HomeNewsHardeep Singh Puri Says - ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಕೊರತೆ ಇಲ್ಲ

Hardeep Singh Puri Says – ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಕೊರತೆ ಇಲ್ಲ

Minister Says - ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

Minister Says – ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

 

ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ಭಾರತದಲ್ಲಿ ಇಂಧನ ಕೊರತೆ ಉದ್ಭವವಾಗುವ ಆತಂಕ ಇದೆ. ಆದರೆ, ಯಾವುದೇ ಚಿಂತೆಪಡಬೇಕಾದ ಸಂದರ್ಭ ಇಲ್ಲ ಎಂದು ಸರ್ಕಾರ ಪುನರುಚ್ಚರಿಸಿದೆ. ಸಂಸತ್​ನಲ್ಲಿ ಮಾತನಾಡಿದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶದಲ್ಲಿ ಎಲ್​ಪಿಜಿ, ಪೆಟ್ರೋಲ್ ಇತ್ಯಾದಿ ಇಂಧನ ದಾಸ್ತಾನು ಸಾಕಷ್ಟಿದೆ ಎಂದಿದ್ದಾರೆ.

ನವದೆಹಲಿ, ಮಾರ್ಚ್ 12: ದೇಶದಲ್ಲಿ ಪೆಟ್ರೋಲ್, ಡೀಸಲ್, ಸೀಮೆ ಎಣ್ಣೆ ಅಥವಾ ಎಲ್​ಪಿಜಿ ಲಭ್ಯತೆಯಲ್ಲಿ ಯಾವುದೇ ಕೊರತೆ ಆಗಿಲ್ಲ. ಇಂಧನ ಲಭ್ಯತೆ ಸಾಕಷ್ಟಿದೆ. ಇಂಧನ ಸರಬರಾಜು ಸರಪಳಿ ಸರಾಗವಾಗಿ ಇದೆ ಎಂದು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸಂಸತ್​ನಲ್ಲಿ ಗುರುವಾರ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri), ಭಾರತದಲ್ಲಿ ಸಾಕಷ್ಟು ಇಂಧನ ದಾಸ್ತಾನು ಇದ್ದು ಯಾವುದೇ ರೀತಿಯಲ್ಲಿ ಆತಂಕಪಡಬೇಕಾದ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ.

Hardeep Singh Puri On Petrol Diesel GST,ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌- ಡೀಸೆಲ್‌ ತರಲು ಯತ್ನ: ನೂತನ ಸಚಿವ ಹರ್ದೀಪ್‌ ಸಿಂಗ್‌ಪುರಿ - will try to bring petrol- diesel under gst new petrolium and natural ...

 

ಪೆಟ್ರೋಲ್ ಆಗಲೀ, ಡೀಸಲ್ ಆಗಲೀ, ಸೀಮೆ ಎಣ್ಣೆಯಾಗಲೀ, ಎಲ್​ಪಿಜಿಯಾಗಲೀ ಕೊರತೆ ಎದುರಿಸುತ್ತಿಲ್ಲ. ಅವುಗಳ ಲಭ್ಯತೆ ಬಹಳ ಖಚಿತ ಇದೆ. ಅವುಗಳ ಪೂರೈಕೆ ವ್ಯವಸ್ಥೆಯೂ ಸರಾಗವಾಗಿ ನಡೆಯುತ್ತಿದೆ. ದೇಶದ ಒಟ್ಟಾರೆ ಇಂಧನ ಪರಿಸ್ಥಿತಿ ಉತ್ತಮವಾಗಿದೆ. ಬಳಕೆಗೆ ಬೇಕಾಗುವಷ್ಟು ದಾಸ್ತಾನು ಇದೆ ಎಂದು ಪೆಟ್ರೋಲಿಯಂ ಸಚಿವರು ತಿಳಿಸಿದ್ದಾರೆ.

ದೇಶದಲ್ಲಿ ಈಗ ಎಲ್​ಪಿಜಿ ಲಭ್ಯತೆಯೇ ದೊಡ್ಡ ಚಿಂತೆಯ ವಿಷಯವಾಗಿದೆ. ಈ ವಿಚಾರದ ಬಗ್ಗೆ ಹರ್ದೀಪ್ ಸಿಂಗ್ ಪುರಿ ಆಶಾದಾಯಕವಾಗಿ ಮಾತನಾಡಿದ್ದಾರೆ. ದೇಶೀಯ ಎಲ್​ಪಿಜಿ ಪೂರೈಕೆ ಪೂರ್ಣ ಸಂರಕ್ಷಿತವಾಗಿದೆ. ಜಾಗತಿಕ ರಾಜಕೀಯ ಬಿಕ್ಕಟ್ಟು, ಇಂಧನ ಮಾರುಕಟ್ಟೆಗಳ ವ್ಯತ್ಯಯಗಳ ಪರಿಣಾಮಗಳು ಎಲ್​ಪಿಜಿ ಪೂರೈಕೆ ಮೇಲೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಭಾರತದ 60ರಷ್ಟು ಎಲ್​ಪಿಜಿ ಪೂರೈಕೆಯನ್ನು ಗಲ್ಫ್ ದೇಶಗಳಿಂದ ಪಡೆಯಲಾಗುತ್ತಿದೆ. ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಗೆ ತಡೆಯುಂಟಾಗಿರುವುದರಿಂದ ಗಲ್ಫ್​ನಿಂದ ಎಲ್​ಪಿಜಿ ಪೂರೈಕೆ ಸ್ಥಗಿತಗೊಂಡಿದೆ. ಇದನ್ನು ಸರಿದೂಗಿಸಲು ಭಾರತ ಸರ್ಕಾರ ಬೇರೆ ಬೇರೆ ಪ್ರದೇಶಗಳಿಂದ ತೈಲ, ಅನಿಲಗಳ ಪೂರೈಕೆ ಪಡೆಯುತ್ತಿದೆ.

ಇದೇ ವೇಳೆ, ಹಾರ್ಮುಜ್ ಜಲಸಂಧಿಯಿಂದ ಭಾರತಕ್ಕೆ ಸಾಗಿಸಬೇಕಾಗಿರುವ ತೈಲ ಹಡಗುಗಳಿಗೆ ಇರಾನ್​ನ ಅನುಮತಿ ಸಿಕ್ಕಿದೆ. ಎರಡು ಹಡಗುಗಳು ಭಾರತದತ್ತ ಹೊರಟಿವೆ ಎನ್ನುವಂತಹ ಸುದ್ದಿ ಬಂದಿತ್ತು. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇರಾನ್​ನ ಸಚಿವರೊಂದಿಗೆ ಎಸ್ ಜೈಶಂಕರ್ ಮಾತುಕತೆಗಳನ್ನು ನಡೆಸಿದ್ದಾರೆ. ಈಗಲೇ ಆ ಸಂಬಂಧ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

Read this:Lingaraj Patil Quits BJP Post-ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ರಾಜೀನಾಮೆ |Kannada Folks

 

 

 

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments