Iran Missile & Drone Attacks-7 ದೇಶಗಳ ಜಂಟಿ ಹೇಳಿಕೆ
ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಮಧ್ಯಪ್ರಾಚ್ಯದ ದೇಶಗಳಲ್ಲಿರುವ ಅಮೆರಿಕದ ವಾಯನೆಲೆಗಳು, ಅಮೆರಿಕದ ರಾಯಭಾರ ಕಚೇರಿಗಳ ಮೇಲೆಲ್ಲ ದಾಳಿ ನಡೆಸಿದೆ.
Read this : Gold Outlook West Asia-ಪಶ್ಚಿಮ ಏಷ್ಯಾ ಬಿಕ್ಕಟ್ಟು & ಚಿನ್ನದ ಬೆಲೆ
ಹೀಗಾಗಿ, ಇದೀಗ ಇರಾನ್ ವಿರುದ್ಧ ಇಸ್ರೇಲ್, ಅಮೆರಿಕದ ಜೊತೆಗೆ ದುಬೈ, ಕುವೈತ್, ಬಹ್ರೇನ್, ಅಬುಧಾಬಿ, ಜೋರ್ಡಾನ್, ಸೌದಿ ಅರೇಬಿಯ, ಯುಎಇ ಸಮರ ಸಾರಿವೆ. 3 ದಿನಗಳಿಂದ ಈ ಯುದ್ಧ ನಡೆಯುತ್ತಿರುವುದರಿಂದ ಇಂದು ಈ ಎಲ್ಲ ದೇಶಗಳು ಜಂಟಿಯಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿವೆ. ಈ ಹೇಳಿಕೆಯ ಮೂಲಕ ಇರಾನ್ಗೆ ಖಡಕ್ ಸಂದೇಶ ರವಾನಿಸಿವೆ.
ನವದೆಹಲಿ, ಮಾರ್ಚ್ 2: ಇಸ್ರೇಲ್ ಜೊತೆಗಿನ ವೈಷಮ್ಯದ ಬಳಿಕ ಇದೀಗ ಕತಾರ್, ಬಹ್ರೇನ್, ಯುಎಇ ಮುಂತಾದ ಅರಬ್ ದೇಶಗಳ ಮೇಲೆ ಇರಾನ್ ದಾಳಿ (Iran Attack) ನಡೆಸಿದೆ. ಇದರಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ, ಅಮೆರಿಕ ಸೇರಿದಂತೆ ಈ 7 ದೇಶಗಳು ಜಂಟಿಯಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿವೆ. “ನಮ್ಮ ನಾಗರಿಕರು, ಸಾರ್ವಭೌಮತ್ವ ಮತ್ತು ಪ್ರದೇಶದ ರಕ್ಷಣೆಯಲ್ಲಿ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಈ ದಾಳಿಗಳ ಸಂದರ್ಭದಲ್ಲಿ ನಮ್ಮ ಆತ್ಮರಕ್ಷಣೆಯನ್ನು ಮಾಡಿಕೊಳ್ಳಲು ಬದ್ಧರಾಗಿದ್ದೇವೆ” ಎಂದು ಹೇಳಿಕೆಯಲ್ಲಿ ಇರಾನ್ಗೆ ಖಡಕ್ ಸಂದೇಶ ರವಾನಿಸಲಾಗಿದೆ.
ತನ್ನ ದೇಶದ ಮೇಲಿನ ದಾಳಿಗೆ ಇರಾನ್‌ನ ಪ್ರತೀಕಾರದ ದಾಳಿಗಳು ಮುಂದುವರಿದಂತೆ ಕತಾರ್, ಯುಎಇ, ಬಹ್ರೇನ್, ಕುವೈತ್‌ನಲ್ಲಿ ಸ್ಫೋಟಗಳು ಹೆಚ್ಚಾಗಿವೆ. ಅರಬ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳು ಮತ್ತು ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸುತ್ತಿದೆ. ಇದರಿಂದ ತನ್ನದೇನೂ ತಪ್ಪಿಲ್ಲದಿದ್ದರೂ ಈ ದೇಶಗಳು ದಾಳಿಗೆ ಒಳಗಾಗಿವೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಇತ್ತೀಚೆಗೆ ಈ ಪ್ರದೇಶದಾದ್ಯಂತ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್, ಸೌದಿ ಅರೇಬಿಯಾ ಸಾಮ್ರಾಜ್ಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರಗಳು ಜಂಟಿಯಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿವೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


