HomeNewsKIA Flight Cancellations - ಯುದ್ಧದಿಂದಾಗಿ ಸಿಲುಕಿರುವ ಕನ್ನಡಿಗರು

KIA Flight Cancellations – ಯುದ್ಧದಿಂದಾಗಿ ಸಿಲುಕಿರುವ ಕನ್ನಡಿಗರು

KIA Flight Cancellations - ಬೆಂಗಳೂರಿನಿಂದ ವಿದೇಶಕ್ಕೆ ಹೋಗುವ, ಬರುವ ಒಟ್ಟು 24 ವಿಮಾನಗಳು ರದ್ದು: ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

KIA Flight Cancellations – ಬೆಂಗಳೂರಿನಿಂದ ವಿದೇಶಕ್ಕೆ ಹೋಗುವ, ಬರುವ ಒಟ್ಟು 24 ವಿಮಾನಗಳು ರದ್ದು: ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

 

 

ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ವಾಯುನೆಲೆಗಳನ್ನು ಮುಚ್ಚಲಾಗಿದೆ. ಇದರ ನೇರ ಪರಿಣಾಮ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬೀರಿದ್ದು, ಇಂದು ಸಹ ಸರಣಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಬೆಂಗಳೂರಿನಿಂದ ವಿದೇಶಕ್ಕೆ ತೆರಳಬೇಕಿದ್ದ 09 ವಿಮಾನಗಳು ಹಾಗೂ ವಿದೇಶದಿಂದ ಆಗಮಿಸಬೇಕಿದ್ದ 15 ವಿಮಾನಗಳು ಸೇರಿದಂತೆ ಒಟ್ಟು 24 ವಿಮಾನಗಳ ಸಂಚಾರವನ್ನು ಇಂದು ರದ್ದುಗೊಳಿಸಲಾಗಿದೆ. ಅಬುಧಾಬಿ, ಜಿದ್ದಾ, ದೋಹಾ, ದುಬೈ ಮತ್ತು ಬಹ್ರೇನ್‌ ಸೇರಿದಂತೆ ಮಧ್ಯಪ್ರಾಚ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು ರದ್ದಾಗಿವೆ. ಏರ್ ಇಂಡಿಯಾ, ಎಮಿರೇಟ್ಸ್, ಇಂಡಿಗೋ ಮತ್ತು ಖತಾರ್ ಏರ್ವೇಸ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ರದ್ದಾದ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಟಿಕೆಟ್ ಮರು ಬುಕ್ಕಿಂಗ್ ಅಥವಾ ಪೂರ್ಣ ಹಣ ವಾಪಸ್ (Refund) ಪಡೆಯಲು ಏರ್‌ಲೈನ್ಸ್‌ಗಳು ಅವಕಾಶ ಕಲ್ಪಿಸಿವೆ.

ಮಧ್ಯಪ್ರಾಚ್ಯ ಮೂಲಕ ಸಂಚರಿಸುತ್ತಿದ್ದ 444 ವಿಮಾನ ಸಂಚಾರ ರದ್ದು- ಭಾರತದ ಏರ್ ಪೋರ್ಟ್ ಗಳಲ್ಲಿ ಪ್ರಯಾಣಿಕರಿಗೆ ಸಂಕಷ್ಟ

 

Read this: ಜೈಲಿನಲ್ಲಿ ದರ್ಶನ್​​ಗೆ ಸಿಕ್ತು ಟಿವಿ ಆದರೆ ಬೇಕಾಗಿದ್ದು ಸಿಗಲಿಲ್ Kannada News | Darshan Thoogudeepa got Tv in his jail barrack | kannadafolks

ಯುದ್ಧದ ಪರಿಸ್ಥಿತಿಯಿಂದಾಗಿ ವಿಮಾನಗಳ ಹಾರಾಟ ಅನಿಶ್ಚಿತವಾಗಿದೆ. ಹೀಗಾಗಿ ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಗತಿಯನ್ನು (Flight Status) ಅಧಿಕೃತವಾಗಿ ಖಚಿತಪಡಿಸಿಕೊಳ್ಳದೆ ವಿಮಾನ ನಿಲ್ದಾಣಕ್ಕೆ ಬರಬಾರದು ಎಂದು ಆಡಳಿತ ಮಂಡಳಿ ವಿನಂತಿಸಿದೆ. ಸಹಾಯಕ್ಕಾಗಿ ಸಾಮಾಜಿಕ ಜಾಲತಾಣ ಮತ್ತು ಏರ್‌ಪೋರ್ಟ್‌ನಲ್ಲಿ ಹೆಲ್ಪ್‌ಡೆಸ್ಕ್ ತೆರೆಯಲಾಗಿದೆ. ಇನ್ನು ದುಬೈನಲ್ಲಿ ಒಟ್ಟು 100 ಮಂದಿ ಕನ್ನಡಿಗರು ಸಿಲುಕಿದ್ದಾರೆ. ಬಳ್ಳಾರಿಯ 32 ಮಂದಿ, ಬೆಂಗಳೂರಿನ 25 ಮಂದಿ, ದಾವಣಗೆರೆಯ 9 ಮಂದಿ, ಚಿಕ್ಕಮಗಳೂರಿನ 5 ಮಂದಿ, ವಿಜಯಪುರದ 4 ಮಂದಿ, ಕೊಡಗಿನ 4 ಮಂದಿ, ದಕ್ಷಿಣ ಕನ್ನಡದ 3 ಮಂದಿ, ಶಿವಮೊಗ್ಗದ 3 ಮಂದಿ, ರಾಯಚೂರಿನ 3 ಮಂದಿ, ಚಿಕ್ಕಬಳ್ಳಾಪುರದ 2 ಮಂದಿ, ಚಿತ್ರದುರ್ಗದ 2 ಮಂದಿ, ಕಲಬುರಗಿಯ 2 ಮಂದಿ, ಉಡುಪಿಯ 2 ಮಂದಿ, ತುಮಕೂರಿನ 1 ಮಂದಿ, ಮತ್ತೆ ಮೂರು ಜನರ ಜಿಲ್ಲೆಯಾವುದು ಎಂದು ತಿಳಿದಿಲ್ಲ. ಇದರ ಬಹ್ರೇನ್‌ನಲ್ಲಿ ಒಟ್ಟು 9 ಮಂದಿ ಸಿಲುಕಿದ್ದಾರೆ. ಹಾಸನದ 4 ಮಂದಿ ಉಡುಪಿಯ 3 ಮಂದಿ ಕೊಡಗಿನ 1 ಮಂದಿ, ಮತ್ತೆ ಒಬ್ಬರ ಜಿಲ್ಲೆ ಯಾವುದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

Read this:ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold| kannadafolks

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments