HomeLyricsIndependence Day Song - ಭಾರತಾಂಬೆ ನಿನ್ನ ಜನ್ಮ ದಿನ

Independence Day Song – ಭಾರತಾಂಬೆ ನಿನ್ನ ಜನ್ಮ ದಿನ

ದೇಶಭಕ್ತಿಯ ಭಾವನೆಗಳನ್ನು ಮೂಡಿಸುವ ಜನಪ್ರಿಯ ಕನ್ನಡ ಗೀತೆ **"ಭಾರತಾಂಬೆ ನಿನ್ನ ಜನ್ಮ ದಿನ"**ದ ಸಾಹಿತ್ಯ, ಹಾಡಿನ ಮಾಹಿತಿ ಹಾಗೂ ಸ್ವಾತಂತ್ರ್ಯ ದಿನಾಚರಣೆಗೆ ಇದರ ವಿಶೇಷತೆಯನ್ನು ತಿಳಿಯಿರಿ.

Independence Day Song – ಭಾರತಾಂಬೆ ನಿನ್ನ ಜನ್ಮ ದಿನ

ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ
ಗಂಡೆದೆ ವೀರರೆಲ್ಲ
ಗುಂಡಿಗೆ ಪ್ರಾಣ ಚೆಲ್ಲಿ
ನಿನ್ನನ್ನು ಬಿಡಿಸಿದ ಇದೇ ದಿನ
ಜನ್ಮವ ಕೊಡಿಸಿದ ಮಹಾ ದಿನ
ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ

ಹಿಂದೂಸ್ಥಾನವು ಎಂದೂ ಮರೆಯದ
ಭಾರತರತ್ನವು ನೀನಾಗು
ಹಿಂದೂಸ್ಥಾನವು ಎಂದೂ ಮರೆಯದ
ಭಾರತರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು
ಕನ್ನಡ ನುಡಿಯ ಸಿರಿಯಾಗು
ಹಿಂದೂಸ್ಥಾನವು ಎಂದೂ ಮರೆಯದ
ಭಾರತರತ್ನವು ನೀನಾಗು
ಜಯ ಭಾರತ ಜನನಿಯ ತನುಜಾತೆ,

ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !

ಸಾ…… ನಿಸರಿ…. ಪ ರಿ… ಪ ಸ…
ರಿ ಮ ಪ ಮ ಪ ನಿ ಪ ನಿ ರಿ ಸ ಸ ಸ ಸ ಸಸ
ದಿಕ್ಕು ದಿಕ್ಕಲ್ಲಿ ಭಾವ ಬಂಧನ
ಹರಿವ ನೀರೆಲ್ಲ ವೇದ ವಾಚನ
ಸುತ್ತ ಗಾಳಿಯಲಿ ಶಾಂತಿ ಚಿಂತನ
ಮಣ್ಣ ಕಣಕಣದಿ ಕರುಣೆ ಕಂಪನ
ಈ ನಾಡಲ್ಲಿ..
ಎಲ್ಲಾ ದೇವರಿಗೂ ಪೂಜೆ ಇದೆ
ಈ ನಾಡಲ್ಲಿ..
ಎಲ್ಲಾ ದರ್ಮಗಳಿಗೂ ಸ್ಥಾನವಿದೆ
ಈ ನಾಡಲ್ಲಿ..
ಎಲ್ಲಾ ಜನಕ್ಕೂ ಹಕ್ಕಿದೆ
ಈ ನಾಡಲ್ಲಿ..
ಶಾಂತಿಯೇ ಜೀವನ
ನಕ್ಸಲಿಸಂ ಶರಣಾಗಲಿ
ಟೆರರಿಸಂ ಕೋನೆಗಾಣಲಿ

ಇದು ಆದಾಗಲೇ ಇದು ನಮ್ ಇಂಡಿಯಾ..
ನಮ್ ಇಂಡಿಯಾ ನಮ್ ಇಂಡಿಯಾ
ಸ್ವತಂತ್ರ ಭೂಮಿ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವಶಕ್ತ ರಾಷ್ಟ್ರ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಪ್ರಜಾ ಪ್ರಧಾನ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ದೇಸಿಯ ಸ್ವರ್ಗ ಇಂಡಿಯಾ

ಜನಗಣಮನ-ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ!
ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ಕಲ ಬಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉಚ್ಛಲ ಜಲಧಿತರಂಗ
ತವ ಶುಭ ನಾಮೇ ಜಾಗೇ,
ತವ ಶುಭ ಆಶಿಷ ಮಾಗೇ,
ಗಾಹೇ ತವ ಜಯಗಾಥಾ.
ಜನಗಣಮಂಗಳದಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ!

ಜಯ ಹೇ,
ಜಯ ಹೇ,
ಜಯ ಹೇ,
ಜಯ ಜಯ ಜಯ ಜಯ ಹೇ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments