Homeಕನ್ನಡ ಫೊಕ್ಸ್ನವರಾತ್ರಿಯ ನಾಲ್ಕನೇ ದಿನವನ್ನು ಹೇಗೆ ಆಚರಿಸುತ್ತಾರೆ?- Navratri Celebration

ನವರಾತ್ರಿಯ ನಾಲ್ಕನೇ ದಿನವನ್ನು ಹೇಗೆ ಆಚರಿಸುತ್ತಾರೆ?- Navratri Celebration

ನವರಾತ್ರಿ ಕುಶ್ಮಾಂಡಾ ದೇವಿಯ ಆರಾಧನೆಯ 4ನೇ ದಿನ ಆಚರಣೆ

ನವರಾತ್ರಿ ಕುಶ್ಮಾಂಡಾ ದೇವಿಯ ಆರಾಧನೆಯ 4ನೇ ದಿನ ಆಚರಣೆ

ಪ್ರಸ್ತುತ 2025ರ ಶಾರದೀಯಾ ನವರಾತ್ರಿ ನಡೆಯುತ್ತಿದೆ. ನವರಾತ್ರಿಯ ನಾಲ್ಕನೇ ದಿನದಂದು, ಕೂಷ್ಮಾಂಡ ದೇವಿಯನ್ನು ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಅನಾರೋಗ್ಯ, ದುಃಖ ಮತ್ತು ಚಿಂತೆ ದೂರವಾಗುತ್ತದೆ. ಸಂಪತ್ತು, ಖ್ಯಾತಿ ಮತ್ತು ಆದಾಯ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ. ಈ ದಿನದಂದು ದುರ್ಗಾ ದೇವಿಯ ನಾಲ್ಕನೇ ರೂಪವನ್ನು ಪೂಜಿಸುವುದರಿಂದ ಮನೆಗೆ ಸಂತೋಷ, ಸಮೃದ್ಧಿ ಮತ್ತು ಪ್ರಗತಿ ಸಿಗುತ್ತದೆ ಎಂದು ನಂಬಲಾಗಿದೆ.

ಕೂಷ್ಮಾಂಡ ದೇವಿ ಪೂಜೆ ಮುಹೂರ್ತ

ದೃಕ್ ಪಂಚಾಂಗದ ಪ್ರಕಾರ, ಈ ದಿನ ಸೂರ್ಯ ಕನ್ಯಾರಾಶಿಯಲ್ಲಿ ಮತ್ತು ಚಂದ್ರ ತುಲಾರಾಶಿಯಲ್ಲಿ ಇರುತ್ತಾನೆ.

ಅಭಿಜಿತ್ ಮುಹೂರ್ತ ಬೆಳಿಗ್ಗೆ 11:48 ರಿಂದ ಮಧ್ಯಾಹ್ನ 12:37 ರವರೆಗೆ ಇರುತ್ತದೆ.

ರಾಹುಕಾಲ ಮಧ್ಯಾಹ್ನ 1:43 ರಿಂದ ಮಧ್ಯಾಹ್ನ 3:13 ರವರೆಗೆ ಪ್ರಾರಂಭವಾಗುತ್ತದೆ.ನವರಾತ್ರಿ 2025ರ 4ನೇ ದಿನ ಕೂಷ್ಮಾಂಡ ದೇವಿ ಪೂಜೆ ಮುಹೂರ್ತ

Read this-Dasara festival story Pooja of Nine Goddess

ಕೂಷ್ಮಾಂಡ ದೇವಿ ಪೂಜೆ ವಿಶೇಷತೆ

ನವರಾತ್ರಿ 2025ರ 4ನೇ ದಿನದಂದು ಕೂಷ್ಮಾಂಡ ದೇವಿ ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ಆಕೆಗೆ ನೆಚ್ಚಿನ ಖಾದ್ಯವಾದ ಮಾಲ್ಪುವಾವನ್ನು ಅರ್ಪಿಸಬೇಕು. ಇದರ ಜೊತೆಗೆ, ಮೊಸರು ಮತ್ತು ಹಲ್ವಾವನ್ನು ತಾಯಿಗೆ ಅರ್ಪಿಸಬಹುದು. ಕೂಷ್ಮಾಂಡ ದೇವಿಗೆ ನೆಚ್ಚಿನ ಆಹಾರವನ್ನು ಅರ್ಪಿಸುವ ಮೂಲಕ, ಭಕ್ತನು ಬಯಸಿದ ಫಲಿತಾಂಶಗಳನ್ನು ಪಡೆಯುತ್ತಾನೆ ಎನ್ನುವ ನಂಬಿಕೆಯಿದೆ. ಹಿಂದೂ ನಂಬಿಕೆಗಳ ಪ್ರಕಾರ, ಕೂಷ್ಮಾಂಡ ದೇವಿಯು ಕೆಂಪು ಬಣ್ಣದ ಹೂವುಗಳನ್ನು ಪ್ರೀತಿಸುತ್ತಾಳೆ, ಉದಾಹರಣೆಗೆ ಕೆಂಪು ಕಮಲ, ಕೆಂಪು ದಾಸವಾಳ ಮತ್ತು ಚೆಂಡುಹೂವು ಇತ್ಯಾದಿ. ಕೂಷ್ಮಾಂಡ ದೇವಿಗೆ ಕೆಂಪು ಹೂವುಗಳನ್ನು ಅರ್ಪಿಸುವುದು ಅವಳ ಆಶೀರ್ವಾದವನ್ನು ಪಡೆಯುವಿರಿ ಎಂದು ಹೇಳಲಾಗುತ್ತದೆ. ಹಾಗೂ ಈ ದಿನದಂದು ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕು.ನವರಾತ್ರಿ 2025ರ 4ನೇ ದಿನದ ಮಹತ್ವವೇನು.?

Read this-ದಸರಾ ಖೀರ್ ಪಾಕವಿಧಾನ Dassahra Kheer Recipe in kannada

ಕೂಷ್ಮಾಂಡ ದೇವಿ ಪೂಜೆ ವಿಧಾನ

– ನವರಾತ್ರಿ 2025ರ 4ನೇ ದಿನ ಮುಂಜಾನೆ ಬೇಗ ಎದ್ದು ಶುದ್ದವಾದ ಬಟ್ಟೆಯನ್ನು ಧರಿಸಿ.

– ಕೂಷ್ಮಾಂಡ ದೇವಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ.

– ಆಕೆಗೆ ಸಿಂಧೂರವನ್ನು ಮತ್ತು ಹೂವಿನ ಮಾಲೆಯನ್ನು ಅರ್ಪಿಸಿ.

– ಆಯಾ ಋತುಮಾನಕ್ಕೆ ದೊರೆಯುವ 5 ಹಣ್ಣುಗಳನ್ನು ಆಕೆಗೆ ಅರ್ಪಿಸಿ.

​- ದುರ್ಗಾ ಚಾಲೀಸಾ ಮತ್ತು ದುರ್ಗಾ ಸಪ್ತ‍ಶತಿಯನ್ನು ಪಠಿಸಿ.

– ದೇವಿಗೆ ಮೀಸಲಾದ ಮಂತ್ರಗಳನ್ನು ಪಠಿಸಿ.

– ದೇವಿಗೆ ಆರತಿಯನ್ನು ಮಾಡಿ ಪ್ರಸಾದವನ್ನು ಅರ್ಪಿಸಿ.ಕೂಷ್ಮಾಂಡ ದೇವಿ ಮಂತ್ರ

Read thisDasara Day 1- Story of goddess shailaputri: Navarathri Vibhava

ಕೂಷ್ಮಾಂಡ ದೇವಿ ಮಂತ್ರ

– ಓಂ ದೇವಿ ಕೂಷ್ಮಾಂಡಾಯೈ ನಮಃ

– ಐಂ ಹ್ರೀಂ ಕ್ಲೀಂ ಕೂಷ್ಮಾಂಡಾಯೈ ನಮಃ

– ಯಾ ದೇವಿ ಸರ್ವಭೂತೇಷು

ಮಾಂ ಕೂಷ್ಮಾಂಡ ರೂಪೇಣ ಸಂಸ್ಥಿತಾ

ನಮಸ್ತ್ಯೈ ನಮಸ್ತೈ ನಮಸ್ತೈ ನಮೋ ನಮಃ

– ಸುರಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ|

ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ||

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×