವ, ವೀರಭದ್ರ ಹಾಗೂ ಇತರ ರೂಪಗಳನ್ನು ಅವತರಿಸಿದ್ದಾನೆ.
Read this – Forest Lady Padma Shri Tulsi Gowda Life Story
ಶಿವನು ಯೋಗ, ಧ್ಯಾನ ಮತ್ತು ಕಲೆಯ ದೇವರಾಗಿ ಆದಿಯೋಗಿ, ನಟರಾಜ ಎಂಬ ರೂಪವನ್ನು ಸಹ ಹೊಂದಿದ್ದಾನೆ.ಶಿವನು ಪ್ರತಿಮಾಶಾಸ್ತ್ರದ ಪ್ರಕಾರ, ಕೊರಳಲ್ಲಿ ಸರ್ಪಗಳ ರಾಜ ವಾಸುಕಿ, ಕೇಶದಲ್ಲಿ ಅರ್ಧಚಂದ್ರ, ಗಂಗೆ, ಮತ್ತು ಹಣೆಯ ಮೇಲೆ ಮೂರನೇ ಕಣ್ಣು, ಕೈಯಲ್ಲಿ ತ್ರಿಶೂಲ ಮತ್ತು ಡಮರುನ್ನು ಹೊಂದಿದ್ದಾನೆ. ಶಿವನನ್ನು ಬಹುತೇಕವಾಗಿ ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ.ಶಿವನಿಗೆ ವೇದಪೂರ್ವದ ಇತಿಹಾಸವಿದೆ. ಶಿವನ ಸುಗುಣ ಆಕೃತಿಯು ವಿವಿಧ ಹಳೆಯ ವೈದಿಕವಲ್ಲದ ಮತ್ತು ವೈದಿಕ ದೇವತೆಗಳ ಸಂಯೋಜನೆಯಾಗಿ ಒಂದೇ ಪ್ರಮುಖ ದೇವರಾಗಿ ವಿಕಸನಗೊಂಡಿದೆ.ಶಿವ ಸರ್ವ ಹಿಂದೂ ದೇವನಾಗಿ ಪ್ರಮುಖವಾಗಿ ಭಾರತ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ , ಇಂಡೋನೇಷಿಯಾ ದೇಶದಲ್ಲಿ ಪೂಜಿಸಲ್ಪಡುತ್ತಾನೆ.
ಸಂಸ್ಕೃತ ಭಾಷೆಯಲ್ಲಿ ಶಿವ ಅಂದರೆ “ಶುಭಕರ, ಅನುಕೂಲಕರ, ಸೌಮ್ಯ, ದಯೆ, ಸ್ನೇಹಪರ” ಎಂದರ್ಥ ಜಾನಪದ ಮೂಲಗಳ ಪ್ರಕಾರ ಶಿವ ಎಂಬ ಹೆಸರು ಶಿ “ಇವರಲ್ಲಿ ಎಲ್ಲವೂ ಅಡಗಿದೆ, ವ್ಯಾಪಕತೆ, ಮತ್ತು ವ “ಕೃಪೆಯ ಸಾಕಾರ” ಎಂಬುದಾಗಿದೆ.
ಋಗ್ವೇದದ ಕಾಲದಲ್ಲಿ “ಶಿವ” ಎಂಬ ಹೆಸರನ್ನು “ರುದ್ರ” ಹೆಸರಿನ ವಿಶೇಷ ಗುಣವಾಚಕವಾಗಿ ಬಳಸಲಾಗುತ್ತಿತ್ತು. ಶಿವ ಎಂಬ ಹೆಸರಿನ ಅರ್ಥವು “ಮುಕ್ತಿ ಅಥವಾ ಅಂತಿಮ ವಿಮೋಚನೆ” ಮತ್ತು “ಶುಭದಾಯಕ” ಎಂದು ಸಹ ಹೇಳಲಾಗುತ್ತದೆ; ಈ ವಿಶೇಷಣವನ್ನು ವೈದಿಕ ಸಾಹಿತ್ಯದಲ್ಲಿ ಅನೇಕ ದೇವತೆಗಳಿಗೆ ಸಂಬೋಧಿಸಲಾಗಿದೆ. ಈ ಪದವು ವೈದಿಕ “ರುದ್ರ-ಶಿವ” ದಿಂದ ಮಹಾಕಾವ್ಯಗಳು ಮತ್ತು ಪುರಾಣಗಳಲ್ಲಿ “ಶಿವ” ಎಂಬ ನಾಮಪದಕ್ಕೆ “ಸೃಷ್ಟಿಕರ್ತ, ಪುನರುತ್ಪಾದಕ ಮತ್ತು ದುಷ್ಠವಿನಾಶ” ಎಂಬ ಒಬ್ಬ ಮಂಗಳಕರ ದೇವರ ಹೆಸರಾಗಿ ಬಳಕೆಗೆ ಬಂದಿತು.
Read this – Chitradurga Uncle Love Story Man Murdered ಲವ್ ಕಹಾನಿ!
ಇನ್ನೊಂದು ವಾದದ ಪ್ರಕಾರ ಶಿವ ಎಂಬ ಹೆಸರು ಸಂಸ್ಕೃತದ “ಶರ್ವ್” ಎಂಬ ಪದದಿಂದ ಬಂದಿದೆ ಇದರರ್ಥ “ದುಷ್ಠ ವಿನಾಶಕ” ಎಂಬುದಾಗಿದೆ.ಸಂಸ್ಕೃತದ “ಶೈವ” ಪದವು “ಶಿವ ದೇವರಿಗೆ ಸಂಬಂಧಿಸಿದವರು” ಅಥವಾ “ಶಿವನ ಅನುಯಾಯಿಗಳು” ಎಂಬರ್ಥವನ್ನು ಕೊಡುತ್ತದೆ, ಈ ಪದವು ಹಿಂದೂ ಧರ್ಮದ ಪ್ರಮುಖ ಪಂಥಗಳಲ್ಲಿ ಒಂದಕ್ಕೆ ಮತ್ತು ಆ ಪಂಥದ ಸದಸ್ಯರಿಗೆ ಸಂಸ್ಕೃತದ ಹೆಸರಾಗಿದೆ. ಶೈವ ಸಂಪ್ರದಾಯದ ಕೆಲವು ನಂಬಿಕೆಗಳು ಮತ್ತು ಆಚರಣೆಗಳನ್ನು ನಿರೂಪಿಸಲು ಇದನ್ನು ವಿಶೇಷಣವಾಗಿ ಬಳಸಲಾಗುತ್ತದೆ.
ಕೆಲವು ಲೇಖಕರು ಶಿವನ ಹೆಸರನ್ನು ತಮಿಳು ಪದ “ಶಿವಪ್ಪು” ಅಂದರೆ “ಕೆಂಪು” ನೊಂದಿಗೆ ಸಂಯೋಜಿಸುತ್ತಾರೆ, ಶಿವನು ಸೂರ್ಯನಿಗೆ ಅಥವಾ ಬೆಂಕಿಗೆ ಸಂಬಂಧಿಸಿದ್ದಾನೆ ಎಂಬ ಅಭಿಪ್ರಾಯ ಅವರದ್ದು, ( ತಮಿಳಿನಲ್ಲಿ “ಶಿವನ್” ಅಂದರೆ “ಕೆಂಪು” ) ಮತ್ತು ರುದ್ರನನ್ನು ಋಗ್ವೇದದಲ್ಲಿ “ಬಭ್ರು” (ಕಂದು ಅಥವಾ ಕೆಂಪು) ಎಂದೂ ಸಹ ಕರೆಯಲಾಗುತ್ತದೆ.
ವಿಷ್ಣು ಸಹಸ್ರನಾಮದಲ್ಲಿ “ಶಿವ” ಎಂಬ ಹೆಸರನ್ನು “ಶುದ್ಧ” ಮತ್ತು ಪ್ರಕೃತಿಯ ಮೂರು ಗುಣಗಳಾದ “ಸಾತ್ವಿಕ, ರಜಸ್ ಮತ್ತು ತಮಸ್ಸು” ಗಳಿಂದ ಪ್ರಭಾವಿತನಾಗದವನು ಎಂದು ವ್ಯಾಖ್ಯಾನಿಸಿದೆ.ಶಿವನಿಗೆ ಅತ್ತ್ಯುನ್ನತ ಹೆಸರು ಮಹಾದೇವ (ದೇವರಿಗೆ ದೇವರು), ಮತ್ತು ಪರಮೇಶ್ವರ (ಸರ್ವ್ಚೊಚ್ಚ ದೇವರು). ಶಿವನನ್ನು ವಿಶ್ವನಾಥ, ಮಂಜುನಾಥ, ಮಹೇಶ್ವರ, ಶಂಕರ, ಶಂಭು, ರುದ್ರ, ಹರ, ನೀಲಕಂಠ, ವೀರಭದ್ರ, ಭೈರವ, ಮಹಾಕಾಲ, ಶುಭಂಕರ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.
Read this – Dasara Day 1- Story of goddess shailaputri: Navarathri Vibhava
ಸಹಸ್ರನಾಮವು ಮಧ್ಯಕಾಲದ ಭಾರತೀಯ ಪಠ್ಯಗಳಾಗಿದ್ದು, ಇದು ದೇವತೆಯ ಅಂಶಗಳು ಮತ್ತು ವಿಶೇಷಣಗಳಿಂದ ಪಡೆದ ಸಾವಿರ ಹೆಸರುಗಳನ್ನು ಪಟ್ಟಿಮಾಡುತ್ತದೆ.ಶಿವನ ಅನೇಕ ಹೆಸರುಗಳನ್ನು ಪಟ್ಟಿಮಾಡುವ ಶಿವ ಸಹಸ್ರನಾಮದ ಕನಿಷ್ಠ ಎಂಟು ವಿಭಿನ್ನ ಆವೃತ್ತಿಗಳಿವೆ.”ಮಹಾಭಾರತದ” ಪುಸ್ತಕ 13ರಲ್ಲಿ “ಅನುಶಾಸನಪರ್ವನ್” ಆವೃತ್ತಿಯು ಅಂತಹ ಒಂದು ಪಟ್ಟಿಯನ್ನು ಒದಗಿಸುತ್ತದೆ. ಶಿವನಿಗೆ “ಮಹನ್ಯಾಸ”ದಲ್ಲಿ ಕಂಡುಬರುವ “ದಶ-ಸಹಸ್ರನಾಮಗಳು” (10,000 ಹೆಸರುಗಳು) ಇವೆ. “ಶ್ರೀ ರುದ್ರಂ ಚಮಕಂ” ಅಥವಾ “ಶತರುದ್ರಿಯ”, ಇದು ಶಿವನನ್ನು ಅನೇಕ ಹೆಸರುಗಳಿಂದ ಸ್ತುತಿಸುವ ಭಕ್ತಿ ಸ್ತೋತ್ರವಾಗಿದೆ.