Guruvaara Banthamma song Lyrics – ಗುರುವಾರ ಬಂತಮ್ಮ
Read this-Haalalladaru Haaku song Lyrics- ಹಾಲಲ್ಲಾದರು ಹಾಕು
ಗುರುವಾರ ಬಂತಮ್ಮ…ಗುರುರಾಯರ ನೆನೆಯಮ್ಮ
ಗುರುವಾರ ಬಂತಮ್ಮ…ಗುರುರಾಯರ ನೆನೆಯಮ್ಮ
ಸ್ಮರಣೆಮಾತ್ರದಲಿ ಕ್ಲೇಶಕಳೆದು..
ಸದ್ಗತಿಯ ಕೊಡುವನಮ್ಮ
ವಾರ ಬಂತಮ್ಮ..ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ
ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ
ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ
ರಾಘವೇಂದ್ರ ಗುರುರಾಯ ಬಂದು..ಭವರೋಗ ಕಳೆವನಮ್ಮ
ವಾರ ಬಂತಮ್ಮ..ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ
ಮನವ ತೊಳೆಯಿರಮ್ಮ..ಭಕ್ತಿಯ ಮಣೆಯ ಹಾಕಿರಮ್ಮ
ಮನವ ತೊಳೆಯಿರಮ್ಮ..ಭಕ್ತಿಯ ಮಣೆಯ ಹಾಕಿರಮ್ಮ
ಧ್ಯಾನದಿಂದ ಕರೆದಾಗ ಬಂದು..ಒಳೆಗಣ್ಣ ಬೆರೆವನಮ್ಮ
ವಾರ ಬಂತಮ್ಮ..ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ
ಕೋಪ ಅರಿಯನಮ್ಮ…ಯಾರನು ದೂರ ತಳ್ಳನಮ್ಮ
ಕೋಪ ಅರಿಯನಮ್ಮ…ಯಾರನು ದೂರ ತಳ್ಳನಮ್ಮ
ಪ್ರೀತಿ ಮಾತಿಗೆ ಸೋತು ಬರುವ.
.ಮಗುವಂತೆ ಕಾಣಿರಮ್ಮ
ವಾರ ಬಂತಮ್ಮ..ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ
ಹಿಂದೆ ಬರುವನಮ್ಮ..ರಾಯರ ನೆರಳಿನಂತೆ ಹನುಮ
ಹಿಂದೆ ಬರುವನಮ್ಮ..ರಾಯರ ನೆರಳಿನಂತೆ ಹನುಮ
ಹನುಮನಿದ್ದೆಡೆ ರಾಮನಿದ್ದು
ನಿಜ ಮುಕ್ತಿ ಕೊಡುವನಮ್ಮ
ವಾರ ಬಂತಮ್ಮ..ಗುರುವಾರ ಬಂತಮ್ಮ
ರಾಯರ ನೆನೆಯಮ್ಮ….ಗುರುರಾಯರ ನೆನೆಯಮ್ಮ
ಸ್ಮರಣೆಮಾತ್ರದಲಿ ಕ್ಲೇಶಕಳೆದು
..ಸದ್ಗತಿಯ ಕೊಡುವನಮ್ಮ
ವಾರ ಬಂತಮ್ಮ..ಗುರುವಾರ ಬಂತಮ್ಮ
ರಾಯರ ನೆನೆಯಮ್ಮ….ಗುರುರಾಯರ ನೆನೆಯಮ್ಮ
“ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನವೆ”
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



