Welcome to Kannada Folks   Click to listen highlighted text! Welcome to Kannada Folks
HomeNewsHow us president donald trumps decision to shut down USAID may impact...

How us president donald trumps decision to shut down USAID may impact projects in india

How us president donald trumps decision to shut down USAID may impact projects in india

Spread the love

How us president donald trumps decision to shut down USAID may impact projects in india

ಅಮೆರಿಕ ಫಸ್ಟ್’ ಇದು ಡೊನಾಲ್ಡ್ ಟ್ರಂಪ್ ಅವರ ಘೋಷವಾಕ್ಯ. ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೇಶವಾಸಿಗಳಿಗಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅಭಿವೃದ್ಧಿ ಹಾಗೂ ಮಾನವೀಯ ನೆರವಿನ ಆಶಯದೊಂದಿಗೆ ಇತರೆ ದೇಶಗಳಿಗೆ ಅಮೆರಿಕದಿಂದ ಭಾರತವೂ ಸೇರಿದಂತೆ ಹಲವು ದೇಶಗಳಿಗೆ ಹಣಕಾಸಿನ ಸಹಾಯ ಸಿಗುತ್ತಿತ್ತು. ಈಗ ಅದಕ್ಕೂ ಟ್ರಂಪ್ ಕೊಕ್ಕೆ ಹಾಕಿದ್ದಾರೆ. ಅನಾವಶ್ಯಕವಾಗಿ ಅಮೆರಿಕದ ಹಣ ಹೊರಗಡೆ ಹೋಗುತ್ತಿದೆ ಎಂಬುದು ಯುಎಸ್ ಅಧ್ಯಕ್ಷರ ವಾದ. ಇನ್ಮುಂದೆ ದೇಶದ ಹಣ ಅಮೆರಿಕನ್ನರಿಗಷ್ಟೇ ಸಿಗಬೇಕು. ವ್ಯರ್ಥವಾಗಿ ಬೇರೆಯವರ ಪಾಲಾಗಬಾರದು ಎಂದು ಟ್ರಂಪ್ ಸರ್ಕಾರ, ‘ಯುಎಸ್‌ಎಐಡಿ’ ಸ್ಥಗಿತಗೊಳಿಸುವ ಕ್ರಮಕೈಗೊಂಡಿದೆ.President Donald Trump's decision to close USAID to hit Telangana-Telangana  Today

Read this – Kollegala MLA AR krishnamurthys mother gowramma passes away  ಕೊಳ್ಳೇಗಾಲ ಶಾಸಕ ಆರ್ ಕೃಷ್ಣಮೂರ್ತಿ ತಾಯಿ ಗೌರಮ್ಮ ನಿಧನ

ಏನಿದು ಯುಎಸ್‌ಎಐಡಿ? ಇದರಿಂದ ವಿಶ್ವದ ಬಡರಾಷ್ಟ್ರಗಳಿಗೆ ಆಗುತ್ತಿದ್ದ ಅನುಕೂಲ ಏನು? ಈ ಸಂಸ್ಥೆಯನ್ನು ಸ್ಥಗಿತಗೊಳಿಸಲು ಅಮೆರಿಕ ನಿರ್ಧರಿಸಿದ್ಯಾಕೆ? ಭಾರತದ  ಮೇಲೂ ಇದರ ಪರಿಣಾಮ ಬೀರುತ್ತಾ? ಎಂಬ ಪ್ರಶ್ನೆಗಳಿಗೆ ಸಂಕ್ಷಿಪ್ತ ವಿವರ ಇಲ್ಲಿದೆ.

ಏನಿದು ಯುಎಸ್‌ಎಐಡಿ?

ಯುಎಸ್‌ಎಐಡಿ ಅಮೆರಿಕ ಸರ್ಕಾರದ ಅಂತಾರಾಷ್ಟ್ರೀಯ ಮಾನವೀಯ ಮತ್ತು ಅಭಿವೃದ್ಧಿ ಅಂಗವಾಗಿದೆ. ಇದು ಸ್ವಾಯತ್ತ ಸಂಸ್ಥೆಯಾಗಿದೆ. ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್‌ನ ವರದಿಯ ಪ್ರಕಾರ ಬಡತನ, ರೋಗ ಮತ್ತು ಇತರ ಬಿಕ್ಕಟ್ಟುಗಳನ್ನು ಎದುರಿಸುವ ದೇಶಗಳಿಗೆ ಸಹಾಯ ಮಾಡುವುದು ಇದರ ಉದ್ದೇಶವಾಗಿದೆ. ಈ ಸಂಸ್ಥೆಯಡಿ ಪ್ರಪಂಚದಾದ್ಯಂತ ಸುಮಾರು 10,000 ಜನರ ಕಾರ್ಯಪಡೆ ಕೆಲಸ ಮಾಡುತ್ತದೆ. ಹತ್ತಾರು ಶತಕೋಟಿ ಡಾಲರ್‌ಗಳ ವಾರ್ಷಿಕ ಬಜೆಟ್ ಅನ್ನು ಇದು ಜಗತ್ತಿನ ವಿವಿಧ ದೇಶಗಳಿಗೆ ಮೀಸಲಿಡುತ್ತದೆ.

ಸ್ಥಾಪನೆ ಯಾಕೆ?

1961 ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ಸ್ವತಂತ್ರ ಏಜೆನ್ಸಿಯಾಗಿ ಯುಎಸ್‌ಎಐಡಿಯನ್ನು ಸ್ಥಾಪಿಸಿದರು. ಶೀತಲ ಸಮರದ ಸಮಯದಲ್ಲಿ ಸೋವಿಯತ್ ಒಕ್ಕೂಟದ ಪ್ರಭಾವವನ್ನು ಎದುರಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ವಿವಿಧ ವಿದೇಶಿ ನೆರವು ಕಾರ್ಯಕ್ರಮಗಳ ಮೂಲಕ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ತನ್ನ ಮಾತು ಕೇಳುವಂತೆ ಮಾಡುವುದು ಅಮೆರಿಕದ ಪ್ರಮುಖ ಧ್ಯೇಯವಾಗಿತ್ತು. ಅಮೆರಿಕನ್ ಭದ್ರತೆಯು ಸ್ಥಿರತೆ ಮತ್ತು ಇತರ ರಾಷ್ಟ್ರಗಳಲ್ಲಿನ ಆರ್ಥಿಕ ಪ್ರಗತಿಗೆ ಪೂರಕವಾಗಿದೆ ಎಂದು ಪ್ರತಿಪಾದಿಸಲಾಗಿತ್ತು. ಮಹಿಳೆಯರ ಆರೋಗ್ಯದಿಂದ ಹಿಡಿದು ಶುದ್ಧ ಕುಡಿಯುವ ನೀರಿನವರೆಗೆ ಎಲ್ಲಾ ಸಮಸ್ಯೆಗಳ ಪರಿಹಾರದಲ್ಲೂ ಯುಎಸ್‌ಎಐಡಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.Donald Trump's foreign aid suspension hits Pakistan: How it will impact key  sectors - The Times of India

Read this – CM Siddaramaiah instruction to provide justice to the victims of atrocity cases

ಯಾವ್ಯಾವ ದೇಶಗಳಿಗೆ ಅತಿ ಹೆಚ್ಚು ನೆರವು?

2023 ರ ಆರ್ಥಿಕ ವರ್ಷದಲ್ಲಿ, ಯುಎಸ್‌ಎಐಡಿ 40 ಶತಕೋಟಿಗಿಂತ ಹೆಚ್ಚಿನ ಡಾಲರ್ ನೆರವನ್ನು ನೀಡಿತ್ತು. ಇದರ ಬಜೆಟ್‌ನ ಲೆಕ್ಕಾಚಾರಗಳು ನಿಖರವಾಗಿರುವುದಿಲ್ಲ. ದಿ ವಾಷಿಂಗ್ಟನ್ ಪೋಸ್ಟ್ ಪ್ರಕಾರ, ನಲವತ್ತು ಶತಕೋಟಿ ಡಾಲರ್‌ಗಳು ಫೆಡರಲ್ ಬಜೆಟ್‌ನ 1% ಕ್ಕಿಂತ ಕಡಿಮೆಯಿರುತ್ತದೆ. ಯುಎಸ್‌ಎಐಡಿ 2023 ರ ಆರ್ಥಿಕ ವರ್ಷದಲ್ಲಿ ಸುಮಾರು 130 ದೇಶಗಳಿಗೆ ಸಹಾಯವನ್ನು ಒದಗಿಸಿದೆ. ಈ ದೇಶಗಳ ಪೈಕಿ ಉಕ್ರೇನ್, ಇಥಿಯೋಪಿಯಾ, ಜೊರ್ಡಾನ್, ಕಾಂಗೊ, ಸೊಮಾಲಿಯಾ, ಯೆಮನ್, ಅಫ್ಘಾನಿಸ್ತಾನ, ನೈಜೀರಿಯಾ, ಸೌತ್ ಸುಡಾನ್, ಸಿರಿಯಾ ಸೇರಿದಂತೆ ಅನೇಕ ರಾಷ್ಟçಗಳು ಅತಿ ಹೆಚ್ಚು ನೆರವು ಪಡೆದುಕೊಂಡಿವೆ.Trump's flurry of day one policies had some surprising omissions | VoxRead this – keonics vendors due amount released-sharath bachegowda

ಭಾರತದಲ್ಲೂ ಯುಎಸ್‌ಎಐಡಿ ನಿಧಿ?

ಯುಎಸ್‌ಎಐಡಿ ಭಾರತದಲ್ಲಿ 70 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 2023-24 ರ ಆರ್ಥಿಕ ವರ್ಷದಲ್ಲಿ, ಇದರಿಂದ ಸರ್ಕಾರ ಮತ್ತು ನಾಗರಿಕ ಸಮಾಜಕ್ಕಾಗಿ 6.8 ಮಿಲಿಯನ್ ಡಾಲರ್ ನೆರವು ಸಿಕ್ಕಿತ್ತು. ಆರೋಗ್ಯಕ್ಕಾಗಿ ಸುಮಾರು 55 ಮಿಲಿಯನ್ ಡಾಲರ್, ಯುಎಸ್ ಸರ್ಕಾರದ ಫಾರಿನ್ ಅಸಿಸ್ಟೆನ್ಸ್ ವೆಬ್‌ಸೈಟ್‌ನ ಪ್ರಕಾರ ಪರಿಸರಕ್ಕೆ 18 ಮಿಲಿಯನ್ ಡಾಲರ್ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕಾಗಿ 7.8 ಮಿಲಿಯನ್ ಡಾಲರ್ ನೆರವು ದೊರೆತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಇದರ ಮೂಲಕ ಭಾರತವು 140 ದಶಲಕ್ಷ ಡಾಲರ್ ಪಡೆಯಬೇಕಿದ್ದರೆ, ದೇಶದ ಒಟ್ಟಾರೆ ಬಜೆಟ್ 600 ಶತಕೋಟಿಗಿಂತ ಹೆಚ್ಚಿರಬೇಕು. ಆದರೀಗ, ಯುಎಸ್‌ಎಐಡಿ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ಪಾಲುದಾರರಿಗೆ ಯೋಜನೆಗಳನ್ನು ನಿಲ್ಲಿಸುವಂತೆ ನಿರ್ದೇಶಿಸಿದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!