Health drink powder Recipe in Kannada – ಹೆಲ್ತ್ ಡ್ರಿಂಕ್ ಪೌಡರ್
ಬೇಕಾಗುವ ಪದಾರ್ಥಗಳು
- ಬಾದಾಮಿ- 1 ಬಟ್ಟಲು
- ಓಟ್ಸ್- 1 ಬಟ್ಟಲು
- ಕಡಲೆಕಾಯಿ ಬೀಜ- 1 ಬಟ್ಟಲು
- ಮಖಾನಾ- 1 ಬಟ್ಟಲು
- ಕುಂಬಳಕಾಯಿ ಬೀಜ- 1 ಬಟ್ಟಲು
- ಗೋಡಂಬಿ- ಸ್ವಲ್ಪ
- ಕೋಕೋ ಪೌಡರ್ – 3-4 ಚಮಚ
Read this – How to make the Beetroot Momos Recipe in Kannada ಬೀಟ್ರೂಟ್ ಮೊಮೊಸ್
ಮಾಡುವ ವಿಧಾನ…
ಒಲೆಯ ಮೇಲೆ ಬಾಣಲೆ ಇಟ್ಟು ಕೋಕೋ ಪೌಡರ್ ಬಿಟ್ಟು ಮೇಲಿನ ಎಲ್ಲಾ ಪದಾರ್ಥಗಳನ್ನೂ ಒಂದೊಂದಾಗಿ ಪ್ರತ್ಯೇಕವಾಗಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಿ.
ಇದು ತಣ್ಣಗಾದ ಬಳಿಕ ಮಿಕ್ಸಿ ಜಾರ್’ಗೆ ಹಾಕಿ ಪುಡಿ ಮಾಡಿ. ಈ ಪುಡಿಗೆ ಕೋಕೋ ಪೌಡರ್ ಹಾಕಿ ಮಿಶ್ರಮ ಮಾಡಿ. ಗಾಳಿಯಾಡದ ಡಬ್ಬಿಗೆ ಹಾಕಿಟ್ಟುಕೊಳ್ಳಿ.
ಮಕ್ಕಳಿಗೆ ಕೊಡುವಾ ಬಿಸಿ ಹಾಲಿಗೆ 1 ಚಮಚ ಬೆಲ್ಲದ ಪುಡಿ ಅಥವಾ ಕಲ್ಲು ಸಕ್ಕರೆ ಹಾಗೂ ಈಗಾಗಲೇ ಮಾಡಿಟ್ಟುಕೊಂಡ ಹೆಲ್ತ್ ಡ್ರಿಂಕ್ ಪೌಡರ್ ನ್ನು ಒಂದು ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೊಡಿ.
ಈ ಹೆಲ್ತ್ ಡ್ರಿಂಕ್ಸ್ ಮಕ್ಕಳ ತೂಕವನ್ನು ಹೆಚ್ಚಿಸುವುದಲ್ಲದೆ, ಮೂಳೆ ಬಲವಾಗಿರವಂತೆ ಹಾಗೂ ಆರೋಗ್ಯವೂ ಉತ್ತಮವಾಗಿರುವಂತೆ ಮಾಡುತ್ತದೆ.
Subscribe for Free and Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ