Donald Trump on Op Sindoor Claim-Donald Trump: ಶೆಹಬಾಜ್ ಸಾಯುತ್ತಿದ್ದರು!
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೇಶವನ್ನುದ್ದೇಶಿಸಿ ಮಾತನಾಡಿ, ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಭಾರತ–ಪಾಕಿಸ್ತಾನ ಸಂಘರ್ಷದಲ್ಲಿ ತಾವು ಮಧ್ಯಸ್ಥಿಕೆ ವಹಿಸಿದ್ದೇನೆ ಎಂಬ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದರು.![]()
Read this : Pai Slams Pink Line Barricades-Mohan Das Pai ಮೆಟ್ರೋ ವಿರುದ್ಧ ಆಕ್ರೋಶ
ತಮ್ಮ ಸ್ಟೇಟ್ ಆಫ್ ದ ಯೂನಿಯನ್ ಭಾಷಣದಲ್ಲಿ, ವಿಶ್ವದಾದ್ಯಂತ ಎಂಟು ಯುದ್ಧಗಳನ್ನು ತಾನು ನಿಲ್ಲಿಸಿದ್ದೇನೆ ಎಂದು ಟ್ರಂಪ್ ಹೇಳಿ, ಭಾರತ ಮತ್ತು ಪಾಕಿಸ್ತಾನ ಅಣುಯುದ್ಧದ ಹಂತಕ್ಕೆ ಹೋಗುವುದನ್ನು ತಪ್ಪಿಸಿದ್ದೇನೆ ಎಂದರು.
ಇದರ ಜೊತೆಗೆ ಅಚ್ಚರಿ ಹುಟ್ಟಿಸುವ ಹೇಳಿಕೆ ನೀಡಿದ್ದು, ತಮ್ಮ ಹಸ್ತಕ್ಷೇಪ ಇರದಿದ್ದರೆ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಮೃತಪಡುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ.
ಟ್ರಂಪ್ ಅವರು ಎರಡು ದೇಶಗಳ ನಡುವೆ ಶಾಂತಿ ಸ್ಥಾಪನೆಯಲ್ಲಿ ತಾವು ಮಧ್ಯವರ್ತಿಯಾಗಿದ್ದೇನೆ ಎಂದು ಹಲವು ಬಾರಿ ಹೇಳಿದ್ದಾರೆ. ಆದರೆ, ಭಾರತವು ಈ ಹೇಳಿಕೆಯನ್ನು ದೃಢವಾಗಿ ತಳ್ಳಿಹಾಕಿದ್ದು, ಶಸ್ತ್ರಸಂಘರ್ಷ ಕಡಿಮೆಗೊಳಿಸುವ ಒಪ್ಪಂದವು ಉಭಯ ದೇಶಗಳ ಸೈನ್ಯದ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ (DGMO) ಮಟ್ಟದ ದ್ವಿಪಕ್ಷೀಯ ಮಾತುಕತೆಗಳ ಮೂಲಕವೇ ನಡೆಯಿತು ಎಂದು ಸ್ಪಷ್ಟಪಡಿಸಿದೆ.
ಕಳೆದ ವಾರ ನಡೆದ “ಬೋರ್ಡ್ ಆಫ್ ಪೀಸ್” ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಎರಡು ದೇಶಗಳ ಮೇಲೂ 200 ಶೇಕಡಾ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾಗಿ ಹೇಳಿದರು. ಹಣಕಾಸು ಒತ್ತಡದ ಕಾರಣದಿಂದಲೇ ಎರಡು ದೇಶಗಳು ಸೈನಿಕ ಕ್ರಮಗಳನ್ನು ನಿಲ್ಲಿಸಿದವು. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ, ಅಮೆರಿಕ ಭಾರತೊಂದಿಗೆ ವ್ಯಾಪಾರ ನಡೆಸುವುದಿಲ್ಲ ಎಂದು ಎಚ್ಚರಿಸಿದ್ದೇನೆ ಎಂಬುದನ್ನೂ ಹೇಳಿದ್ದಾರೆ.
Support Us 


