kaanada kadalige Song Lyrics – ಕಾಣದ ಕಡಲಿಗೆ
ಕಾಣದ ಕಡಲಿಗೆ….. ಹಂಬಲಿಸಿದೆ ಮನ
ಕಾಣದ, ಕಡಲಿಗೆ….ಹಂಬಲಿಸಿದೆ ಮನ….
ಕಾಣಬಲ್ಲೆನೆ ಒಂದು ದಿನಾ
ಕಡಲನೂ… ಕೂಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನಾ
ಕಡಲನೂ… ಕೂಡಬಲ್ಲೆನೆ ಒಂದು ದಿನ
ಕಾಣದ ಕಡಲಿಗೆ….ಏ.ಏ.
ಹಂಬಲಿಸಿದೆ ಮನ
ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗೆಂದೂ ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗೆಂದೂ ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ… ಅದೂ…ಉ ಉ
ಎಂತಿರುವುದೋ ಅದೂ….ಉ ಉ
ನೋಡಬಲ್ಲೆನೆ ಒಂದು ದಿನಾ
ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣದ ಕಡಲಿಗೆ…..ಏ.ಏ..
ಹಂಬಲಿಸಿದೆ ಮನ
ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾ..ಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾ..ಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ….ಏ…
ಅಪಾರವಂತೆ…..ಏ.ಏ..
ಕಾಣಬಲ್ಲೆನೆ ಒಂದು ದಿನಾ
ಅದರೊಳು ಕರಗಲಾರೆನೆ ಒಂದು ದಿನ
ಕಾಣದ ಕಡಲಿಗೆ…..ಏ.ಏ..
ಹಂಬಲಿಸಿದೆ ಮನ
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು..
ಎಂದಿಗಾದರೂ ಕಾಣದ ಕಡಲಿಗೆ ಸೇರಬಲ್ಲೆನೇನು
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲಿಗೆ ಸೇರಬಲ್ಲೆನೇನು
ಸೇರಬಹುದೇ ನಾನು….
ಕಡಲ ನೀಲಿಯೊಳು ಕರಗಬಹುದೆ ನಾನು…
ಕರಗಬಹುದೆ ನಾನು….
ಕರಗಬಹುದೆ ನಾ.ನು…
Get More Here :
Kelo Madeva Kannada Song – kelo mahadeva kannada song lyrics
Devare neenu nijavappa lyrics in kannada
Madeshwara song lyrics in kannada
Mahadeshwara daya barade lyrics
Siddayya swamy banni lyrics in kannada
Ganga jatadhara lyrics in kannada
Adidavara manava balle song lyrics
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



