Infatuation and love are hindering you Guruji’s future for Bhavya
ಬಿಗ್ ಬಾಸ್ ಕನ್ನಡ 11’ರಲ್ಲಿ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಭವ್ಯಾ ಗೌಡ ಅವರು ತ್ರಿವಿಕ್ರಮ್ ಜೊತೆಗಿನ ಸ್ನೇಹ ವಿಚಾರವಾಗಿ ಹೈಲೆಟ್ ಆಗಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದಾರೆ. ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ ಎಂದು ಭವ್ಯಾಗೆ ಗುರೂಜಿ ಕಿವಿ ಮಾತೊಂದನ್ನು ಹೇಳಿದ್ದಾರೆ.
Read this – Ajith car accident during high-speed racing practice ಅಭ್ಯಾಸದ ವೇಳೆ ಅಜಿತ್ ಕಾರು ಅಪಘಾತ
ಭವ್ಯಾ ಅವರನ್ನು ಕರೆದು ವಿದ್ಯಾಶಂಕರಾನಂದ ಸರಸ್ವತಿ ಅವರು ಭವಿಷ್ಯ ಹೇಳಿದ್ದಾರೆ. ಈ ವೇಳೆ ಅವರಿಗೆ ಎಚ್ಚರಿಕೆ ನೀಡುವ ಕೆಲಸ ಆಗಿದೆ. ಜಾತಕದ ಅನ್ವಯ ಪ್ರಸ್ತುತ ಶನಿ ದಶಾ ನಡೆಯುತ್ತಿದೆ. ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಕೂದಲು ಉದುರುವುದು, ಹಲ್ಲು ನೋವು, ಜಾಯಿಂಟ್ ಪೇನ್ ಬರುತ್ತದೆ. ಶನಿ ಸಣ್ಣಪುಟ್ಟ ಸಮಸ್ಯೆ ಕೊಡುತ್ತಾನೆ. ಇದನ್ನು ನಿರ್ಲಕ್ಷ್ಯ ಮಾಡಬಹುದು. ಶನಿ ಹೋದ ಮೇಲೆ ಅದೂ ಹೋಗುತ್ತದೆ ಎಂದಿದ್ದಾರೆ ಗುರೂಜಿ.
Read this – CM Siddaramaiah Assembly Session ಸಿಎಂ ಸಿದ್ದರಾಮಯ್ಯ ವಿಧಾನಸಭೆ ಅಧಿವೇಶನ
2027ರಿಂದ ನಿನ್ನ ಭವಿಷ್ಯದಲ್ಲಿ ಸುವರ್ಣಯುಗ. ನೀನು ಫ್ಯಾಷನ್ ಇಂಡಸ್ಟ್ರೀಗೆ ಸಂಬಂಧಿಸಿ ಉದ್ಯಮ ಆರಂಭಿಸುತ್ತೀಯ ಎಂದಿದ್ದಾರೆ ಅವರು. ಆ ಬಳಿಕ ವೀಳ್ಯದ ಎಲೆ ಎತ್ತಲು ಗುರೂಜಿ ಹೇಳಿದರು. 15 ಎಲೆಯನ್ನು ಭವ್ಯಾ ಎತ್ತಿಕೊಟ್ಟರು. ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.
ಇನ್ನೂ ಬಿಗ್ ಬಾಸ್‌ನಲ್ಲಿ ತ್ರಿವಿಕ್ರಮ್ ಅವರು ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ. ಅದನ್ನು ಇಬ್ಬರೂ ಒಪ್ಪಿಕೊಂಡಿಲ್ಲ. ನಮ್ಮೀಬ್ಬರ ನಡುವೆ ಏನಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಇದನ್ನೇ ಗುರೂಜಿ ಪರೋಕ್ಷವಾಗಿ ಭವ್ಯಾಗೆ ಹೇಳಿದ್ರಾ? ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.