Cubbon Park Blooms Bright – ಕಬ್ಬನ್ ಪಾರ್ಕ್

Read this-Munirathna says dk shivakumar has disguised itself as hinduism to scare cm congress
ಕಬ್ಬನ್ ಪಾರ್ಕ್‌ನಲ್ಲಿ 10 ವರ್ಷಗಳ ಹಿಂದೆ ಕೈಬಿಟ್ಟಿದ್ದ ಪುಷ್ಪ ಪ್ರದರ್ಶನ ಇದೀಗ ಮತ್ತೆ ಆರಂಭವಾಗಿದೆ.ಪುಷ್ಪ ಪ್ರದರ್ಶನ ನ.27ರಿಂದ ಆರಂಭವಾಗಿದ್ದು. ಡಿ.7ರವರೆಗೆ ಇರಲಿದೆ. ಇದರಂತೆ ಒಟ್ಟು 11 ದಿನಗಳ ಕಾಲ ಪುಷ್ಪ ಪ್ರದರ್ಶನ ನಡೆಯಲಿದೆ.ಈ ಫಲಪುಷ್ಪ ಪ್ರದರ್ಶನಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಗುರುವಾರ ಚಾಲನೆ ನೀಡಿದರು.
ಈ ವೇಳೆ ಮಾಡತನಾಡಿದ ಅವರು. ಸಾವಯವ ತ್ಯಾಜ್ಯವನ್ನು ಮರುಬಳಕೆ ಮಾಡಿ. ಫಲ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿರುವ ಪುಷ್ಪಗಳನ್ನು ತ್ಯಾಜ್ಯವಾಗಿಸದೇ ಅವುಗಳನ್ನು ಒಣಗಿಸಿ ಅಥವಾ ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸಬೇಕೆಂದು ಹೇಳಿದರು.
ತೋಟಗಾರಿಕೆ ಇಲಾಖೆಯು ವಿಶೇಷವಾಗಿ ಮಕ್ಕಳಿಗಾಗಿ ಹೂವಿನ ಪ್ರದರ್ಶನವನ್ನು ಆಯೋಜಿಸುತ್ತಿದೆ. ಪ್ರತಿಯೊಬ್ಬರೂ ಈ ಹೂವಿನ ಪ್ರದರ್ಶನದಿಂದ ಅಗತ್ಯವಾದ ಪಾಠವನ್ನು ಕಲಿಯಬೇಕು ಮತ್ತು ಅನುಸರಿಸಬೇಕು. ನಮ್ಮ ಜೀವನಶೈಲಿ ನೈಸರ್ಗಿಕವಾಗಿ ನಡೆಸಿರೆ, ಅದು ಎಲ್ಲರಿಗೂ ಒಳ್ಳೆಯದು. ಈ ಪುಷ್ಪ ಪ್ರದರ್ಶನಕ್ಕೆ ಎಲ್ಲರೂ ಭೇಟಿ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆಂದು ತಿಳಿಸಿದರು.
Read this-High Court Nod for Shanth Kumar – ಹೈಕೋರ್ಟ್ ಅನುಮತಿ
ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ‘ಹೂಗಳ ಹಬ್ಬ-2025, ಕಲೆ ಸಂಸ್ಕೃತಿಯ ಸಮಾಗಮ’ದಲ್ಲಿ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) 25 ಕಿರು ಆಹಾರ ಸಂಸ್ಕರಣಾ ಮಳಿಗೆಗಳನ್ನು ತೆರೆದಿದೆ.ಫಲಪುಷ್ಪ ಪ್ರದರ್ಶನಕ್ಕೆ 20ರಿಂದ 25 ಸಾವಿರ ಹೂವು ಕುಂಡಗಳ ಬಳಕೆ ಮಾಡಲಾಗಿದೆ. ಕಬ್ಬನ್ ಉದ್ಯಾನವನದ ಬ್ಯಾಂಡ್ ಸ್ಟ್ಯಾಂಡ್, ಬಾಲಭವನ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ತನಕ ವೀಕ್ಷಣೆಗೆ ಅವಕಾಶ ಇರಲಿದೆ. ವಯಸ್ಕರಿಗೆ 30 ರೂ. ಹಾಗೂ ಮಕ್ಕಳಿಗೆ 10 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಸಮವಸ್ತ್ರ ಧರಿಸಿದ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ.ಕಬ್ಬನ್ ಪಾರ್ಕ್‌ನಲ್ಲಿ ಪುಷ್ಪ ಪ್ರದರ್ಶದಲ್ಲಿ ಕೇವಲ ಹೂವುಗಳಲ್ಲದೆ, ಈ ಬಾರಿ ಪ್ಯಾರಾಚೂಟ್ ರೆಜಿಮೆಂಟ್ ಟ್ರೈನಿಂಗ್ ಸೆಂಟರ್ ವತಿಯಿಂದ ಆಯೋಜಿಸಲಾಗಿರುವ ಆರ್ಮಿ ರೈಫಲ್ಸ್ ಹಾಗೂ ಶಸ್ತ್ರಾಸ್ತ್ರ ಪ್ರದರ್ಶನವು ಹೂವಿನ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.
Read this-Talks with US to prevent atrocities on Indians: Jaishankar
ಪ್ರದರ್ಶನಕ್ಕೆ ಸುಮಾರು 20 ಸಾವಿರ ಹೂಗಳನ್ನು ಬಳಕೆ ಮಾಡಲಾಗಿದೆ. ಹೂವುಗಳಿಂದ ಹಂಪಿ ರಥ, ಟ್ರ್ಯಾಕ್ಟರ್, ಜಿಂಕೆ, ಕೋಳಿ, ಮೀನು, ಚಿಟ್ಟೆ, ಕರ್ನಾಟಕ ಭೂಪಟಗಳ ಕಲಾಕೃತಿ ರಚಿಸಲಾಗಿದೆ. ಸೇಬು ಸೇರಿದಂತ ನಾನಾ ಹಣ್ಣುಗಳು ಹೂವಿನಿಂದ ಮೈದಳೆದಿವೆ.ವಿವಿಧ ತರಕಾರಿಯಿಂದ ತಯಾರಿಸಿದ ಆನೆ ಕಲಾಕೃತಿಗಳು ನೋಡುಗರ ಗಮನಸೆಳೆಯುಧಿತ್ತಿವೆ. ಪ್ಯಾರಾಚೂಟ್ ರೆಜಿಮೆಂಟ್ ಟ್ರೈನಿಂಗ್ ಸೆಂಟರ್ ವತಿಯಿಂದ ಆಯೋಜಿಸಿರುವ ಆರ್ಮಿ ರೈಫಲ್ಸ್ ಹಾಗೂ ಶಸ್ತಾ್ರಸ್ತ್ರ ಪ್ರದರ್ಶನವು ಹೂವಿನ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.
Support Us