Gajamukhane Ganapatiye Song Lyrics- ಗಜಮುಖನೆ ಗಣಪತಿಯೇ
ಶುಕ್ಲಾಂ ಬರಧರಂ ವಿಷ್ಣುಂ
ಶಶಿ ವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ..ಏಏ
ಆ ಆ ಆ ಆ ಆ ಆ ಆಆಆ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದೂ
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದೂ
ನಿನ್ನ ಸನ್ನಿಧಾನದಿ ತಲೆಬಾಗಿ ಕೈಯ ಮುಗಿದು
ಬೇಡುವ ಭಕ್ತರಿಗೆ ನೀ ದಯಾಸಿಂಧು
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ
ಈರೇಳು ಲೋಕದ ಅಣು ಅಣುವಿನಾ..
ಇಹಪರದ ಸಾಧನಕೆ ನೀ ಕಾರಣ
ಈರೇಳು ಲೋಕದ ಅಣು ಅಣುವಿನಾ..
ಇಹಪರದ ಸಾಧನಕೆ ನೀ ಕಾರಣ
ನಿನ್ನೊಲುಮೆ ನೋಟದ ಒಂದು ಹೊನ್ನಕಿರಣ
ನೀಡಿದರೆ ಸಾಕಯ್ಯಾ ಜನ್ಮ ಪಾವನ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ
ಪಾರ್ವತಿ ಪರಶಿವನ ಪ್ರೇಮ ಪುತ್ರನೇ..
ಪಾಲಿಸುವ ಪರದೈವ ಬೇರೆ ಕಾಣೆ
ಪಾರ್ವತಿ ಪರಶಿವನ ಪ್ರೇಮ ಪುತ್ರನೇ..
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದಸೇವೆ ಒಂದೇ ಧರ್ಮಸಾಧನ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ
Get More Here :
Kelo Madeva Kannada Song – kelo mahadeva kannada song lyrics
Devare neenu nijavappa lyrics in kannada
Madeshwara song lyrics in kannada
Mahadeshwara daya barade lyrics
Siddayya swamy banni lyrics in kannada
Ganga jatadhara lyrics in kannada
Adidavara manava balle song lyrics
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ


