Kohli’s All Time RCB XI-RCB ಸಾರ್ವಕಾಲಿಕ 11 ಹೆಸರು ಮಾಡಿದ ಕೊಹ್ಲಿ
IPL 2026 Schedule: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2026) ಮಾರ್ಚ್ 28 ರಿಂದ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ.
Read this : Boss Film Faces Halt-ಬಾಸ್ ಸಿನಿಮಾಗೆ ನಿಲ್ಲಿಕೆ ನೋಟಿಸ್ |Kannada Folks
ವಿರಾಟ್ ಕೊಹ್ಲಿ ಕಳೆದ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಣಕ್ಕಿಳಿದಿದ್ದಾರೆ. ಈ ಹದಿನೆಂಟು ವರ್ಷಗಳಲ್ಲಿ ಅನೇಕ ಆಟಗಾರರು ಬಂದು ಹೋಗಿದ್ದಾರೆ. ಇವರಲ್ಲಿ ಕೆಲವರು ಆರ್ಸಿಬಿ ತಂಡದ ಆಲ್ ಟೈಮ್ ಫೇವರೇಟ್ ಆಗಿ ಗುರುತಿಸಿಕೊಂಡರೆ, ಇನ್ನು ಕೆಲವರು ಮಿಂಚಿ ಮರೆಯಾಗಿದ್ದಾರೆ. ಹೀಗೆ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡ ಅತ್ಯುತ್ತಮ ಆಟಗಾರರನ್ನು ಒಳಗೊಂಡಿರುವ ಸಾರ್ವಕಾಲಿಕ ಇಲೆವೆನ್ ಹೆಸರಿಸಿದ್ದಾರೆ ವಿರಾಟ್ ಕೊಹ್ಲಿ. ಈ ಹನ್ನೊಂದು ಆಟಗಾರರಲ್ಲಿ ಇಬ್ಬರು ಕನ್ನಡಿಗರು ಕೂಡ ಕಾಣಿಸಿಕೊಂಡಿರುವುದು ವಿಶೇಷ.
ವಿರಾಟ್ ಕೊಹ್ಲಿ ತಮ್ಮ ಸಾರ್ವಕಾಲಿಕ ಇಲೆವೆನ್ನಲ್ಲಿ ಆರಂಭಿಕರಾಗಿ ಆಯ್ಕೆ ಮಾಡಿದ್ದು ಲೆಜೆಂಡ್ ಕ್ರಿಸ್ ಗೇಲ್ ಅವರನ್ನು. ಕ್ರೀಸ್ ಗೇಲ್ ಜೊತೆ ಆರಂಭಿಕನಾಗಿ ತನ್ನನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಆಪತ್ಭಾಂಧವ ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರನ್ನು ಹೆಸರಿಸಿದ್ದಾರೆ.
ನಾಲ್ಕನೇ ಕ್ರಮಾಂಕಕ್ಕೆ ಕನ್ನಡಿಗ ಕೆಎಲ್ ರಾಹುಲ್ ಅವರ ಹೆಸರು ಸೂಚಿಸಿದ್ದಾರೆ. ಇನ್ನು ಐದನೇ ಕ್ರಮಾಂಕಕ್ಕೆ ಪ್ರಸ್ತುತ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಿದ್ದಾರೆ.
ವಿಕೆಟ್ ಕೀಪರ್ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ ಆಯ್ಕೆ ಮಾಡಿರುವುದು ದಿನೇಶ್ ಕಾರ್ತಿಕ್ ಅವರನ್ನು. ಇನ್ನು ವೇಗಿಗಳಾಗಿ ಹರ್ಷಲ್ ಪಟೇಲ್, ಡೇಲ್ ಸ್ಟೈನ್ ಹಾಗೂ ಮಿಚೆಲ್ ಸ್ಟಾರ್ಕ್ ಅವರನ್ನು ಹೆಸರಿಸಿದ್ದಾರೆ.
ಹಾಗೆಯೇ ಸ್ಪಿನ್ನರ್ಗಳಾಗಿ ಕನ್ನಡಿಗ ಅನಿಲ್ ಕುಂಬ್ಳಿ ಹಾಗೂ ಯುಜ್ವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಅಂದರೆ ಕಿಂಗ್ ಕೊಹ್ಲಿ ಹೆಸರಿಸಿದ ಸಾರ್ವಕಾಲಿಕ ಇಲೆವೆನ್ನಲ್ಲಿ ಐವರು ಬೌಲರ್ಗಳಿದ್ದರೆ, ಆರು ಬ್ಯಾಟರ್ಗಳು ಕಾಣಿಸಿಕೊಂಡಿದ್ದಾರೆ.
ಇನ್ನು ಈ ಇಲೆವೆನ್ನ ನಾಯಕನನ್ನಾಗಿ ಆಯ್ಕೆ ಮಾಡಿರುವುದು ರಜತ್ ಪಾಟಿದಾರ್ ಅವರನ್ನು ಎಂಬುದು ವಿಶೇಷ. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಂತಹ ಪಾಟಿದಾರ್ ಅವರನ್ನು ತಮ್ಮ ಸಾರ್ವಕಾಲಿಕ ಇಲೆವೆನ್ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದಾರೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


