HomeNewsIDFC First Bank's Rs 590 fraud case - ಐಡಿಎಫ್​ಸಿ ಫಸ್ಟ್ ಬ್ಯಾಂಕ್ |Kannada...

IDFC First Bank’s Rs 590 fraud case – ಐಡಿಎಫ್​ಸಿ ಫಸ್ಟ್ ಬ್ಯಾಂಕ್ |Kannada Folks

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಷೇರುಗಳು ಸೋಮವಾರ ಶೇ. 20ರಷ್ಟು ಬೆಲೆ ಕಳೆದುಕೊಂಡಿವೆ.

IDFC First Bank’s Rs 590 fraud case – ಐಡಿಎಫ್​ಸಿ ಫಸ್ಟ್ ಬ್ಯಾಂಕ್

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ (IDFC First Bank) ಚಂಡೀಗಡ ಶಾಖೆಯಲ್ಲಿ 590 ಕೋಟಿ ರೂ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಈ ಬ್ಯಾಂಕ್​ನ ಷೇರುಗಳು ತರಗೆಲೆಯಲ್ಲಿ ಉದುರುತ್ತಿವೆ. ಸೋಮವಾರ ಈ ಬ್ಯಾಂಕ್​ನ ಷೇರುಬೆಲೆ ಶೇ. 20ರ ಕೆಳಗಿನ ಮಿತಿಯಷ್ಟು ಕುಸಿದಿದೆ. ಇದರ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಒಂದೇ ದಿನ 14,000 ಕೋಟಿ ರೂಗೂ ಅಧಿಕ ಮೊತ್ತದ ನಷ್ಟ ಆಗಿದೆ.

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಈ ಪ್ರಕರಣವೇನು?

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಚಂಡೀಗಡ ಶಾಖೆಯ ಸಿಬ್ಬಂದಿಯಿಂದ ವಂಚನೆ ನಡೆದಿರುವ ಆರೋಪ ಇದೆ. ಹರ್ಯಾಣ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಸಂಸ್ಥೆಗಳ ಅಕೌಂಟ್​ಗಳಲ್ಲಿ ಅನಧಿಕೃತ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಸರ್ಕಾರವು ಈ ಅಕೌಂಟ್​ಗಳನ್ನು ಮುಚ್ಚಲು ಹೋದಾಗ ಅಕೌಂಟ್ ಬ್ಯಾಲನ್ಸ್​ನಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಆಗ ಒಟ್ಟು 590 ಕೋಟಿ ರೂ ಹಣಕಾಸು ಅಕ್ರಮ ನಡೆದಿರುವುದು ಗೊತ್ತಾಗಿದೆ. ಈ ಬ್ಯಾಂಕ್​ನ ಮೂರನೇ ಕ್ವಾರ್ಟರ್​ನ ನಿವ್ವಳ ಆದಾಯವೇ 503 ಕೋಟಿ ರೂ ಇದೆ. ಅದಕ್ಕಿಂತಲೂ ಹೆಚ್ಚಿನ ಮೊತ್ತದ ಅಕ್ರಮವನ್ನು ಕೆಲ ಸಿಬ್ಬಂದಿ ಎಸಗಿದ್ದಾರೆ.IDFC First Bank ₹590 Cr. Fraud Explained | Govt Action, ROA Impact & What  It Means

Read this – Highlights news of the day-ದಿನದ ಪ್ರಮುಖ ಸುದ್ದಿಗಳು

ಸದ್ಯ ಐಡಿಎಫ್​ಸಿ ಬ್ಯಾಂಕ್​ನ ಚಂಡೀಗಡ ಬ್ರ್ಯಾಂಚ್​ನಿಂದ ಅನಧಿಕೃತವಾಗಿ ನಡೆದಿರುವ ವಹಿವಾಟುಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಈ ಹಣವನ್ನು ಫ್ರೀಜ್ ಮಾಡುವಂತೆ ಸಂಬಂಧಿಸಿದ ಎಲ್ಲಾ ಬ್ಯಾಂಕುಗಳಿಗೂ ಮನವಿ ಮಾಡಲಾಗಿದೆ. ಎಷ್ಟು ಸಾಧ್ಯವೋ ಎಷ್ಟು ಹಣ ರಿಕವರ್ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಹರ್ಯಾಣ ಸರ್ಕಾರವು ತನ್ನ ಎಂಪ್ಯಾನಲ್ ಪಟ್ಟಿಯಿಂದ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಅನ್ನು ತೆಗೆದುಹಾಕಿದೆ. ತನ್ನ ಅಧೀನದ ಇಲಾಖೆಗಳು ಈ ಬ್ಯಾಂಕ್​ನಲ್ಲಿ ಹೊಂದಿರುವ ಅಕೌಂಟ್​ಗಳನ್ನು ಮುಚ್ಚುವಂತೆಯೂ ಸರ್ಕಾರ ತಿಳಿಸಿದೆ.

ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಈ ಅಕ್ರಮದ ಬಗ್ಗೆ ತನ್ನ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ. ಬ್ಯಾಂಕ್​ನ ಸಿಸ್ಟಂನಲ್ಲಿ ಯಾವುದೇ ಲೋಪ ಇಲ್ಲ. ನಿರ್ದಿಷ್ಟ ಬ್ರ್ಯಾಂಚ್​ನ ಕೆಲ ಸಿಬ್ಬಂದಿ ಹಾಗೂ ನಿರ್ದಿಷ್ಟ ಖಾತೆಗಳಿಗೆ ಮಾತ್ರವೇ ಈ ಅಕ್ರಮ ಸೀಮಿತವಾಗಿದೆ ಎಂದು ಬ್ಯಾಂಕ್ ಹೇಳಿಕೊಂಡಿದೆ. ಹಾಗೆಯೇ, ಬ್ಯಾಂಕ್ ಆಂತರಿಕ ತನಿಖೆ ನಡೆಸಿದ್ದು, ಅಕ್ರಮ ಎಸಗಿದ ಶಂಕೆಯ ಮೇಲೆ ನಾಲ್ವರು ಬ್ಯಾಂಕ್ ಅಧಿಕಾರಿಗಳನ್ನು ಅಮಾನತಿನಲ್ಲಿ ಇಡಲಾಗಿದೆ. ಬ್ಯಾಂಕ್​ನಿಂದ ಪೊಲೀಸ್ ದೂರು ಕೂಡ ಸಲ್ಲಿಕೆಯಾಗಿದೆ. ಸರ್ಕಾರಿ ಆಡಿಟಿಂಗ್​ಗೆ ಸೂಚಿಸಲಾಗಿದೆ. ಸ್ವತಂತ್ರವಾದ ಫೋರೆನ್ಸಿಕ್ ತನಿಖೆ ನಡೆಸುವಂತೆ ಕೆಪಿಎಂಜಿ ಸಂಸ್ಥೆಗೂ ತಿಳಿಸಲಾಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

Read this – US Supreme Court strikes down Donald Trump ; ಟ್ರಂಪ್​ಗೆ ಶಾಕ್ ಕೊಟ್ಟ ಅಮೆರಿಕದ ಸುಪ್ರೀಂ ಕೋರ್ಟ್|Kannada Folks

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ಸರ್ಕಾರದ ಷೇರುಪಾಲು ಅಧಿಕ

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ಅತಿಹೆಚ್ಚು ಷೇರುಮಾಲಿಕತ್ವ ಹೊಂದಿರುವುದು ಸರ್ಕಾರವೇ. ಶೇ. 7.75 ಷೇರುಪಾಲು ಹೊಂದಿದೆ. 66 ಕೋಟಿಗೂ ಅಧಿಕ ಷೇರುಗಳನ್ನು ಸರ್ಕಾರ ಹೊಂದಿದೆ. ಎಲ್​ಐಸಿ, ಟಾಟಾ ಎಐಎ ಲೈಫ್ ಇನ್ಷೂರೆನ್ಸ್, ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್, ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್ ಸಂಸ್ಥೆಗಳು ಗಣನೀಯ ಪ್ರಮಾಣದ ಷೇರುಪಾಲು ಹೊಂದಿವೆ. ರೀಟೇಲ್ ಹೂಡಿಕೆದಾರರ ಬಳಿ 129 ಕೋಟಿಗೂ ಅಧಿಕ ಷೇರುಗಳಿವೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×