Hanke India China Gap-ಹ್ಯಾಂಕ್ ತಲಾದಾಯ ಹಿಂದುಳಿಕೆ
Economist Steve Hanke compares India’s big GDP and low per capital income: ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶ. ಆದರೆ, ಜಿಡಿಪಿ ತಲಾದಾಯದಲ್ಲಿ 126ನೇ ಸ್ಥಾನದಲ್ಲಿದೆ ಎಂದು ಆರ್ಥಿಕ ತಜ್ಞ ಸ್ಟೀವ್ ಹ್ಯಾಂಕ್ ಹೇಳಿದ್ದಾರೆ. 1980ರಲ್ಲಿ ಜಿಡಿಪಿ ತಲಾದಾಯದಲ್ಲಿ ಚೀನಾಗಿಂತಲೂ ಸ್ವಲ್ಪ ಮೇಲಿದ್ದ ಭಾರತ ಈಗ ಅದರ ಅರ್ಧಕ್ಕೆ ಬಂದು ನಿಂತಿರುವ ಸಂಗತಿಯನ್ನು ಹ್ಯಾಂಕ್ ಎತ್ತಿ ತೋರಿಸಿದ್ದಾರೆ.![]()
Read this : Jaiswal Sooryavanshi Record-ದಾಖಲೆ ಧ್ವಂಸ ಬ್ಯಾಟಿಂಗ್
ನವದೆಹಲಿ, ಏಪ್ರಿಲ್ 5: ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತ, ಜಿಡಿಪಿ ತಲಾದಾಯದಲ್ಲಿ (GDP Per Capita Income) ಬಹಳ ಹಿಂದುಳಿದಿದೆ. ಬಡವರು ಮತ್ತು ಕೆಳಮಧ್ಯಮ ವರ್ಗದವರ ಸಂಖ್ಯೆಯೇ ಅತಿಹೆಚ್ಚು ಇರುವುದು. ವಿಶ್ವಖ್ಯಾತ ಆರ್ಥಿಕ ತಜ್ಞ ಸ್ಟೀವ್ ಹ್ಯಾಂಕ್ (Steve Hanke) ಅವರು ಈ ವಿಚಾರವನ್ನು ಪ್ರಸ್ತಾಪಿಸಿ ಮಾಡಿದ ಟ್ವೀಟ್ವೊಂದು ಚರ್ಚೆ ಹುಟ್ಟುಹಾಕಿದೆ.
ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಜಿಡಿಪಿ ಹೊಂದಿದೆ. ಆದರೆ, ತಲಾದಾಯದಲ್ಲಿ 126ನೇ ಸ್ಥಾನದಲ್ಲಿದೆ ಎಂದಿರುವ ಅವರು 1980ರಲ್ಲಿ ಚೀನಾಗಿಂತಲೂ ಭಾರತದ ಜಿಡಿಪಿ ತಲಾದಾಯ ಹೆಚ್ಚು ಇದ್ದದ್ದು, ಈಗ ಅರ್ಧದಷ್ಟು ಇರುವ ಸಂಗತಿಯನ್ನು ಎತ್ತಿ ತೋರಿಸಿದ್ದಾರೆ.
ಪ್ರೊಫೆಸರ್ ಸ್ಟೀವ್ ಹ್ಯಾಂಕ್ ಅವರ ಈ ಟ್ವೀಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಭಾರತದ ಆರ್ಥಿಕತೆ ಈಗ ವೇಗವಾಗಿ ಬೆಳೆಯುತ್ತಿದೆಯಾದರೂ ಜನಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಜಿಡಿಪಿ ತಲಾದಾಯ ಸಹಜವಾಗಿ ಕಡಿಮೆ ಇದೆ ಎಂದು ಹೆಚ್ಚಿನ ಮಂದಿ ವಾದಿಸಿದ್ದಾರೆ.
ಸ್ಟೀವ್ ಹ್ಯಾಂಕ್ ಅವರ ಟ್ವೀಟ್
2001ರಲ್ಲಿ ಭಾರತದ ಜಿಡಿಪಿ ತಲಾದಾಯ 450 ಡಾಲರ್ ಇತ್ತು. ಇವತ್ತು ಅದರು 2,700 ಡಾಲರ್ಗಿಂತಲೂ ಹೆಚ್ಚಿದೆ. 25 ವರ್ಷದಲ್ಲಿ ಆರು ಪಟ್ಟು ಹೆಚ್ಚಿದೆ. ದೊಡ್ಡ ಗಾತ್ರದ ಆರ್ಥಿಕತೆಗಳು ಪದರಗಳಲ್ಲಿ ಬೆಳವಣಿಗೆ ಹೊಂದುತ್ತವೆ. ಮೊದಲು ಜಿಡಿಪಿ ಹಿಗ್ಗುತ್ತದೆ. ನಂತರ ಆದಾಯ ಹಂಚಿಕೆ ಬಹಳ ಕ್ರಮೇಣವಾಗಿ ಸುಧಾರಿಸುತ್ತಾ ಹೋಗುತ್ತದೆ ಎಂದು ಒಬ್ಬರು ಕಾಮೆಂಟಿಸಿದ್ದಾರೆ.
ಭಾರತದ ತಲಾದಾಯವನ್ನು ನಾಮಿನಲ್ ಜಿಡಿಪಿ ಬದಲು ಪಿಪಿಪಿ ಆಧಾರದಲ್ಲಿ ಅಳೆಯುವುದು ಸೂಕ್ತ. ನಾಮಿನಲ್ ಜಿಡಿಪಿ ತಲಾದಾಯವನ್ನು ಡಾಲರ್ ಮೌಲ್ಯದ ಮೂಲಕ ಗಣಿಸಲಾಗುತ್ತದೆ. ಆದರೆ, ಪಿಪಿಪಿ ಮಾಡಲ್ನಲ್ಲಿ ಜನರ ಜೀವನಮಟ್ಟವನ್ನು ಹೆಚ್ಚು ನಿಖರವಾಗಿ ಅಳೆಯಬಹುದು ಎಂಬುದು ಕೆಲವರ ವಾದ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


