Kantara 2-ಕಾಂತಾರ ಕ್ಲೈಮ್ಯಾಕ್ಸ್ ಗೆಲ್ಲಿಸಿದ್ದೇ ಗುಳಿಗ ದೈವ!
ಗುಳಿಗ ದೈವ ಅಥವಾ ಕ್ಷೇತ್ರಪಾಲ ತನ್ನನ್ನು ನಂಬಿರುವ ಜನರ ಸುತ್ತಮುತ್ತಲಿನ ಪ್ರದೇಶಗಳನ್ನು ಕಾಯುತ್ತಾನೆ. ಪಂಜುರ್ಲಿ ದೈವ ಜನರ ನಂಬಿಕೆಯಾದರೆ ಆ ಜಾಗದ ಸಂಪೂರ್ಣ ಜವಾಬ್ದಾರಿ ಗುಳಿಗ ದೈವದ್ದು.
Read this-Kantara Chapter 1 Day 2 Early Update-ಕಾಂತಾರ ಅಧ್ಯಾಯ 1 ದಿನ 2 ಆರಂಭಿಕ ನವೀಕರಣ
ಇತ್ತೀಚೆಗೆ ಕೊರೋನಾ ಬಿಟ್ಟರೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿರುವ ಜ್ವರ ಅಂದರೆ ಕಾಂತಾರ. ದಿನದಿಂದ ದಿನಕ್ಕೆ ಈ ಸಿನಿಮಾ ನೋಡಲು ಜನ ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ. ಎಲ್ಲಿ ನೋಡಿದರೂ ಹೌಸ್ಫುಲ್ ಪ್ರದರ್ಶನ. ರಿಷಬ್ ಶೆಟ್ಟಿ ಖದರ್ ಏನು ಅಂತ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಈ ಸಿನಿಮಾದಲ್ಲಿ ತೋರಿಸಿರುವ ದೈವ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಅಭಿನಯಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಗುಳಿಗ ದೈವ ಪಾತ್ರದಲ್ಲಿ ರಿಷಬ್ ಶೆಟ್ಟಿ ಅಬ್ಬರಿಸಿದ್ದಾರೆ. ಪಂಜುರ್ಲಿ, ಗುಳಿಗ ದೈವದ ಬಗ್ಗೆ ಸಿನಿಮಾದಲ್ಲಿ ಹೆಚ್ಚು ತೋರಿಸಲಾಗಿದೆ. ‘ಗುಳಿಗ ದೈವ’ ಈ ದೈವವನ್ನು ಕ್ಷೇತ್ರಪಾಲಕ ಎಂದೇ ಕರೆಯಲಾಗುತ್ತೆ. ನೂರಾರು ದೈವಗಳ ಪೈಕಿ ಗುಳಿಗನಿಗೆ ಕೋಪ ಹೆಚ್ಚು. ಮನೆಯ ಹೊರ ಭಾಗದಲ್ಲಿ, ಗುಡ್ಡ ಪ್ರದೇಶಗಳಲ್ಲಿ ಈ ದೈವವನ್ನು ಆರಾಧನೆ ಮಾಡೋದು ವಿಶೇಷ.
ದೈವಗಳಲ್ಲೇ ಹೆಚ್ಚು ಕೋಪಿಷ್ಠ ಅಂದರೆ ಗುಳಿಗ ದೈವ!
ತಾಯಿಯ ಹೊಟ್ಟೆಯನ್ನು ಬಗೆದು ಗುಳಿಗ ಹೊರಬಂದ ಅನ್ನೋದು ಗುಳಿಗ ಜನನದ ಕಥೆ. ಮನೆಯ ಜಾಗವನ್ನು ಗುಳಿಗ ಕಾಪಾಡುತ್ತಾನೆ ಅನ್ನೋದು ತುಳು ನಾಡಿನ ಜನರ ನಂಬಿಕೆ. ಇಂದಿಗೂ ಕೂಡಾ ಕೋಲಗಳಲ್ಲಿ ಗುಳಿಗನಿಗೆ ಕೋಳಿಯನ್ನು ಬಲಿಕೊಡಲಾಗಿತ್ತು. ಇದೇ ರೀತಿಯ ಪಾತ್ರದಲ್ಲಿ ರಿಷಬ್ ಅಬ್ಬರಿಸಿದ್ದಾರೆ. ಕೊನೆಯ ಭಾಗದಲ್ಲಿ ಗುಳಿಗ ದೈವ ಅಥವಾ ಕ್ಷೇತ್ರಪಾಲನ ವರ್ಣನೆ ಇದೆ. ತುಳುನಾಡಿನಲ್ಲಿ ಗುಳಿಗ ದೈವಕ್ಕೆ ವಿಶೇಷವಾದ ಮಹತ್ವವಿದೆ ಗುಳಿಗ ದೈವದ ಬಗ್ಗೆ ಒಂದೊಂದು ಭಾಗದಲ್ಲಿ ಒಂದೊಂದು ಕಥೆ ಇದೆ.
Read this-ಕಾಂತಾರ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ-Rishab Shetty
ಸುತ್ತಮುತ್ತಲಿನ ಪ್ರದೇಶಗಳನ್ನು ಕಾಯೋದು ಗುಳಿಗ ದೈವ!