Egg sandwich Recipe in Kannada – ಎಗ್ ಸ್ಯಾಂಡ್ವಿಚ್
ಬೇಕಾಗುವ ಪದಾರ್ಥಗಳು…
- ಮೊಟ್ಟೆ- 4
- ಬ್ರೆಡ್ ತುಂಡು- 4
- ಟೊಮೆಟೊ- 1
- ಈರುಳ್ಳಿ- 2
- ಹಸಿ ಮೆಣಸಿನಕಾಯಿ- 2
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಹಾಲು- 2 ಚಮಚ
- ಎಣ್ಣೆ- 1 ಚಮಚ
- ಬೆಣ್ಣೆ- 1 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
Read this – How to make the Avalakki Uthappam Recipe in Kannada – ಅವಲಕ್ಕಿ ಉತ್ತಪ ರೆಸಿಪಿ
ಮಾಡುವ ವಿಧಾನ…
- ಮೊಟ್ಟೆಯನ್ನು ಒಡೆದು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಕಲಸಬೇಕು. ಅದಕ್ಕೆ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಸಣ್ಣದಾಗಿ ಕತ್ತರಿಸಿದ ಹಸಿ ಮಣಸಿನಕಾಯಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕ ಉಪ್ಪು ಹಾಕಿ ಮತ್ತೊಮ್ಮೆ ಚೆನ್ನಾಗಿ ಕಲಸಬೇಕು.
- ಒಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದಕ್ಕೆ ಮೊಟ್ಟೆಯ ಮಿಶ್ರಣವನ್ನು ಹಾಕಿ ಕಮ್ಮಿ ಉರಿಯಲ್ಲಿ ಫ್ರೈ ಮಾಡಬೇಕು. ಮೊಟ್ಟೆ ಫ್ರೈ ಆದ ನಂತರ ಉರಿಯಿಂದ ತೆಗೆದು ಬದಿಯಲ್ಲಿಡಿ.
- ಎರಡು ಬ್ರೆಡ್ ತುಂಡುಗಳ ಒಂದೊಂದು ಬದಿಯಲ್ಲಿ ಬೆಣ್ಣೆ ಸವರಿ ಅದರ ಮಧ್ಯದಲ್ಲಿ ಮೊಟ್ಟೆ ಫ್ರೈಯನ್ನು ಇಟ್ಟು ಸ್ವಲ್ಪ ಬಿಸಿಯಾದ ತವಾ ಮೇಲೆ ಇಟ್ಟು ಕಂದು ಬಣ್ಣಕ್ಕೆ ತಿರುಗಿದಾಗ ತೆಗೆದರೆ ರುಚಿಯಾದ ಎಗ್ ಸ್ಯಾಂಡ್‌ವಿಚ್ ಸವಿಯಲು ಸಿದ್ಧ.
Subscribe for Free and Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ