Haalalladaru Haaku song Lyrics- ಹಾಲಲ್ಲಾದರು ಹಾಕು
Read this-Guruvaara Banthamma song Lyrics ಗುರುವಾರ ಬಂತಮ್ಮ
ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾ..ಗಿ, ನೀರಲ್ಲಿ
ಮೀನಾಗಿ ಹಾಯಾಗಿರುವೆ ರಾಘವೇಂದ್ರ
ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾ..ಗಿ, ನೀರಲ್ಲಿ
ಮೀನಾಗಿ ಹಾಯಾಗಿರುವೆ ರಾಘವೇಂದ್ರ
ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರ
ಮುಳ್ಳಲ್ಲಾದರು ನೂಕು,
ಕಲ್ಲಲ್ಲಾದರು ನೂಕು ರಾಘವೇಂದ್ರ…..
ಆಆ ಆ ಹಾ ಆಆ ಹಾಆಆ ಆಆಆಆಆಆ….
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು
ನೂಕು ರಾಘವೇಂದ್ರ….
ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ
ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ
ಬಿಸಿಲಲ್ಲಿ ಒಣಗಿಸು,
ನೆರಳಲ್ಲಿ ಮಲಗಿಸು ರಾಘವೇಂದ್ರ…
ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ
ತಂಪಾಗಿ ನಗುನಗುತ ಇರುವೆ ರಾಘವೇಂದ್ರ..
ಹಾಲಲ್ಲಾದರು ಹಾಕು ನೀರಲ್ಲಾದರು
ಹಾಕು ರಾಘವೇಂದ್ರ…
ಆಆ ಆ ಹಾ ಆಆ ಹಾಆಆ ಆಆಆಆ….
ಸುಖವನ್ನೇ ನೀಡೆಂದು ಎಂದೂ
ಕೇಳೆನು ನಾನು ರಾಘವೇಂದ್ರ..
ಹಾ ಆ ಹಾ ಆಆ ಹಾಆಆ
ಆಆಆಆಆಆ….
ಸುಖವನ್ನೇ ನೀಡೆಂದು ಎಂದೂ
ಕೇಳೆನು ನಾನು ರಾಘವೇಂದ್ರ….
ಮುನ್ನ ಮಾಡಿದ ಪಾಪ
ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ
ಯಾರ ತಾತನ ಗಂಟು
ನೀನೇ ಹೇಳು ರಾಘವೇಂದ್ರ
ಎಲ್ಲಿದ್ದರೇನು ನಾ ಹೇಗಿದ್ದರೇನು ನಾ ರಾಘವೇಂದ್ರ
ನಿನ್ನಲ್ಲಿ ಶರಣಾಗಿ ನೀ ನನ್ನ
ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ
ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾ..ಗಿ, ನೀರಲ್ಲಿ
ಮೀನಾಗಿ ಹಾಯಾಗಿರುವೆ ರಾಘವೇಂದ್ರ…
ಹಾಲಲ್ಲಾದರು ಹಾಕು ನೀರಲ್ಲಾದರು
ಹಾಕು ರಾಘವೇಂದ್ರ…….
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



