Karunade kai chachide node song lyrics (Malla) – ಕರುನಾಡೇ ಕೈ ಚಾಚಿದೆ ನೋಡೆ
ಕರುನಾಡೇ
ಕೈ ಚಾಚಿದೆ ನೋಡೆ
ಹಸಿರುಗಳೇ
ಆ ತೋರಣಗಳೇ
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ
ಕರುನಾಡೇ
ಎದೆ ಹಾಸಿದೆ ನೋಡೆ
ಹೂವುಗಳೇ
ಶುಭ ಕೋರಿವೆ ನೋಡೆ
ಮೇಘವೇ ಮೇಘವೇ ಸೂಜಿಮಲ್ಲಿಗೆ
ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ
ಸಂಪಿಗೆ ಸಂಪಿಗೆ ಕೆಂಡಸಂಪಿಗೆ
ಭೂಮಾತೆಯ ಕೆನ್ನೆಯೇ ನಮ್ಮೂರಸಂಪಿಗೆ
ಕಾವೇರಿಯಾ ಮಡಿಲಲ್ಲಿ
ಹಂಬಲಿಸಿದೆ ನಾನೂ
ಕನಸುಗಳಾ ರಾಣಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು
ಬೀಸೋ ಗಾಳಿ
ಚಾಮರ ಬೀಸಿದೆ
ಹಾಡೋ ಹಕ್ಕಿ
ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ
ಕರುನಾಡೇ
ಎದೆ ಹಾಸಿದೆ ನೋಡೆ
ಹೂವುಗಳೇ
ಶುಭ ಕೋರಿವೆ ನೋಡೆ
ಮೂಡಣ ಸೂರ್ಯನೇ ಅರಿಶಿಣ ಭಂಡಾರ
ಪಡುವಣ ಸೂರ್ಯನೇ ಕುಂಕುಮ ಭಂಡಾರ
ಕಾಮನ ಬಿಲ್ಲು ರಂಗೋಲಿ ಹಾಸಿದೆ
ಈ ಮಣ್ಣಿನ ವಾಸನೆ ಶ್ರೀಗಂಧದಂತಿದೆ
ಕಾವೇರಿಯಾ ಮಡಿಲಲ್ಲಿ
ಹಂಬಲಿಸಿದೆ ನಾನೂ
ಕನಸುಗಳಾ ರಾಣಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ
Read this – Kele cheluve song lyrics(Rangitaranga) ಕೇಳೇ ಚೆಲುವೇ
Support Us 


