HomeNewsJasprit Bumrah IPL Shock-ಆರು ಬೌಲರ್‌ಗಳಿಗೆ ವಿಕೆಟ್ ಇಲ್ಲ

Jasprit Bumrah IPL Shock-ಆರು ಬೌಲರ್‌ಗಳಿಗೆ ವಿಕೆಟ್ ಇಲ್ಲ

Top Bowlers Yet to Take Wicket

Jasprit Bumrah IPL Shock-ಆರು ಬೌಲರ್‌ಗಳಿಗೆ ವಿಕೆಟ್ ಇಲ್ಲ

Jasprit Bumrah’s IPL 2026 Wicket Drought: ವಿಶ್ವದ ಅಗ್ರಮಾನ್ಯ ಬೌಲರ್‌ಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬುಮ್ರಾ ಐಪಿಎಲ್ 2026ರಲ್ಲಿ ಇದುವರೆಗೆ ಒಂದೂ ವಿಕೆಟ್ ಪಡೆಯದಿರುವುದು ಅಚ್ಚರಿ ಮೂಡಿಸಿದೆ. ಮೂರು ಪಂದ್ಯಗಳಲ್ಲಿ ಮಿಂಚಿದರೂ ವಿಕೆಟ್ ಭಾಗ್ಯ ದೊರೆತಿಲ್ಲ. ಬುಮ್ರಾ ಮಾತ್ರವಲ್ಲದೆ, ಟ್ರೆಂಟ್ ಬೌಲ್ಟ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್ ಸೇರಿದಂತೆ ಹಲವು ಸ್ಟಾರ್ ಬೌಲರ್‌ಗಳೂ ಈ ಆವೃತ್ತಿಯಲ್ಲಿ ವಿಕೆಟ್ ಬರ ಎದುರಿಸುತ್ತಿದ್ದಾರೆ.ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುವ ಬುಮ್ರಾ ಈ ಆವೃತ್ತಿಯ ಐಪಿಎಲ್‌ನಲ್ಲಿ ಇದುವರೆಗೆ 3 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ್ದ ಬುಮ್ರಾ 35 ರನ್ ಬಿಟ್ಟುಕೊಟ್ಟಿದ್ದರು. ಆದರೆ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು.Read this : R Ashwin IPL Exit-ರವಿಚಂದ್ರನ್ ಅಶ್ವಿನ್ ನಿವೃತ್ತಿ ಕಾರಣ

ವಿಶ್ವ ಕ್ರಿಕೆಟ್​ನ ಅಗ್ರ ಗಣ್ಯ ಬೌಲರ್​ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಒಬ್ಬರು. ಬುಮ್ರಾ ಬೌಲಿಂಗ್​ನಲ್ಲಿ ಯಾವುದೇ ಬ್ಯಾಟ್ಸ್‌ಮನ್​ಗೂ ಸರಾಗವಾಗಿ ರನ್ ಕಲೆಹಾಕುವುದು ಕಷ್ಟಕರ. ಹಾಗೆಯೇ ವಿಕೆಟ್​​ನಲ್ಲಿ ಉಳಿಯುವುದು ಕೂಡ ಕಷ್ಟ. ಹೀಗಿರುವಾಗ ಇಂತಹ ಬುಮ್ರಾಗೆ 2026 ರ ಐಪಿಎಲ್​ನಲ್ಲಿ ಇದುವರೆಗೆ ಒಂದೇ ಒಂದು ವಿಕೆಟ್ ಸಿಕ್ಕಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುವ ಬುಮ್ರಾ ಈ ಆವೃತ್ತಿಯ ಐಪಿಎಲ್‌ನಲ್ಲಿ ಇದುವರೆಗೆ 3 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ್ದ ಬುಮ್ರಾ 35 ರನ್ ಬಿಟ್ಟುಕೊಟ್ಟಿದ್ದರು. ಆದರೆ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಎರಡನೇ ಪಂದ್ಯದಲ್ಲೂ 4 ಓವರ್​ಗಳನ್ನು ಬೌಲ್ ಮಾಡಿದ್ದ ಬುಮ್ರಾ ಕೇವಲ 21 ರನ್ ಬಿಟ್ಟುಕೊಟ್ಟಿದ್ದಾರಾದರೂ ವಿಕೆಟ್ ಪಡೆದಿರಲಿಲ್ಲ. ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 3 ಓವರ್​ಗಳನ್ನು ಬೌಲ್ ಮಾಡಿದ್ದ ಬುಮ್ರಾ 33 ರನ್ ಬಿಟ್ಟುಕೊಟ್ಟರು. ಆದರೆ ಈ ಪಂದ್ಯದಲ್ಲೂ ಬುಮ್ರಾಗೆ ವಿಕೆಟ್ ಸಿಗಲಿಲ್ಲ. ಬುಮ್ರಾ ಮಾತ್ರವಲ್ಲ, ಈ ನಾಲ್ವರು ಸ್ಟಾರ್ ಬೌಲರ್​ಗಳಿಗೆ ಇದುವರೆಗೆ ವಿಕೆಟ್ ಸಿಕ್ಕಿಲ್ಲ.

ಜಸ್ಪ್ರೀತ್ ಬುಮ್ರಾ ಜೊತೆಗೆ ಮುಂಬೈ ಇಂಡಿಯನ್ಸ್ ತಂಡದ ಮತ್ತೊಬ್ಬ ವೇಗದ ಬೌಲರ್ ಟ್ರೆಂಟ್ ಬೌಲ್ಟ್​ಗೂ ಕೂಡ ಇದುವರೆಗೆ ಒಂದೇ ಒಂದು ವಿಕೆಟ್ ಸಿಕ್ಕಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ನೂರ್ ಅಹ್ಮದ್ ಮತ್ತು ವೇಗಿ ಖಲೀಲ್ ಅಹ್ಮದ್ ಕೂಡ ವಿಕೆಟ್ ಪಡೆದಿಲ್ಲ.

ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಹರ್ಷಲ್ ಪಟೇಲ್, ಐಪಿಎಲ್ 2026 ರಲ್ಲಿ ತಮ್ಮ ಮೊದಲ ವಿಕೆಟ್‌ಗಾಗಿ ಇನ್ನೂ ಕಾಯಬೇಕಾಗಿದೆ. ಆಡಿರುವ ಎರಡು ಪಂದ್ಯಗಳಲ್ಲಿ 5.4 ಓವರ್‌ಗಳನ್ನು ಬೌಲಿಂಗ್ ಮಾಡಿರುವ ಹರ್ಷಲ್​ಗೆ ಒಂದೇ ಒಂದು ವಿಕೆಟ್ ಸಿಕ್ಕಿಲ್ಲ. ಇವರ ಜೊತೆಗೆ ಪಂಜಾಬ್ ಕಿಂಗ್ಸ್ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ ಮತ್ತು ಕೆಕೆಆರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ವಿಕೆಟ್ ಬರ ಎದುರಿಸುತ್ತಿದ್ದಾರೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments