Know the Todays Gold Rate-ಇಲ್ಲಿದೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ

ಬೆಂಗಳೂರಿನಲ್ಲಿ 10 ಗ್ರಾಂ ಗೆ ಚಿನ್ನದ ಬೆಲೆ 1,54,910 ರೂ. ಮತ್ತು ಹೈದರಾಬಾದ್ನಲ್ಲಿ 1,55,030 ರೂ. ವಹಿವಾಟು ನಡೆಸುತ್ತಿದೆ. ಈ ಎರಡೂ ನಗರಗಳಲ್ಲಿ ಬೆಳ್ಳಿ ಬೆಲೆಯೂ ಹೆಚ್ಚು ಭಿನ್ನವಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಕೆಜಿಗೆ 2,42,270 ರೂ. ಮತ್ತು ಹೈದರಾಬಾದ್ನಲ್ಲಿ ಪ್ರತಿ ಕೆಜಿಗೆ ₹2,42,460 ರೂ. ಇದೆ.
ಅದೇ ರೀತಿ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 1,54,580 ರೂ. ಮತ್ತು ಪ್ರತಿ ಕೆಜಿ ಬೆಳ್ಳಿ ಬೆಲೆ 2,41,760 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಫೆ.18ರಂದು ಚಿನ್ನದ ಬೆಲೆ ತಟಸ್ಥ ಆಗಿದ್ದನ್ನು ನಾವು ಇಲ್ಲಿ ಉಲ್ಲೇಖಿಸಬಹುದು.
ಇನ್ನು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಚಿನ್ನದ ಬೇಡಿಕೆ ಮತ್ತು ಬೆಲೆಗಳು ಎಂದಿನಂತೆ ಹೆಚ್ಚಿವೆ. ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನವು 10 ಗ್ರಾಂ ಗೆ 1,55,240 ರೂ. ಆಗಿದ್ದರೆ, ಬೆಳ್ಳಿ ಬೆಲೆಗಳು ಪ್ರತಿ ಕಿಲೋಗ್ರಾಂ ಗೆ 2,42,780 ರೂ. ಇದೆ.
ಹಾಗೆಯೇ ಮಹಾರಾಷ್ಟ್ರ ರಾಜಧಾನಿ ಮುಂಬೈನ ಬುಲಿಯನ್ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 1,54,790 ರೂ. ಇದ್ದು, ಬೆಳ್ಳಿ ಬೆಲೆ ಪ್ರತಿ ಕಿಲೋಗ್ರಾಂ ಗೆ 2,42,080 ರೂ.ಗೆ ತಲುಪಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕUಡ ಚಿನ್ನ-ಬೆಳ್ಳಿ ದರ ಏರಿಕೆಯಾಗಿದ್ದು, ಇಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 1,54,520 ರೂ. ಆಗಿದೆ. ಏತನ್ಮಧ್ಯೆ, 1 ಕಿಲೋಗ್ರಾಂ ಬೆಳ್ಳಿ ಬೆಲೆ 2,41,660 ರೂ. ಆಗಿದೆ. ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆಯಲ್ಲಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ ಎನ್ನಬಹುದು.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


