HomeNewsJammu & Kashmir's Ranji Cup Dream Achieved - ರಕ್ತಚರಿತ್ರೆಯ ನಾಡಿನಲ್ಲಿ ಕ್ರಿಕೆಟ್ ಕ್ರಾಂತಿ|...

Jammu & Kashmir’s Ranji Cup Dream Achieved – ರಕ್ತಚರಿತ್ರೆಯ ನಾಡಿನಲ್ಲಿ ಕ್ರಿಕೆಟ್ ಕ್ರಾಂತಿ| Kannada Folks

ಜಮ್ಮು ಕಾಶ್ಮೀರವು ಹಿಂಸಾಚಾರದ ಹಿನ್ನೆಲೆಯಿಂದ ಹೊರಬಂದು, ಕ್ರಿಕೆಟ್ ಮೂಲಕ ಶಾಂತಿಯ ಹೊಸ ಅಧ್ಯಾಯ ತೆರೆದಿದೆ.

Jammu & Kashmir’s Ranji Cup Dream Achieved – ರಕ್ತಚರಿತ್ರೆಯ ನಾಡಿನಲ್ಲಿ ಕ್ರಿಕೆಟ್ ಕ್ರಾಂತಿ

ಜಮ್ಮು ಕಾಶ್ಮೀರ ಅಂದ್ರೆ ಥಟ್ಟನೆ ನೆನಪಾಗೋದು ಅಲ್ಲಿನ ಹಿಂಸಾಚಾರಗಳು, ಭಯೋತ್ಪಾದಕ ದಾಳಿಗಳು, ಇಂಡಿಯಾ ಪಾಕಿಸ್ತಾನ ಸಂಘರ್ಷ ಸೇರಿದಂತೆ ಅನೇಕ ಘಟನೆಗಳು. ಇದೇ ಕಾರಣಕ್ಕೆ ಭೂಲೋಕದ ಸ್ವರ್ಗ ಜಮ್ಮು ಕಾಶ್ಮೀರ ಕೆಟ್ಟ ಘಟನೆಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಆದ್ರೆ ಅದೇ ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ದಶಕದಿಂದ ಪರಿಸ್ಥಿತಿ ಬದಲಾಗುತ್ತಿದೆ. ಬಂದೂಕು ಹಿಡಿಯೋ ಕೈಗಳು ಇದೀಗ ಕ್ರಿಕೆಟ್ ಬ್ಯಾಟ್ ಬಾಲ್ ಹಿಡಿಯುತ್ತಿವೆ. ಜಮ್ಮು ಕಾಶ್ಮೀರ ದಲ್ಲಿ ಅದ್ಯಾವ ಮಟ್ಟಿಗೆ ಕ್ರಿಕೆಟ್ ಕ್ರೇಜ್ ಬೆಳದಿದೆ ಅಂದ್ರೆ ಇಂದು ಮೊಟ್ಟಮೊದಲ ಬಾರಿಗೆ ರಣಜಿ ಕಪ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಹೌದು ಇದೇ ಮೊದಲ ಬಾರಿಗೆ ರಣಜಿ ಪೈನಲ್​ಗೇರಿದ್ದ ಜಮ್ಮು ಕಾಶ್ಮೀರ ಮೊದಲ ಯತ್ನದಲ್ಲಿಯೇ ರಣಜಿ ಕಪ್ ಗೆದ್ದು ಬೀಗಿದೆ.Ranji Trophy final: Jammu and Kashmir seize control as Karnataka stare at  massive first-innings deficit | Cricket News - The Times of India

Read this – Spirit movie  ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ : ಕಾರಣವೇನು?| Kannada Folks

ಪಂದ್ಯ ಹೀಗಿತ್ತು

ಹುಬ್ಬಳ್ಳಿಯ ರಾಜ್ ನಗರದಲ್ಲಿರುವ ಕೆಎಸ್​ಸಿಎ ಸ್ಟೇಡಿಯಂನಲ್ಲಿ ಇದೇ ಪೆಬ್ರವರಿ 24 ರಿಂದ ರಣಜಿ ಪೈನಲ್ ಪಂದ್ಯ ಆರಂಭವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಜಮ್ಮು ಕಾಶ್ಮೀರ ತಂಡ ಸುಡು ಬಿಸಿಲಿನ ಹುಬ್ಬಳ್ಳಿ ಮೈದಾನದಲ್ಲಿ ರನ್ ಹೊಳೆಯನ್ನೇ ಹರಿಸಿತ್ತು. ಒಂದುವರೆ ದಿನ ಆಟವಾಡಿದ ಜಮ್ಮು ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 584 ರನ್​ಗಳ ಬೃಹತ್ ಮೊತ್ತ ಕಲೆಹಾಕಿ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್​ಗೆ ಇಳದಿದ್ದ ಕರ್ನಾಟಕ ತಂಡ 293 ರನ್​ಗಳಿಗೆ ಅಲೌಟ್ ಆಗಿತ್ತು.

ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಹೊರತುಪಡಿಸಿದ್ರೆ ಬೇರಾವ ಆಟಗಾರರು ಉತ್ತಮ ಪ್ರದರ್ಶನ ತೋರಲಿಲ್ಲ. ಹೀಗಾಗಿ ಕರ್ನಾಟಕ ಮೊದಲ ಇನ್ನಿಂಗ್ಸ್​ನಲ್ಲಿ 293 ರನ್​ಗಳಿಗೆ ಸುಸ್ತಾಗಿತ್ತು. ಪಂದ್ಯದ ನಾಲ್ಕನೇ ದಿನದಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಮ್ಮುಕಾಶ್ಮಿರ ತಂಡ ಎರಡನೇ ಇನ್ನಿಂಗ್ಸ್​ನಲ್ಲಿಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್​ನಲ್ಲಿ ಜಮ್ಮು ಆಟಗಾರ ಇಕ್ಬಾಲ್ ಶತಕ, ಕರ್ನಾಟಕದ ಜಯವನ್ನು ಮತ್ತಷ್ಟು ದೂರ ಮಾಡಿತು.

ಎಲ್ಲರ ಲೆಕ್ಕಾಚಾರ ಸುಳ್ಳು ಮಾಡಿದ ಜೆಕೆ

ಕಳೆದ 67 ವರ್ಷಗಳಿಂದ ಜಮ್ಮುಕಾಶ್ಮಿರ ತಂಡ ಕ್ರಿಕೆಟ್ ಆಡುತ್ತಿದೆ. ಆದ್ರೆ ಇತಿಹಾಸದಲ್ಲಿ ಮೊದಲ ಗೆಲುವಿಗಾಗಿ ಜಮ್ಮು ಕಾಶ್ಮೀರ ತಂಡ 23 ವರ್ಷಗಳ ಕಾಲ ಕಾಯಬೇಕಾಯಿತು. 1982-83ರಲ್ಲಿ ಸರ್ವಿಸಸ್ ತಂಡದ ವಿರುದ್ಧ ಮೊದಲ ಜಯ ಸಾಧಿಸಿತ್ತು. ಅನಂತರ ದೇಶಿ ಕ್ರಿಕೆಟ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತಂಡದಿಂದ ಬರದೇ ಇದ್ರು ಕಳೆದ ಕೆಲ ವರ್ಷಗಳಿಂದ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಆದ್ರೆ ಇದೇ ಮೊದಲ ಬಾರಿಗೆ 67 ವರ್ಷದ ಇತಿಹಾಸದಲ್ಲಿ ಪೈನಲ್ ಪ್ರವೇಶಿಸಿದ್ದ ಜಮ್ಮುಕಾಶ್ಮಿರ ತಂಡ ಮೊದಲ ಯತ್ನದಲ್ಲಿಯೇ ಗೆಲವು‌ ಸಾಧಿಸಿದೆ.

Read this – Bolivia Plane Tragedy  ಕರೆನ್ಸಿ ಸಾಗಿಸುತ್ತಿದ್ದ ಹರ್ಕ್ಯುಲಸ್ ಹಡಗು ಅಪಘಾತ, 15 ಸಾವು| Kannada Folks

ಕ್ರಿಕೆಟ್ ನೋಡಲು ಬಂದ ಜಮ್ಮುಕಾಶ್ಮಿರ ಸಿಎಂ

ಇನ್ನು ಜಮ್ಮುಕಾಶ್ಮಿರ ತಂಡ ಮೊದಲ ಬಾರಿಗೆ ರಣಜಿ ಕಪ್ ಎತ್ತಿಹಿಡಿಯೋದು ಖಾತ್ರಿಯಾಗುತ್ತಿದ್ದಂತೆ ಜಮ್ಮುಕಾಶ್ಮಿರ ದ ಸಿಎಂ ಓಮರ್ ಅಬ್ದುಲ್ಲಾ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹುಬ್ಬಳ್ಳಿಗೆ ಆಗಮಿಸಿದ್ದರು. ನಿನ್ನೆ ರಾತ್ರಿಯೇ ಹುಬ್ಬಳ್ಳಿಗೆ ಬಂದಿದ್ದ ಓಮರ್ ಅಬ್ದುಲ್ಲಾ, ಇಂದು ಕೆಎಸ್​ಸಿ‌ಎ ಮೈದಾನಕ್ಕೆ ಆಗಮಿಸಿ ಕ್ರಿಕೆಟ್ ವೀಕ್ಷಿಸಿದರು. ತಮ್ಮ ತಂಡದ ಆಟಗಾರರಿಗೆ ಪ್ರೋತ್ಸಾಹ ನೀಡಿದ್ರು. ಇಡೀ ದಿನ ಮೈದಾನದಲ್ಲಿ ಇದ್ದು ಐತಿಹಾಸಿಕ ಕ್ಷಣಗಳನ್ನು, ತಮ್ಮ ತಂಡದ ಆಟಗಾರರ ಆಟವನ್ನು ನೋಡಿ ಸಂತೋಷ ಪಟ್ಟರು. ಈ ಬಗ್ಗೆ ಮಾತನಾಡಿರೋ ಓಮರ್ ಅಬ್ದುಲ್ಲಾ, ನಮ್ಮ ತಂಡ ಈ ಹಂತಕ್ಕೆ ಬರೋದಿಲ್ಲಾ ಅಂತ ಎಲ್ಲರು ಹೇಳ್ತಿದ್ದರು. ಆದ್ರೆ ನಮ್ಮ ಆಟಗಾರರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಪೈನಲ್​ಗೆ ಬಂದಿದ್ದಾರೆ. ಪೈನಲ್​ನಲ್ಲಿ ಕೂಡಾ ಉತ್ತಮ ಆಟವಾಡಿದ್ದಾರೆ. ಈ ಬಾರಿ ಕಪ್ ನಾವು ತೆಗೆದುಕೊಂಡು ಹೋಗ್ತೇವೆ ಅಂತ ಹೇಳಿದ್ದರು. ಅದರಂತೆ ಜೆಕೆ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿದಿದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×