HomeLyricsKambada Myalina Gombeye Song Lyrics -  ಕಂಬದಾ ಮ್ಯಾಲಿನ ಗೊಂಬಿಯೇ | nagamandala

Kambada Myalina Gombeye Song Lyrics –  ಕಂಬದಾ ಮ್ಯಾಲಿನ ಗೊಂಬಿಯೇ | nagamandala

Kambada Myalina Gombeye Song Lyrics –  ಕಂಬದಾ ಮ್ಯಾಲಿನ ಗೊಂಬಿಯೇ 

 ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ…
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ ಉತ್ತಾರವಾ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇ…ನಾ…
ಹಬ್ಬವಾಗುವುದೇ..ನಾ…..
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ….
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ ಉತ್ತಾರವಾ….
ನೀರೊಲೆಯ ನಿಗಿಕೆಂಡ ಸತ್ಯವೇ
ಈ ಅಭ್ಯಂಜನವಿನ್ನೂ ನಿತ್ಯವೇ..
ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ
ನಿನ್ನ ವಾಸನೀ ಹರಡಿರಲಿ ಹೀಗೆಯೇ…
ನೀರೊಲೆಯ ನಿಗಿಕೆಂಡ ಸತ್ಯವೇ
ಈ ಅಭ್ಯಂಜನವಿನ್ನೂ ನಿತ್ಯವೇ..
ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ
ನಿನ್ನ ವಾಸನೀ ಹರಡಿರಲಿ ಹೀಗೆಯೇ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇ..ನಾ…
ಹಬ್ಬವಾಗುವುದೇ..ನಾ…
ಒಪ್ಪಿಸುವೆ ಹೂ-ಹಣ್ಣು ಭಗವಂತ
ನೆಪ್ಪಿಲೆ ಹರಸುನಗಿ ಇರಲೆಂತ..
ಕಪ್ಪುರವ ಬೆಳಗುವೆ ದೇವನೇ
ತಪ್ಪದೆಯೆ ಬರಲೆನ್ನ ಗುಣವಂತ
ಒಪ್ಪಿಸುವೆ ಹೂ-ಹಣ್ಣು ಭಗವಂತ
ನೆಪ್ಪಿಲೆ ಹರಸುನಗಿ ಇರಲೆಂತ
ಕಪ್ಪುರವ ಬೆಳಗುವೆ ದೇವನೇ
ತಪ್ಪದೆಯೆ ಬರಲೆನ್ನ ಗುಣವಂತ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇ..ನಾ…
ಹಬ್ಬವಾಗುವುದೇ..ನಾ….
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ ಉತ್ತಾರವಾ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments