Kalu gojju recipe in Kannada – ಕಾಳು ಗೊಜ್ಜು
ಮಾಡುವ ವಿಧಾನ…
- ಕಡಲೆ ಕಾಳು – ಕಾಲು ಬಟ್ಟಲು
- ಬಟಾಣಿ- ಕಾಲು ಬಟ್ಟಲು
- ಕಾಬುಲ್ ಚನ್ನ-ಕಾಲು ಬಟ್ಟಲು
- ಬಾಳೆಕಾಯಿ-2
- ಆಲೂಗಡ್ಡೆ- 1
- ಈರುಳ್ಳಿ- 1
- ಟೊಮೊಟೊ-1
- ತೆಂಗಿನ ಕಾಯಿ ತುರಿ -1 ಬಟ್ಟಲು
- ಚಕ್ಕೆ-ಸ್ವಲ್ಪ
- ಲವಂಗ-ಸ್ವಲ್ಪ
- ಕಾಳುಮೆಣಸು- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ದನಿಯಾ ಪುಡಿ- ಅರ್ಧಚಮಚ
- ಖಾರದ ಪುಡಿ- 1 ಚಮಚ
- ಅರಿಶಿನ ಪುಡಿ- ಸ್ವಲ್ಪ
- ಬೆಳ್ಳುಳ್ಳಿ- ಸ್ವಲ್ಪ
- ಹಸಿ ಶುಂಠಿ- ಸ್ವಲ್ಪ
- ಗಸಗಸೆ- ಅರ್ಧ ಚಮಚ
- ಕರಿಬೇವು- ಸ್ವಲ್ಪ
- ಇಂಗು- ಸ್ವಲ್ಪ
- ಸಾಸಿವೆ- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ- ಸ್ವಲ್ಪ
Read this – Methi Gosht recipe ಮೆಂತ್ಯೆ ಮಟನ್ ಗ್ರೇವಿ kannada
- ಮಾಡುವ ವಿಧಾನ…
- ಮೊದಲು ಕಡಲೆ ಕಾಳು, ಬಟಾಣಿ, ಕಾಬೂಲ್ ಕಡಲೆಯನ್ನು ಚೆನ್ನಾಗಿ ತೊಳೆದು ಬೇರೆ ಬೇರೆಯಾಗಿ ನೆನೆಸಿಡಬೇಕು. ಹಿಂದಿನ ದಿನ ರಾತ್ರಿಯೇ ಇದನ್ನು ನೆನೆಸಿಡಬೇಕು.
- ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ನೆನೆಸಿಟ್ಟ ಎಲ್ಲಾ ಕಾಳುಗಳನ್ನು ಹಾಕಿಕೊಂಡು ನೀರು ಹಾಗೂ ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮೂರು ಸೀಟಿ ಹೊಡೆಯಲು ಬಿಡಿ.
- ಅನಂತರ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಈರುಳ್ಳಿ, ಟೊಮೆಟೋ, ಬೆಳ್ಳುಳ್ಳಿ, ಶುಂಠಿ, ಗಸೆ ಗಸೆ, ಕಾಳು ಮೆಣಸು, ಲವಂಗ, ಚಕ್ಕೆ, ಹಾಕಿ ಬಳಿಕ 2 ಸ್ಪೂನ್ ಎಣ್ಣೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 5 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ದನಿಯಾ ಪುಡಿ, ಖಾರದ ಪುಡಿ, ಅರಶಿಣ ಪುಡಿ ಹಾಕಿ ಮಿಶ್ರಣ ಮಾಡಿ ಒಲೆ ಆಫ್ ಮಾಡಿಕೊಂಡು ಈ ಪದಾರ್ಥ ತಣ್ಣಗಾಗಲು ಬಿಡಿ.
- ಈ ವಸ್ತುಗಳು ತಣ್ಣಗಾದ ಬಳಿಕ ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ, ಇದಕ್ಕೆ ತೆಂಗಿನಕಾಯಿ ತುರಿ, ಕೊತ್ತಂಬರಿ, ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು.ಈಗ ಒಲೆಯ
- ಮೇಲೆ ಮತ್ತೊಂದು ಪಾತ್ರೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಇಂಗು, ಕರಿಬೇವು, ಈರುಳ್ಳಿ ಹಾಕಿ ಕೆಂಪಗೆ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಇದಕ್ಕೆ ಚಿಕ್ಕದಾಗಿ ಕತ್ತರಿಸಿದ ಒಂದು ಟೊಮೆಟೋ ಹಾಕಿ 2 ನಿಮಿಷ ಮತ್ತೆ ಫ್ರೈ ಮಾಡಿ. ಹಾಗೆ ಒಂದು ಆಲೂಗಡ್ಡೆ, ಬಾಳೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಇದಕ್ಕೆ ಹಾಕಿಕೊಳ್ಳಿ. ನಂತರ ಇದಕ್ಕೆ ಉಪ್ಪು ಹಾಕಿ ಮಿಶ್ರಣ ಮಾಡಿ, ನೀರು ಹಾಕಿ 5 ನಿಮಿಷ ಬೇಯಲು ಬಿಡಿ.
- ಈಗ ಕುಕ್ಕರ್ನಲ್ಲಿ ಬೆಂದಿರುವ ಕಾಳುಗಳನ್ನು ಈ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ, ಹಾಗೆ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆಯನ್ನು ಕೂಡ ಇದಕ್ಕೆ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ನೀರು ಹಾಕಿ ಬೇಯಲು ಬಿಡಿ. ಆಗಾಗ ತಳ ಹಿಡಿಯದಂತೆ ಮಿಶ್ರಣ ಮಾಡಿ. ಇದೀಗ ಮಸಾಲೆ ಭರಿತ ಕಾಳು ಗೊಜ್ಜು ಸವಿಯಲು ಸಿದ್ಧ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ