Dhurandhar 2: 3.5 Lakh Tickets-ಧುರಂಧರ್ 2: 3.5 ಲಕ್ಷ ಟಿಕೆಟ್
Dhurandhar 2 movie: ‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ಗಳ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲ ದಿನಗಳಾಗಿವೆ. ಭಾರಿ ಮೊತ್ತಕ್ಕೆ ಈ ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್ಗಳು ಮಾರಾಟ ಆಗುತ್ತಿವೆ. ಟಿಕೆಟ್ ಬೆಲೆ ಹೆಚ್ಚಿದ್ದರೂ ಸಹ ಅಡ್ವಾನ್ಸ್ ಬುಕಿಂಗ್ ಜೋರಾಗಿ ಆಗುತ್ತಿದ್ದು, ಈ ವರೆಗೆ ಸುಮಾರು 3.50 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ.
Read this : Shanbaug Precedes Rana Verdict-ಶಾನಭಾಗ್ ರಾಣಾ ದಯಾಮರಣ |Kannada Folks
‘ಧುರಂಧರ್ 2’ (Dhurandhar 2) ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದ್ದು, ಸಿನಿಮಾಕ್ಕೆ ಸಖತ್ ಹೈಪ್ ದೊರೆತಿದೆ. ಮಾರ್ಚ್ 18ರಂದು ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ದೇಶದ ಹಲವು ಪ್ರಮುಖ ನಗರಗಳಲ್ಲಿ ಆಯೋಜಿಸಲಾಗಿದ್ದು, ಪ್ರೀಮಿಯರ್ ಶೋ ಟಿಕೆಟ್ಗಳ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲ ದಿನಗಳಾಗಿವೆ. ಭಾರಿ ಮೊತ್ತಕ್ಕೆ ಈ ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್ಗಳು ಮಾರಾಟ ಆಗುತ್ತಿವೆ. ಟಿಕೆಟ್ ಬೆಲೆ ಹೆಚ್ಚಿದ್ದರೂ ಸಹ ಅಡ್ವಾನ್ಸ್ ಬುಕಿಂಗ್ ಜೋರಾಗಿ ಆಗುತ್ತಿದ್ದು, ಈ ವರೆಗೆ ಸುಮಾರು 3.50 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ.
ಧುರಂಧರ್ 2’ ಸಿನಿಮಾದ ಪೇಯ್ಡ್ ಪ್ರೀಮಿಯರ್ಗೆ 3.50 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರ್ಚ್ 10ರ ವೇಳೆಗೆ ಮಾರಾಟವಾಗಿದ್ದು, ಇದರ ಒಟ್ಟು ಮೌಲ್ಯ ಸುಮಾರು 20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ರಣವೀರ್ ಸಿಂಗ್ ಅವರ ವೃತ್ತಿಜೀವನದಲ್ಲೇ ಇದು ಅತ್ಯಂತ ವೇಗವಾಗಿ ಟಿಕೆಟ್ ಮಾರಾಟವಾಗುತ್ತಿರುವ ಸಿನಿಮಾ ಎಂದು ಹೇಳಲಾಗುತ್ತಿದೆ. ಪ್ರೀಮಿಯರ್ ಶೋಗೆ ಇನ್ನೂ ಒಂದು ವಾರ ಬಾಕಿ ಇದ್ದು, ಈ ಸಂಖ್ಯೆ ದುಪ್ಪಟ್ಟಾಗುವ ದಟ್ಟ ಸಾಧ್ಯತೆ ಇದೆ. ಕೇವಲ ಪೇಯ್ಡ್ ಪ್ರೀಮಿಯರ್ನಿಂದಲೇ ‘ಧುರಂಧರ್ 2’ ಸಿನಿಮಾಕ್ಕೆ 40 ರಿಂದ 50 ಕೋಟಿ ಕಲೆಕ್ಷನ್ ಆಗುವ ಸಾಧ್ಯತೆ ಇದೆ.
ಮುಂಬೈ, ದೆಹಲಿ ಬೆಂಗಳೂರು, ಹೈದರಾಬಾದ್ ಅಂಥಹ ಪ್ರಮುಖ ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್ಗಳು ಭರ್ಜರಿಯಾಗಿ ಮಾರಾಟ ಆಗುತ್ತಿವೆ. ಮುಂಬೈ, ಬೆಂಗಳೂರು ಮತ್ತು ದೆಹಲಿಯಲ್ಲಂತೂ ಟಿಕೆಟ್ ಬೆಲೆ ಗಗನಕ್ಕೇರಿವೆ. ಮುಂಬೈನಲ್ಲಿ ಗರಿಷ್ಟ ಟಿಕೆಟ್ ಬೆಲೆ 3100 ರೂಪಾಯಿಗಳಿವೆ. ಬೆಂಗಳೂರಿನಲ್ಲಿ 2200 ರೂಪಾಯಿಗಳಿವೆ. ದೆಹಲಿಯಲ್ಲಿಯೂ ಸಹ ಸರಿ ಸುಮಾರಿ ಇಷ್ಟೇ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಸಿನಿಮಾಕ್ಕೆ ಭರ್ಜರಿ ಕಲೆಕ್ಷನ್ ಆಗುತ್ತಿದೆ.
ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾದ ಮೊದಲ ಭಾಗದ ಯಶಸ್ಸಿನ ನಂತರ, ಅದರ ಮುಂದುವರಿದ ಭಾಗವಾದ ‘ಧುರಂಧರ್ 2’ ಮೇಲೆ ಅಭಿಮಾನಿಗಳಲ್ಲಿ ಭಾರಿ ಕುತೂಹಲವಿದೆ. ಇದೇ ಕಾರಣಕ್ಕೆ ಸಿನಿಮಾದ ಪೇಯ್ಡ್ ಪ್ರೀಮಿಯರ್ಗಳು ಹೌಸ್ಫುಲ್ ಆಗುತ್ತಿವೆ. ಸಿನಿಮಾದ ರಿಲೀಸ್ ದಿನವೂ ಸಹ ಸಿನಿಮಾಕ್ಕೆ ಭರ್ಜರಿ ಕಲೆಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದ್ದು, ಮೊದಲ ದಿನವೇ 100 ಕೋಟಿಗೂ ಹೆಚ್ಚಿನ ಗಳಿಕೆ ಆಗುವ ನಿರೀಕ್ಷೆ ಇದೆ.
ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾನಲ್ಲಿ ಅಕ್ಷಯ್ ಖನ್ನ, ಸಂಜಯ್ ದತ್, ಮಾಧವನ್, ಅರ್ಜುನ್ ರಾಮ್ಪಾಲ್ ಸೇರಿದಂತೆ ಹಲವು ಪ್ರಮುಖ ನಟರುಗಳು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


