Deepika Padukone’s Career Dilemma-ದೀಪಿಕಾ ಅವಕಾಶ ಕಳೆದು
ನಟಿ ದೀಪಿಕಾ ಪಡುಕೋಣೆ ಮಾತೃತ್ವದ ಕಾರಣ ವೃತ್ತಿಜೀವನದಲ್ಲಿ ಸವಾಲು ಎದುರಿಸುತ್ತಿದ್ದಾರೆ. ಮಗುವಿನ ಆರೈಕೆಗಾಗಿ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡುವ ಷರತ್ತಿನಿಂದ ‘ಕಲ್ಕಿ 2898 ಎಡಿ 2’, ‘ಸ್ಪಿರಿಟ್’ ಹಾಗೂ ಹಾಲಿವುಡ್‌ನ ‘ವೈಟ್ ಲೋಟಸ್’ ನಂತಹ ದೊಡ್ಡ ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ಈ ನಿರ್ಧಾರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ನಟಿ ದೀಪಿಕಾ ಪಡುಕೋಣೆ ಅವರು ದೊಡ್ಡ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅವರು ಹಾಕುವ ಷರತ್ತು ಎಂದರೂ ತಪ್ಪಾಗಲಿಕ್ಕಿಲ್ಲ. ಅವರು ಇತ್ತೀಚೆಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ‘ಕಲ್ಕಿ 2898 ಎಡಿ 2’ ಚಿತ್ರದಿಂದ ಹಾಗೂ ‘ಸ್ಪಿರಿಟ್’ ಚಿತ್ರದಿಂದ ಹೊರ ಹೋದರು. ಈಗ ಅವರಿಗೆ ಮತ್ತೊಂದು ಅವಕಾಶ ಕಳೆದು ಹೋಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ದೀಪಿಕಾ ಪಡುಕೋಣೆ ಅವರು ಸಿನಿಮಾದಲ್ಲಿ ನಟಿಸಲು ತಮ್ಮದೇ ಆದ ಷರತ್ತು ಹೊಂದಿದ್ದಾರೆ. ಮಗುವನ್ನು ಸಾಕುವ ಜವಾಬ್ದಾರಿ ಅವರಿಗೆ ಇರುವುದರಿಂದ ಅವರು ದಿನದಲ್ಲಿ 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದಾರೆ. ಈ ಕಾರಣದಿಂದಲೇ ಅವರು ‘ಕಲ್ಕಿ 2898 ಎಡಿ’ ಹಾಗೂ ‘ಸ್ಪಿರಿಟ್ ಚಿತ್ರದಿಂದ ಹೊರ ಹೋದರು. ಅವರಿಗೆ ಈ ಮಧ್ಯೆ ಒಂದು ಹಾಲಿವುಡ್ ಆಫರ್ ಕೂಡ ಕೈ ತಪ್ಪಿತ್ತು.
ಅವರಿಗೆ ಇಂಗ್ಲಿಷ್ನ ಕಾಮಿಡಿ ಸೀರಿಸ್ ‘ವೈಟ್ ಲೋಟಸ್’ ಆಫರ್ ಬಂದಿತ್ತು. ಮಗು ಜನಿಸಿದ ತಕ್ಷಣವೇ ಈ ಆಫರ್ ಬಂದಿತ್ತು. ಹೀಗಾಗಿ, ಅವರಿಗೆ ಆಡಿಷನ್ಗೆ ತೆರಳು ಸಾಧ್ಯವಾಗಿಲ್ಲ. ಅಮೆರಿಕದ ಪ್ರಸಿದ್ಧ ಬ್ಲ್ಯಾಕ್ ಕಾಮಿಡಿ ಸರಣಿ ಇದಾಗಿದೆ. ಮೈಕ್ ವೈಟ್ ಇದನ್ನು ನಿರ್ದೇಶನ ಮಾಡುತ್ತಿದ್ದಾರೆ.
ದೀಪಿಕಾ ಪಡುಕೋಣೆ ಮಗು ಜನಿಸುವುದಕ್ಕೂ ಮೊದಲು ಯಾವುದೇ ಷರತ್ತು ಇಲ್ಲದೆ ಕೆಲಸ ಮಾಡುತ್ತಾ ಸಾಗುತ್ತಿದ್ದರು. ಅವರು ಈಗ ಅಲ್ಲು ಅರ್ಜುನ್ ಹಾಗೂ ಅಟ್ಲಿ ಸಿನಿಮಾಗೆ ನಾಯಕಿ ಆಗಿದ್ದಾರೆ. ಪ್ಲ್ಯಾನ್ ಪ್ರಕಾರವೇ ಎಲ್ಲವೂ ನಡೆದರೆ ದೀಪಿಕಾ ಅವರು ಈ ಚಿತ್ರದ ಮೂಲಕ ದೊಡ್ಡ ಕಂಬ್ಯಾಕ್ ಮಾಡಲಿದ್ದಾರೆ. ಅವರು ದೊಡ್ಡ ಬ್ರೇಕ್ ತೆಗದುಕೊಂಡಿದ್ದು, ಅವರಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಎಲ್ಲ ನಟಿಯರ ಕರಿಯರ್ನಲ್ಲೂ ಏರಿಳಿತ ಸಾಮಾನ್ಯ. ಅದೇ ರೀತಿ ದೀಪಿಕಾ ಪಡುಕೋಣೆ ಜೀವನದಲ್ಲೂ ಬಂದಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


