Gold price prediction by Ed Yardeni – ಚಿನ್ನದ ಬೆಲೆ
ಗಗನಕ್ಕೇರುವ ಚಿನ್ನದ ಬೆಲೆ ಇಳಿಯುವ ಯಾವ ಸೂಚನೆಯೂ ಇಲ್ಲ. ಬೆಲೆ ಹೆಚ್ಚಿದಷ್ಟೂ ಅದಕ್ಕೆ ಡಿಮ್ಯಾಂಡ್ ಹೆಚ್ಚುತ್ತಿದೆ. ಮಾರುಕಟ್ಟೆ ವಿಶ್ಲೇಷಕ ಎಡ್ ಯಾರ್ದೆನಿ ಪ್ರಕಾರ ಮುಂದಿನ ಮೂರು ವರ್ಷದಲ್ಲಿ ಚಿನ್ನದ ಬೆಲೆ ಔನ್ಸ್ಗೆ 10,000 ಡಾಲರ್ ದಾಟಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 31,000 ರೂ ದಾಟಿ ಹೋಗಬಹುದು ಎಂಬುದು ಅವರ ಎಣಿಕೆ.
ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ ಅಸಾಮಾನ್ಯ ರೀತಿಯಲ್ಲಿ ಓಡಿದೆ. ಈ ಭರ್ಜರಿ ಓಟ ಹೀಗೆ ಮುಂದುವರಿಯುತ್ತಾ ಎನ್ನುವುದು ಹಲವರಿಗೆ ಇರುವ ಪ್ರಶ್ನೆಯಾಗಿದೆ. ಯಾರ್ದೇನಿ ರಿಸರ್ಚ್ ಸಂಸ್ಥೆಯ ಮುಖ್ಯಸ್ಥರಾದ ಎಡ್ ಯಾರ್ದೇನಿ ಅವರ ಪ್ರಕಾರ ಚಿನ್ನದ ಬೆಲೆ 2029ರಲ್ಲಿ ಗ್ರಾಮ್ಗೆ 31,000 ರೂ ದಾಟಿ ಹೋಗಬಹುದು.
Read this – India new zealand seal ನ್ಯೂಜಿಲೆಂಡ್ ‘ಮುಕ್ತ ವ್ಯಾಪಾರ ಒಪ್ಪಂದ& ಅಂತಿಮ | Kannada Folks
ಸದ್ಯ ಅಮೆರಿಕದ ನ್ಯೂಯಾರ್ಕ್ನ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ (ಸರಕು ವಿನಿಮಯ ಕೇಂದ್ರ) ಚಿನ್ನದ ಬೆಲೆ ಒಂದು ಔನ್ಸ್ಗೆ 4,400 ಡಾಲರ್ ಇದೆ. 2029ರಲ್ಲಿ ಇದರ ಬೆಲೆ ಒಂದು ಔನ್ಸ್ಗೆ 10,000 ಡಾಲರ್ಗೆ ಏರಬಹುದು ಎಂಬುದ ಎಡ್ ಯಾರ್ಡೇನಿ ಅವರು ಮಾಡಿರುವ ಅಂದಾಜು.
ಒಂದು ಔನ್ಸ್ ಎಂದರೆ 28.3495 ಗ್ರಾಮ್. ಒಂದು ಔನ್ಸ್ಗೆ 10,000 ಡಾಲರ್ ಎಂದರೆ, ಒಂದು ಗ್ರಾಮ್ಗೆ ಸುಮಾರು 352 ಡಾಲರ್ ಆಗುತ್ತದೆ. ಭಾರತೀಯ ಕರೆನ್ಸಿಯಲ್ಲಿ 31,740 ರೂ ಆಗುತ್ತದೆ. ಎಡ್ ಯಾರ್ದೆನಿ ಭವಿಷ್ಯ ನಿಜವಾದಲ್ಲಿ ಮುಂದಿನ ಮೂರು ವರ್ಷದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 31,000 ರೂ ಅಥವಾ 32,000 ರೂ ದಾಟಿ ಹೋಗಬಹುದು. ಭಾರತದಲ್ಲಿ ಸದ್ಯ ಒಂದು ಗ್ರಾಮ್ ಚಿನ್ನದ ಬೆಲ 13,500 ರೂನಷ್ಟಿದೆ. ಎರಡೂವರೆ ಪಟ್ಟು ಬೆಲೆ ಅಧಿಕಗೊಳ್ಳಬಹುದು.
2025ರಲ್ಲಿ ಚಿನ್ನದ ಬೆಲೆ ಶೇ. 67ರಷ್ಟು ಹೆಚ್ಚಿದೆ. ಇತ್ತೀಚಿನ ಕೆಲ ವರ್ಷಗಳಿಂದ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಒಳ್ಳೆಯ ಲಾಭ ಸಿಗುತ್ತಾ ಬಂದಿದೆ.
ಭಾರತದ ಷೇರು ಮಾರುಕಟ್ಟೆ ಬಗ್ಗೆ ಯಾರ್ದೆನಿ ನಿರೀಕ್ಷೆ
ಮಾರುಕಟ್ಟೆ ವಿಶ್ಲೇಷಕರಾಗಿರುವ ಎಡ್ ಯಾರ್ದೆನಿ ಅವರು ಭಾರತದ ಈಕ್ವಿಟಿ ಮಾರುಕಟ್ಟೆ ಬಗ್ಗೆ ಬಹಳ ಸಕಾರಾತ್ಮಕವಾಗಿದ್ದಾರೆ. ಹಲವು ವರ್ಷಗಳಿಂದ ಇಲ್ಲಿಯ ಮಾರುಕಟ್ಟೆ ಬಹಳ ಪ್ರಬಲವಾಗಿ ಬೆಳೆದಿದೆ. 2026ರಲ್ಲಿ ಇದು ಸ್ಥಿರಗೊಳ್ಳುವ ವರ್ಷ ಎಂಬುದು ಅವರ ಭಾವನೆ.
Read this – Christmas Carole ಕ್ರಿಸ್‌ಮಸ್ ಕ್ಯಾರೋಲ್ ಗುಂಪಿನ ಮೇಲೆ ದಾಳಿ | Kannada Folks
ಅಮೆರಿಕದೊಂದಿಗೆ ಟ್ರೇಡ್ ಮಾಡಿಕೊಳ್ಳಲು ಯಶಸ್ವಿಯಾಗಿಬಿಟ್ಟರೆ ಭಾರತದ ಈಕ್ವಿಟಿ ಮಾರುಕಟ್ಟೆ ಹೊಸ ಎತ್ತರಕ್ಕೆ ಹೋಗುತ್ತದೆ ಎಂದು ಹೇಳುವ ಅವರು, ಭಾರತ ಹಾಗೂ ಚೀನಾ ಈ ಎರಡೂ ದೇಶಗಳ ಮಾರುಕಟ್ಟೆಗಳು ಉತ್ತಮ ಅವಕಾಶ ಕೊಡುತ್ತವೆ ಎಂದಿದ್ದಾರೆ. ಹಾಗೆಯೇ, ಅವರು ಆ ಎರಡು ದೇಶಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ ಭಾರತಕ್ಕೇ ಆದ್ಯತೆ ಕೊಡುತ್ತಾರಂತೆ.
‘ಭಾರತದಲ್ಲಿ ಹೂಡಿಕೆ ಮಾಡುವುದು ನನ್ನ ಆದ್ಯತೆ. ಅದು ಯಾಕೆಂದರೆ, ಚೀನಾದಲ್ಲಿರುವುದಕ್ಕಿಂತ ಉತ್ತಮವಾದ ಕಾನೂನು ಮತ್ತು ಕಾರ್ಪೊರೇಟ್ ಸಿಸ್ಟಂ ಭಾರತದಲ್ಲಿ ಇದೆ’ ಎಂದು ಯಾರ್ದೆನಿ ರಿಸರ್ಚ್ ಸಂಸ್ಥೆಯ ಅಧ್ಯಕ್ಷರೂ ಆದ ಅವರು ವಿಶ್ಲೇಷಿಸಿದ್ದಾರೆ.
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 

